ಟೊಕಿಯೋ ಒಲಿಂಪಿಕ್ಸ್ 2020ಕ್ಕೆ ವ್ಯವಹಾರಿಕ ಹೊಡೆತ, ಜಾಹೀರಾತು ನೀಡದಿರಲು ಟೊಯೋಟಾ ನಿರ್ಧಾರ
ಒಲಿಂಪಿಕ್ಸ್‌ಗೆ ಸಂಬಂಧಿತ ಟಿವಿ ಜಾಹೀರಾತುಗಳನ್ನು ನೀಡುತ್ತಿಲ್ಲ ಎಂದು ಪ್ರಾಯೋಜಕ ಕಂಪನಿ ಟೊಯೋಟಾ ಪ್ರಕಟಿಸಿದೆ. ಅದರ ಅಧ್ಯಕ್ಷರು ಕೂಡಾ ಜುಲೈ 23 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ, ಇದರಿಂದಾಗಿ ಟೊಕಿಯೋ 2020 ಒಲಿಂಪಿಕ್ಸ್ ಜಾಹೀರಾತು ವ್ಯವಹಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಟೊಕಿಯೋ: ಒಲಿಂಪಿಕ್ಸ್‌ಗೆ ಸಂಬಂಧಿತ ಟಿವಿ ಜಾಹೀರಾತುಗಳನ್ನು ನೀಡುತ್ತಿಲ್ಲ ಎಂದು ಪ್ರಾಯೋಜಕ ಕಂಪನಿ ಟೊಯೋಟಾ ಪ್ರಕಟಿಸಿದೆ. ಅದರ ಅಧ್ಯಕ್ಷರು ಕೂಡಾ ಜುಲೈ 23 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ, ಇದರಿಂದಾಗಿ ಟೊಕಿಯೋ 2020 ಒಲಿಂಪಿಕ್ಸ್ ಜಾಹೀರಾತು ವ್ಯವಹಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಟೋಕಿಯೊದಲ್ಲಿ ಶುಕ್ರವಾರ ತುರ್ತು ಪರಿಸ್ಥಿತಿಯಲ್ಲಿ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ.ಇದಕ್ಕೂ ಮುನ್ನ ಜಪಾನ್‌ನ ಅತಿದೊಡ್ಡ ವಾಹನ ತಯಾರಕ ಕಂಪನಿಯ ಘೋಷಣೆಯು ಒಲಿಂಪಿಕ್ ಕ್ರೀಡಾಕೂಟಕ್ಕೆ ದೊಡ್ಡ ಹೂಡೆತ ಬಿದ್ದಂತಾಗಿದೆ.
ಆಥ್ಲೀಟ್ ಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತವೆ ಮತ್ತು ವಾಹನಗಳು ಮತ್ತಿತರ ಪೂರೈಕೆ ಮೂಲಕ ಕ್ರೀಡಾಕೂಟಕ್ಕೆ ಕೊಡುಗೆ ನೀಡುವುದಾಗಿ ಟೊಯೊಟಾ ಮುಖ್ಯ ಕಮ್ಯೂನಿಕೇಷನ್ ಅಧಿಕಾರಿ ಜುನ್ ನಾಗಟಾ ಸುದ್ದಿಗೋಷ್ಠಿಯಲ್ಲಿ ಹೇಳಿದರು ಎಂದು ಕ್ಯೂಡೊ ನ್ಯೂಸ್ ವರದಿ ಮಾಡಿದೆ.
ಕೋವಿಡ್-19 ಭೀತಿಯ ನಡುವೆಯೂ ಟೊಕಿಯೋ 2020 ಒಲಿಂಪಿಕ್ ಕ್ರೀಡಾಕೂಟ ನಡೆಯುತ್ತಿದೆ. ಸೋಮವಾರ ಅಮೆರಿಕಾದ ಮಹಿಳಾ ಜಿಮ್ನಾಸ್ಟಿಕ್ ಆಟಗಾರ್ತಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಆದಾಗ್ಯೂ, ಈ ಆಥ್ಲೀಟ್ ಹೆಸರನ್ನು ಬಹಿರಂಗಪಡಿಸಿಲ್ಲ. ದಕ್ಷಿಣ ಆಫ್ರಿಕಾದ 23 ವರ್ಷದೊಳಗಿನ ಪುರುಷರ ಪುಟ್ಬಾಲ್ ತಂಡದ ಮೂವರು ಸದಸ್ಯರಿಗೆ ಕೋವಿಡ್-19 ಸೋಂಕು ತಗುಲಿದ್ದು, ಪ್ರಸ್ತುತ ಐಸೋಲೇಷನ್ ನಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


