ದೇಶ

ಪ್ರಧಾನಿ ರೋಡ್‌ಶೋ: ಕೇಂದ್ರ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಸಂಚಾರ ದಟ್ಟಣೆ ಸಾಧ್ಯತೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ರೋಡ್‌ ಶೋ ದೃಷ್ಟಿಯಿಂದ ಹಲವಾರು ರಸ್ತೆಗಳು ಗಂಟೆಗಳ ಕಾಲ ಮುಚ್ಚಲ್ಪಟ್ಟಿರುವುದರಿಂದ ಸೋಮವಾರ ಕೇಂದ್ರ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.

ಪ್ರಧಾನಿ ರೋಡ್‌ಶೋ: ಕೇಂದ್ರ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಸಂಚಾರ ದಟ್ಟಣೆ ಸಾಧ್ಯತೆ
ಪ್ರಾತಿನಿಧಿಕ ಚಿತ್ರ
Published On :

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ರೋಡ್‌ ಶೋ ದೃಷ್ಟಿಯಿಂದ ಹಲವಾರು ರಸ್ತೆಗಳು ಗಂಟೆಗಳ ಕಾಲ ಮುಚ್ಚಲ್ಪಟ್ಟಿರುವುದರಿಂದ ಸೋಮವಾರ ಕೇಂದ್ರ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.

ಸಂಸದ್ ಮಾರ್ಗದಲ್ಲಿರುವ ಪಟೇಲ್ ಚೌಕ್ ವೃತ್ತದಿಂದ ಜೈ ಸಿಂಗ್ ರಸ್ತೆ ಜಂಕ್ಷನ್‌ವರೆಗಿನ ರೋಡ್‌ಶೋ ಹೆಚ್ಚಿನ ಜನರನ್ನು ಸೆಳೆಯುವ ನಿರೀಕ್ಷೆಯಿದೆ ಮತ್ತು ಅದು ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ.

ರೋಡ್ ಶೋ ಮಾರ್ಗದ ಸುತ್ತಮುತ್ತ ಸುಗಮ ಸಂಚಾರ ನಿರ್ವಹಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಅಶೋಕ ರಸ್ತೆ (ವಿಂಡ್ಸರ್ ಪ್ಲೇಸ್‌ನಿಂದ ಜಿಪಿಒಗೆ, ಎರಡೂ ಕ್ಯಾರೇಜ್‌ವೇಗಳು), ಜೈ ಸಿಂಗ್ ರಸ್ತೆ, ಸಂಸದ್ ಮಾರ್ಗ, ಟಾಲ್‌ಸ್ಟಾಯ್ ರಸ್ತೆ (ಜನಪಥ್‌ನಿಂದ ಸಂಸದ್ ಮಾರ್ಗ್), ರಫಿ ಮಾರ್ಗ (ರೈಲ್ ಭವನ ವೃತ್ತದಿಂದ ಸನ್ಸದ್ ಮಾರ್ಗ್), ಜಂತರ್ ಮಂತರ್ ರಸ್ತೆ, ಇಮ್ತಿಯಾಜ್ ಖಾನ್ ಮಾರ್ಗ ಮತ್ತು ಬಾಂಗ್ಲಾ ಸಾಹಿಬ್ ಲೇನ್ ಮಧ್ಯಾಹ್ನ 2.30 ರಿಂದ ಸಂಜೆ 5 ರವರೆಗೆ ಮುಚ್ಚಿರುತ್ತದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ರೋಡ್‌ಶೋ ಸಮಯದಲ್ಲಿ, ಬಾಬಾ ಖರಕ್ ಸಿಂಗ್ ರಸ್ತೆ, ಔಟರ್ ಸರ್ಕಲ್ ಕನ್ನಾಟ್ ಪ್ಲೇಸ್, ಪಾರ್ಕ್ ಸ್ಟ್ರೀಟ್/ಶಂಕರ್ ರಸ್ತೆ, ಮಿಂಟೋ ರಸ್ತೆ, ಮಂದಿರ ಮಾರ್ಗ, ಬರಾಖಂಭಾ ರಸ್ತೆ, ಪಂಚಕುಯಿನ್ ರಸ್ತೆ, ರೈಸಿನಾ ರಸ್ತೆ, ಟಾಲ್‌ಸ್ಟಾಯ್ ರಸ್ತೆ, ಜನಪಥ್, ಫಿರೋಜ್‌ಶಾ ರಸ್ತೆ, ರಫಿ ಮಾರ್ಗ (ಸುನ್ಹೇರಿ ಮಸೀದಿಯಿಂದ ರೈಲ್ ಭವನ), ರಾಣಿ ಝಾನ್ಸಿ ರಸ್ತೆ, ಡಿಬಿಜಿ ರಸ್ತೆ, ಚೆಮ್ಸ್‌ಫೋರ್ಡ್ ರಸ್ತೆ, ಭಾಯಿ ವೀರ್ ಸಿಂಗ್ ಮಾರ್ಗ, ಡಿಡಿಯು ಮಾರ್ಗ, ರಂಜಿತ್ ಸಿಂಗ್ ಫ್ಲೈಓವರ್, ಟಾಲ್ಕಟೋರಾ ರಸ್ತೆ ಮತ್ತು ಪಂಡಿತ್ ಪಂತ್ ಮಾರ್ಗದಲ್ಲಿ ಟ್ರಾಫಿಕ್ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ನವದೆಹಲಿ ರೈಲು ನಿಲ್ದಾಣ, ಹಳೆ ದೆಹಲಿ ರೈಲ್ವೆ, ನಿಜಾಮುದ್ದೀನ್ ರೈಲು ನಿಲ್ದಾಣ, ಐಎಸ್‌ಬಿಟಿ ಮತ್ತು ಐಜಿಐ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ಮಾರ್ಗದಲ್ಲಿ ಉಂಟಾಗುವ ಸಂಭವನೀಯ ವಿಳಂಬದಿಂದ ಪಾರಾಗಲು ನಿಗದಿತ ಸಮಯಕ್ಕೂ ಮೊದಲೇ ಹೊರಡಲು ಸೂಚಿಸಲಾಗಿದೆ.

ರಸ್ತೆಗಳ ದಟ್ಟಣೆಯನ್ನು ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಜನರನ್ನು ಟ್ರಾಫಿಕ್ ಪೊಲೀಸರು ಒತ್ತಾಯಿಸಿದ್ದಾರೆ ಮತ್ತು ಪ್ರಯಾಣಿಕರು ತಮ್ಮ ವಾಹನಗಳನ್ನು ಗೊತ್ತುಪಡಿಸಿದ ಪಾರ್ಕಿಂಗ್ ಸ್ಥಳಗಳಲ್ಲಿ ಮಾತ್ರ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.

ರಸ್ತೆ ಬದಿ ವಾಹನ ನಿಲುಗಡೆ ಮಾಡುವುದನ್ನು ತಪ್ಪಿಸಿ ಏಕೆಂದರೆ, ಇದು ಸಾಮಾನ್ಯ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಅನುಮಾನಾಸ್ಪದ ಸಂದರ್ಭಗಳಲ್ಲಿ ಯಾವುದೇ ಅಸಾಮಾನ್ಯ, ಅಪರಿಚಿತ ವಸ್ತು ಅಥವಾ ವ್ಯಕ್ತಿಯನ್ನು ಗಮನಿಸಿದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.