traffic

ಮದುವೆಯಾದ ಮರುದಿನವೇ ಹಳೆ ಲವ್ವಿಡವ್ವಿ ಬಯಲು; ಬೆಂಗಳೂರು ಟ್ರಾಫಿಕ್ ನಲ್ಲೇ ಪತ್ನಿ ಬಿಟ್ಟು ಪತಿ ಪರಾರಿ!
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನವವಿವಾಹಿತ ವ್ಯಕ್ತಿಯೊಬ್ಬ ಟ್ರಾಫಿಕ್‌ನಲ್ಲೇ ತನ್ನ ಪತ್ನಿ ಮತ್ತು ಕಾರು ಬಿಟ್ಟು ಓಡಿ ಹೋದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಸಂಚಾರ ದಟ್ಟಣೆ: ಬೆಂಗಳೂರಿನಲ್ಲಿ ಸಿಬಿಎಸ್ಇ ಪರೀಕ್ಷಾ ಸಮಯ ಬದಲಾವಣೆಗೆ ಆಗ್ರಹ
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಅಧ್ಯಯನ ಮತ್ತು ಪರೀಕ್ಷೆಯ ಒತ್ತಡದ ಜೊತೆಗೆ, ಕೈಯಲ್ಲೊಂದು ಹೊಸ ಸವಾಲು ಇದೆ. ಅದುವೇ ಬೆಂಗಳೂರಿನ ಟ್ರಾಫಿಕ್ ಜಾಮ್.

ಇಂದು ಬೆಂಗಳೂರಿಗೆ ಕೇಂದ್ರ ಸಚಿವ ಅಮಿತ್ ಶಾ ಆಗಮನ: ಈ ರಸ್ತೆಗಳಲ್ಲಿ ಸಂಜೆ ಹೊತ್ತು ಸಂಚಾರ ತಪ್ಪಿಸಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಶುಕ್ರವಾರ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇಂದು ದೇವನಹಳ್ಳಿಯ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

ಏರೋ ಇಂಡಿಯಾ 2023: ಬೆಂಗಳೂರಿನಲ್ಲಿ ಟ್ರಾಫಿಕ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಸಾವಿರಾರು ಜನರು
ದ್ವೈವಾರ್ಷಿಕ ಏರೋ ಇಂಡಿಯಾ 2023ರ ಪೂರ್ವಾಭ್ಯಾಸದಿಂದಾಗಿ ಶನಿವಾರ ಬೆಳಗ್ಗೆ ಬಳ್ಳಾರಿ ರಸ್ತೆಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ಬೆಂಗಳೂರಿಗೆ ಸಂಕಟ ಎದುರಾಯಿತು. ಇದು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಯೋಜಿಸುವವರ ಮತ್ತು ಇತರೆ ಕಾರ್ಯಗಳಿಗೆ ತೆರಳುತ್ತಿದ್ದವರ ಯೋಜನೆಗಳನ್ನೆಲ್ಲ ಧ್ವಂಸಗೊಳಿಸಿತು.

ಬೆಂಗಳೂರಿನ ಟ್ರಾಫಿಕ್ಗೆ ಮತ್ತೊಂದು ಬಲಿ: ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಒಂದೂವರೆ ವರ್ಷದ ಕಂದಮ್ಮ ಸಾವು!
ಅಪಘಾತದಲ್ಲಿ ಗಾಯಗೊಂಡಿದ್ದ ಒಂದೂವರೆ ವರ್ಷದ ಮಗು ಹುದಾ ಕೌಸರ್ ನೆಲಮಂಗಲ ಬಳಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಲಾಗದೆ ಚಿಕಿತ್ಸೆ ಪಡೆಯಲಾಗದೆ ಮೃತಪಟ್ಟಿದೆ.

ಪ್ರಧಾನಿ ರೋಡ್‌ಶೋ: ಕೇಂದ್ರ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಸಂಚಾರ ದಟ್ಟಣೆ ಸಾಧ್ಯತೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ರೋಡ್ ಶೋ ದೃಷ್ಟಿಯಿಂದ ಹಲವಾರು ರಸ್ತೆಗಳು ಗಂಟೆಗಳ ಕಾಲ ಮುಚ್ಚಲ್ಪಟ್ಟಿರುವುದರಿಂದ ಸೋಮವಾರ ಕೇಂದ್ರ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.

ಸಂಚಾರ ಬಂದ್ ಮಾಡಿ, ಮೆಟ್ರೋ ನಿರ್ಮಾಣ ಕಾರ್ಯವನ್ನು ರಾತ್ರಿ ವೇಳೆ ಮಾಡಬೇಕು: ತಜ್ಞರು
ನಮ್ಮ ಮೆಟ್ರೊ ಕಾಮಗಾರಿಯಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿರುವ ತಜ್ಞರು ಮತ್ತು ಸಿವಿಲ್ ಎಂಜಿನಿಯರಿಂಗ್ ಸಲಹೆಗಾರರು ಸಂಚಾರ ಬಂದ್ ಮಾಡಿ, ಮೆಟ್ರೋ ನಿರ್ಮಾಣ ಕಾರ್ಯವನ್ನು ರಾತ್ರಿ ಸಮಯದಲ್ಲಿ ಮಾಡಬೇಕೆಂದು ಶಿಫಾರಸು ಮಾಡಿದ್ದಾರೆ.

ದೋಷಪೂರಿತ ನಂಬರ್ ಪ್ಲೇಟ್: 1.12 ಕೋಟಿ ರೂ. ದಂಡ ಸಂಗ್ರಹಿಸಿದ ಪೊಲೀಸರು
ಅನಧಿಕೃತ ಹೆಸರುಗಳು, ಲಾಂಛನಗಳು, ಸಂಘಗಳ ಹೆಸರುಗಳು ಮತ್ತು ಇತರೆ ದೋಷಪೂರಿತ ನಂಬರ್ ಪ್ಲೇಟ್‌ಗಳನ್ನು ಹಾಕಿಕೊಂಡಿದ್ದ ವಾಹನಗಳ ವಿರುದ್ಧ ಕರ್ನಾಟಕ ಸಾರಿಗೆ ಇಲಾಖೆಯು ಡಿಸೆಂಬರ್ 2019 ರಿಂದ ಡಿಸೆಂಬರ್ 2022 ರವರೆಗೆ ನಡೆಸಿರುವ ಕಾರ್ಯಾಚರಣೆಯಲ್ಲಿ ವಾಹನ ಮಾಲೀಕರಿಂದ 1.12 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು: ವಾರಾಂತ್ಯದಲ್ಲಿ ದಿಢೀರ್ ಭೇಟಿ ನೀಡಿ ಸಂಚಾರ ಪರಿಸ್ಥಿತಿ ಪರಿಶೀಲಿಸಲು ವಿಶೇಷ ಆಯುಕ್ತರು ಮುಂದು!
ಟ್ರಾಫಿಕ್ ಜಾಮ್‌ಗೆ ಕಾರಣವಾಗುವ ರಸ್ತೆಗಳಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ಅಥವಾ ಅಡ್ಡಾದಿಡ್ಡಿಯಾಗಿ ನಿಲ್ಲಿಸದಂತೆ ಸಂಚಾರ ಪೊಲೀಸರಿಗೆ ವಿಶೇಷ ಸೂಚನೆ ನೀಡಿರುವ ವಿಶೇಷ ಆಯುಕ್ತ ಸಲೀಂ ಅವರು, ಸಂಚಾರ ಪರಿಸ್ಥಿತಿ ಪರಿಶೀಲಿಸಲು ವಾರಾಂತ್ಯದಲ್ಲಿ ಅನಿರೀಕ್ಷಿತ ಭೇಟಿ ನೀಡಲು ಮುಂದಾಗಿದ್ದಾರೆ.

