Trump

ಭಾರತ ಭೇಟಿಗೆ ಉತ್ಸುಕನಾಗಿದ್ದು, ಇನ್ನು ಕೆಲವೇ ಸಮಯದಲ್ಲಿ ಎಲ್ಲರನ್ನೂ ಭೇಟಿಯಾಗುತ್ತೇನೆ: ಹಿಂದಿಯಲ್ಲಿ ಟ್ರಂಪ್ ಟ್ವೀಟ್
ಅಮೆರಿಕಾ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಳ್ಳುತ್ತಿರುವ ಡೊನಾಲ್ಡ್ ಟ್ರಂಪ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಭಾರತ ಭೇಟಿಗೆ ಉತ್ಸುಕನಾಗಿದ್ದೇನೆ. ಇನ್ನು ಕೆಲವೇ ಸಮಯದಲ್ಲಿ ಎಲ್ಲರನ್ನು ಭೇಟಿ ಮಾಡಲಿದ್ದೇನೆಂದು ಹೇಳಿದ್ದಾರೆ.

ತಮ್ಮ ಚುನಾವಣಾ ಪ್ರಚಾರಕ್ಕೆ ಟ್ರಂಪ್ ಭಾರತದ ಮಣ್ಣನ್ನು ಬಳಸಿಕೊಳ್ಳುತ್ತಿದ್ದಾರೆ: ಕಾಂಗ್ರೆಸ್
ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೋಟಿಗಟ್ಟಲೆ ಹಣವನ್ನು ವ್ಯಯಿಸುತ್ತಿದ್ದಾರೆ. ಆದರೆ, ಅಮೆರಿಕಾ ಅಧ್ಯಕ್ಷರು ತಮ್ಮ ಚುನಾವಣಾ ಪ್ರಚಾರಕ್ಕೆ ಭಾರತದ ಮಣ್ಣನ್ನು ಬಳಸಿಕೊಳ್ಳುತ್ತಿದ್ದಾರೆಂದು ಕಾಂಗ್ರೆಸ್ ಹೇಳಿದೆ.

ಬಾಹುಬಲಿ ಅವತಾರದಲ್ಲಿ ಟ್ರಂಪ್: ಭಾರತ ಭೇಟಿಗೆ ಉತ್ಸುಕತೆ, ಎಡಿಟೆಡ್ ವಿಡಿಯೋ ಹಂಚಿಕೊಂಡ ಅಮೆರಿಕಾ ಅಧ್ಯಕ್ಷ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಲು ಇನ್ನು ಕೇವಲ ಒಂದು ದಿನ ಮಾತ್ರ ಬಾಕಿಯಿದ್ದು, ಈ ಬಾರಿಯ ಟ್ರಂಪ್ ಭೇಟಿ ಉಭಯ ರಾಷ್ಟ್ರಗಳ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಗೊಳ್ಳುವ ನಿರೀಕ್ಷೆಗಳು ಮತ್ತಷ್ಟು ಬಲಗೊಳ್ಳುವಂತೆ ಮಾಡಿದೆ.

ನನ್ನ ಸ್ವಾಗತಕ್ಕೆ 1 ಕೋಟಿ ಜನ ಆಗಮಿಸುತ್ತಿದ್ದಾರೆ: ಭಾರತ ಭೇಟಿ ಕುರಿತು ಟ್ರಂಪ್
ಚೊಚ್ಚಲ ಭಾರತ ಪ್ರವಾಸ ಕೈಗೊಳ್ಳುತ್ತಿರುವ ತಮಗೆ ಅದ್ಧೂರಿ ಸ್ವಾಗತ ಕೋರಲು ಅಹಮದಾಬಾದ್'ನಲ್ಲಿ 1 ಕೋಟಿ ಜನರು ಬರಲಿದ್ದಾರೆಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ಫೆ.24ಕ್ಕೆ ಭಾರತಕ್ಕೆ ಟ್ರಂಪ್: ಹೆಚ್1ಬಿ ವೀಸಾ ಸೇರಿ ಹಲವು ವಿಚಾರಗಳ ಕುರಿತು ಮಹತ್ವದ ಮಾತುಕತೆ
ಫೆ.24 ಮತ್ತು ಫೆ.25ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಆಗಮಿಸುತ್ತಿದ್ದು, ಈ ವೇಳೆ ಹೆಚ್1ಬಿ ವೀಸಾ, ನಾಗರಿಕ ಪರಮಾಣು ಸಹಕಾರ, ಬಾಹ್ಯಾಕಾಶ ಸಹಕಾರ ಸೇರಿದಂತೆ ಹಲವು ವಿಚಾರಗಳ ಕುರಿತು ಭಾರತ ಹಾಗೂ ಅಮೆರಿಕಾ ರಾಷ್ಟ್ರಗಳ ನಡುವೆ ಮಹತ್ವದ ಮಾತುಕತೆಗಳು ನಡೆಯುವ ಸಾಧ್ಯತೆಗಳಿವೆ.

ಟ್ರಂಪ್ ಖುಲಾಸೆ ಪ್ರಜಾಪ್ರಭುತ್ದ ಕರಾಳ ದಿನ: ಡೆಮಾಕ್ರಟಿಕ್ ಟೀಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ಪಕ್ಷ ಮಂಡಿಸಿದ್ದ ‘ವಾಗ್ದಂಡನೆ’ಗೆ ಸೋಲಾಗಿದ್ದು, ಟ್ರಂಪ್ ಅವರನ್ನು ದೋಷಾರೋಪದಿಂದ ಖುಲಾಸೆಗೊಳಿಸುವ ಸಂಬಂಧ ರಿಪಬ್ಲಿಕನ್ ಸೆನೆಟ್ ಮತ ಚಲಾಯಿಸಿದೆ.

ಬರ್ತ್ ಟೂರಿಸಂಗೆ ಕಡಿವಾಣ ಹಾಕಿದ ಅಮೆರಿಕಾ: ಹೊಸ ನಿಯಮ ಜಾರಿ ಮಾಡಿ ಟ್ರಂಪ್
ಹೆರಿಗೆ ಮಾಡಿಸಿಕೊಳ್ಳುವ ಉದ್ದೇಶದಿಂದ ಅಮೆರಿಕಾ ರಾಷ್ಟ್ರಕ್ಕೆ ಪ್ರಯಾಣ ಬೆಳೆಸುವ ಗರ್ಭಿಣಿಯರಿಗೆ ಬಿ-1 ಹಾಗೂ ಬಿ-2 ವೀಸಾ ನಿರಾಕರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರ ಕೈಗೊಂಡಿದ್ದಾರೆ. ಬರ್ತ್ ಟೂರಿಸಂ ಎಂದೇ ಅಮೆರಿಕಾದಲ್ಲಿ ಕರೆಯಲಾಗುವ ಈ ವ್ಯವಸ್ಥೆಗೆ ಬ್ರೇಕ್ ಹಾಕುವ ಟ್ರಂಪ್ ನಿಯಮ ಶುಕ್ರವಾರದಿಂದಲೇ ಜಾರಿಗೆ ಬಂದಿದೆ.

ಹೌಡಿ ಮೋದಿ ರೀತಿ ಗುಜರಾತ್ ನಲ್ಲಿ ಹೌಡಿ ಟ್ರಂಪ್?
ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವರ್ಷ ಹೂಸ್ಟನ್ ನಲ್ಲಿ ನಡೆದಿದ್ದ ಹೌಡಿ ಮೋದಿ ರೀತಿಯದ್ದೇ ಸಮಾವೇಶವೊಂದನ್ನು ಗುಜರಾತ್ ನಲ್ಲಿ ಆಯೋಜಿಸಲು ಉತ್ಸುಕರಾಗಿದ್ದಾರೆಂದು ವರದಿಗಳು ತಿಳಿಸಿವೆ.

ಕಾಶ್ಮೀರ ವಿವಾದ ಅಂತ್ಯ ಕಾಣದ ಹೊರತು ಭಾರತದೊಂದಿಗೆ ಶಾಂತಿಯುತ ಮಾತುಕತೆ ಸಾಧ್ಯವಿಲ್ಲ: ಪಾಕಿಸ್ತಾನ
ಕಾಶ್ಮೀರ ವಿವಾದ ಅಂತ್ಯ ಕಾಣದ ಹೊರತು ಭಾರತದೊಂದಿಗೆ ಯಾವುದೇ ಕಾರಣಕ್ಕೂ ಶಾಂತಿಯುತ ಮಾತುಕತೆ ಸಾಧ್ಯವಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಶಿ ಹೇಳಿದ್ದಾರೆ.

