Tokyo

ಟೊಕಿಯೋ ಒಲಿಂಪಿಕ್ಸ್ 2020ಕ್ಕೆ ವ್ಯವಹಾರಿಕ ಹೊಡೆತ, ಜಾಹೀರಾತು ನೀಡದಿರಲು ಟೊಯೋಟಾ ನಿರ್ಧಾರ
ಒಲಿಂಪಿಕ್ಸ್‌ಗೆ ಸಂಬಂಧಿತ ಟಿವಿ ಜಾಹೀರಾತುಗಳನ್ನು ನೀಡುತ್ತಿಲ್ಲ ಎಂದು ಪ್ರಾಯೋಜಕ ಕಂಪನಿ ಟೊಯೋಟಾ ಪ್ರಕಟಿಸಿದೆ. ಅದರ ಅಧ್ಯಕ್ಷರು ಕೂಡಾ ಜುಲೈ 23 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ, ಇದರಿಂದಾಗಿ ಟೊಕಿಯೋ 2020 ಒಲಿಂಪಿಕ್ಸ್ ಜಾಹೀರಾತು ವ್ಯವಹಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಒಲಿಂಪಿಕ್ಸ್ 2021: 88 ಭಾರತೀಯ ಕ್ರೀಡಾಪಟುಗಳ ತಂಡ ಟೊಕಿಯೋಗೆ ಆಗಮನ
ಟೋಕಿಯೊ ಒಲಿಂಪಿಕ್ಸ್ ಪ್ರಾರಂಭವಾಗಲು ದಿನಗಣನೆ ಆರಂಭವಾಗಿದ್ದು ಭಾರತದ ಮೊದಲ ಒಲಿಂಪಿಕ್ ತಂಡವು ಭಾನುವಾರ ಬೆಳಿಗ್ಗೆ ಟೋಕಿಯೊ ತಲುಪಿತು. ಟೋಕಿಯೊದ ನರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುರೋಬೆ ನಗರದ ಪ್ರತಿನಿಧಿಗಳು ಉಪಸ್ಥಿತರಿದ್ದರು.

2020 ಒಲಿಂಪಿಕ್ಸ್ ರದ್ದತಿಗಾಗಿ ಟೋಕಿಯೊ ಗವರ್ನರ್ ಗೆ ಅರ್ಜಿ!
ಟೋಕಿಯೊ ಒಲಿಂಪಿಕ್ಸ್ 2020 ರದ್ದತಿಗೆ ಸಂಬಂಧಿಸಿದಂತೆ ಮೂರು ಲಕ್ಷ 51 ಸಾವಿರ ಜನರ ಸಹಿಯುಳ್ಳ ಆನ್ ಲೈನ್ ಅರ್ಜಿಯನ್ನು ಟೋಕಿಯೊ ಗವರ್ನರ್ ಯೂರಿಕೊ ಕೊಯಿಕೆ ಅವರಿಗೆ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿಗಳ ಮುಖ್ಯಸ್ಥರಿಗೂ ಕಳುಹಿಸಲಾಗಿದೆ.

ಜಪಾನ್ ಗೂ ಹಬ್ಬಿದ ಬ್ರಿಟನ್ ನ ರೂಪಾಂತರಿ ಕೊರೋನಾ ವೈರಸ್!
ಬ್ರಿಟನ್ ನಲ್ಲಿ ಕಾಣಿಸಿಕೊಂಡು ವಿಶ್ವಾದ್ಯಂತ ಭೀತಿ ಸೃಷ್ಟಿಸಿರುವ ರೂಪಾಂತರಿತ ಕೊರೋನಾ ವೈರಸ್ ಇದೀಗ ಜಪಾನ್ ಗೂ ಕಾಲಿಟ್ಟಿದೆ.

ಟೋಕಿಯೊ ಒಲಿಪಿಂಕ್ಸ್ ನಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಕೊರೋನಾ ವೈರಸ್ ಲಸಿಕೆ ಕಡ್ಡಾಯವಲ್ಲ: ಐಒಸಿ ಮುಖ್ಯಸ್ಥ
ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲು ಅಥ್ಲೆಟ್ ಗಳು ಕೊರೋನಾ ವೈರಸ್ ಲಸಿಕೆ ಪಡೆಯುವ ಅಗತ್ಯವಿಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಚಾಂಪಿಯನ್ ಷಿಪ್ ನ ಮುಖ್ಯಸ್ಥ ಥಾಮಸ್ ಬಾಚ್ ತಿಳಿಸಿದ್ದಾರೆ.

ಕೊರೋನಾವೈರಸ್ ಭೀತಿ: ಒಲಿಂಪಿಕ್ಸ್ ಗೆ ಕ್ರೀಡಾಪಟುಗಳನ್ನು ಕಳುಹಿಸಲ್ಲ ಎಂದ ಕೆನಡಾ
ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಪ್ರತಿಷ್ಠಿತ ಒಲಿಂಪಿಕ್ಸ್ ಮಹಾಕೂಟಕ್ಕೂ ಕೊರೊನಾ ವೈರಸ್ ಸೋಂಕಿನ ಭೀತಿ ತಟ್ಟಿದೆ. ಹೀಗಾಗಿ ಕ್ರೀಡಾಪಟುಗಳು, ಸಿಬ್ಬಂದಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಟವನ್ನು ಮುಂದೂಡುವಂತೆ ಅಮೆರಿಕ ಸೇರಿದಂತೆ ಹತ್ತಕ್ಕೂಹೆಚ್ಚು ದೇಶಗಳು ಈಗಾಗಲೇ ಟೂರ್ನಿಯ ಆಯೋಜಕರನ್ನು ಒತ್ತಾಯಿಸಿವೆ

ಜಪಾನ್ ಕ್ರೂಸ್ ಹಡಗಿನಲ್ಲಿ 70 ಹೊಸ ಕೊರೋನವೈರಸ್ ಪ್ರಕರಣ ದೃಢ: ಸೋಂಕಿನ ಸಂಖ್ಯೆ 355 ಕ್ಕೆ ಏರಿಕೆ
ಟೋಕಿಯೊ ಬಳಿ ಸಮುದ್ರದಲ್ಲೇ ನಿಲ್ಲಿಸಲಾಗಿರುವ ಕ್ರೂಸ್ ಹಡಗಿನಲ್ಲಿ(ಪ್ರವಾಸಿ ಹಡಗು) ಇನ್ನೂ 70 ಜನರಿಗೆ ಕರೋನವೈರಸ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಮಾರಕ ಸೋಂಕಿಗೆ ಒಳಗಾದವರ ಸಂಖ್ಯೆ 355 ಕ್ಕೆ ಏರಿದೆ ಎಂದು ಜಪಾನ್ ಆರೋಗ್ಯ ಸಚಿವ ಕಟ್ಸುನೊಬು ಕ್ಯಾಟೊ ಭಾನುವಾರ ತಿಳಿಸಿದ್ದಾರೆ.

ಜಪಾನ್: ಪ್ರವಾಸಿ ಹಡಗಿನಲ್ಲಿದ್ದ 60 ಜನರಿಗೆ ಕೊರೋನಾವೈರಸ್, ಸೋಂಕಿತರ ಸಂಖ್ಯೆ 130ಕ್ಕೆ ಏರಿಕೆ
ಯೊಕೊಹಾಮಾ ಸಮೀಪ ಸಮುದ್ರದಲ್ಲೇ ಪ್ರತ್ಯೇಕವಾಗಿ ನಿಲ್ಲಿಸಲಾಗಿರುವ ಪ್ರವಾಸಿ ಹಡಗಿನಲ್ಲಿ (ಕ್ರೂಸ್) ಮತ್ತೆ ಹೆಚ್ಚುವರಿ 60ಕ್ಕೂ ಹೊಸ ಕೊರೋನವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಕರೊನಾ ವೈರಸ್ ಭೀತಿ: ಭಾರತೀಯರಿರುವ ಹಡಗಿಗೆ ನಿರ್ಬಂಧ ಹೇರಿದ ಜಪಾನ್!
ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿರುವ ಮಾರಕ ಕರೋನಾ ವೈರಸ್ ಭೀತಿಯಿಂದಾಗಿ 138 ಮಂದಿ ಭಾರತೀಯರಿರುವ ಐಶಾರಾಮಿ ಹಡಗನ್ನು ಜಪಾನ್ ನಿರ್ಬಂಧಿಸಿದೆ.

