ಬಾಹುಬಲಿ ಅವತಾರದಲ್ಲಿ ಟ್ರಂಪ್: ಭಾರತ ಭೇಟಿಗೆ ಉತ್ಸುಕತೆ, ಎಡಿಟೆಡ್ ವಿಡಿಯೋ ಹಂಚಿಕೊಂಡ ಅಮೆರಿಕಾ ಅಧ್ಯಕ್ಷ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಲು ಇನ್ನು ಕೇವಲ ಒಂದು ದಿನ ಮಾತ್ರ ಬಾಕಿಯಿದ್ದು, ಈ ಬಾರಿಯ ಟ್ರಂಪ್ ಭೇಟಿ ಉಭಯ ರಾಷ್ಟ್ರಗಳ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಗೊಳ್ಳುವ ನಿರೀಕ್ಷೆಗಳು ಮತ್ತಷ್ಟು ಬಲಗೊಳ್ಳುವಂತೆ ಮಾಡಿದೆ.

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಲು ಇನ್ನು ಕೇವಲ ಒಂದು ದಿನ ಮಾತ್ರ ಬಾಕಿಯಿದ್ದು, ಈ ಬಾರಿಯ ಟ್ರಂಪ್ ಭೇಟಿ ಉಭಯ ರಾಷ್ಟ್ರಗಳ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಗೊಳ್ಳುವ ನಿರೀಕ್ಷೆಗಳು ಮತ್ತಷ್ಟು ಬಲಗೊಳ್ಳುವಂತೆ ಮಾಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಟ್ರಂಪ್ ಅವರು ವಿಡಿಯೋವೊಂದರನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರತದ ಶ್ರೇಷ್ಠ ಸ್ನೇಹಿತರೊಂದಿಗೆ ಸದಾ ಜೊತೆಗಿರಲು ಬಯಸುತ್ತೇನೆಂದು ಬರೆದುಕೊಂಡಿದ್ದಾರೆ.
SOl ಎಂಬ ವೆರಿಫೈ ಅಲ್ಲದ ಟ್ವಿಟರ್ ನಲ್ಲಿ ಬಾಹುಬಲಿ ಸಿನಿಮಾದ ಕೆಲವು ದೃಶ್ಯಗಳನ್ನು ಎಡಿದ್ ಮಾಡಿದ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿತ್ತು. ವಿಡಿಯೋದಲ್ಲಿ ಬಾಹುಬಲಿ ಚಿತ್ರದ ನಾಯಕ ಪ್ರಭಾಸ್ ಮುಖಕ್ಕೆ ಟ್ರಂಪ್ ಮುಖವನ್ನು ಜೋಡಿಸಲಾಗಿದ್ದು, ವಿಡಿಯೋದಲ್ಲಿ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ಕೂಡ ಇರುವುದು ಕಂಡು ಬಂದಿತ್ತು. ಅಲಲದೆ, ದಾನದಲ್ಲಿ ತೊಡಗಿರುವ ಪ್ರಧಾನಿ ಮೋದಿ ಹಾಗೂ ಅವರ ಪತ್ನಿ ಜಶೋಧಾ ಬೆನ್ ಕೂಡ ಕಂಡು ಬಂದಿದ್ದರು.
ಈ ಟ್ವೀಟನ್ನು ಟ್ರಂಪ್ ಅವರು ಶೇರ್ ಮಾಡಿದ್ದು, ಭಾರತದ ಶ್ರೇಷ್ಠ ಸ್ನೇಹಿತರೊಂದಿಗೆ ಸದಾ ಜೊತೆಗಿರಲು ಬಯಸುತ್ತೇನೆಂದು ಬರೆದುಕೊಂಡಿದ್ದಾರೆ. ಟ್ರಂಪ್ ಅವರ ಈ ಟ್ಟೀಟ್'ಗೆ 54 ಸಾವಿರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 15.1 ಸಾವಿರ ಮಂದಿ ರೀಟ್ವೀಟ್ ಮಾಡಿಕೊಂಡಿದ್ದಾರೆ. ಇದಕ್ಕೆ 6.7 ಸಾವಿರ ಪ್ರತಿಕ್ರಿಯೆಗಳೂ ಬಂದಿವೆ. ಇನ್ನು ಕೆಲವರು ಎಡಿಟ್ ಮಾಡಲಾದ ವಿಡಿಯೋ ಇರುವ ಟ್ವೀಟ್ ನ್ನು ರೀಟ್ವೀಟ್ ಮಾಡಿಕೊಂಡಿದ್ದಕ್ಕೆ ಆಕ್ಷೇಪ ಹಾಗೂ ವ್ಯಂಗ್ಯ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


