TMC

ಪಶ್ಚಿಮ ಬಂಗಾಳ: 84 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, ಪ್ರಶಾಂತ್ ಕಿಶೋರ್ ಊಹೆ ನಿಜವಾಗುತ್ತಾ?
ಪಶ್ಚಿಮ ಬಂಗಾಳದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 24, ಕೇಂದ್ರ ಗೃಹ ಸಚಿವ ಅಮಿತ್ ಶಾ 27 ಚುನಾವಣಾ ರ‍್ಯಾಲಿ ನಡೆಸಿದ್ದರೂ ಈವರೆಗಿನ ಮತ ಎಣಿಕೆಯ ಅಂಕಿ ಅಂಶಗಳನ್ನು ನೋಡಿದರೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯುವ ಸಾಧ್ಯತೆ ನಿಚ್ಚಳವಾಗಿದೆ.

ಬಂಗಾಳದಲ್ಲಿ ಟಿಎಂಸಿ, ತಮಿಳುನಾಡಿನಲ್ಲಿ ಡಿಎಂಕೆ ಗೆಲುವಿನತ್ತ ದಾಪುಗಾಲು..!!
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಸಂಜೆ ವೇಳೆಗೆ ಸೋಲು- ಗೆಲುವಿನ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

ಪಶ್ಚಿಮ ಬಂಗಾಳ ಚುನಾವಣೆ: ಬೆಳಗ್ಗೆ 9.30ರ ಹೊತ್ತಿಗೆ ಶೇ.16.04ರಷ್ಟು ಮತದಾನ, ಉತ್ತರ ಕೋಲ್ಕತ್ತಾ ಮತಗಟ್ಟೆ ಸಮೀಪ ಬಾಂಬ್ ಪತ್ತೆ
ಪಶ್ಚಿಮ ಬಂಗಾಳದ 35 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಅಂತಿಮ ಮತ್ತು ಕೊನೆಯ ಹಂತದ ಮತದಾನ ನಡೆಯುತ್ತಿದ್ದು ಬೆಳಗ್ಗೆ 9.31ರ ಹೊತ್ತಿಗೆ ಶೇಕಡಾ 16.04ರಷ್ಟು ಮತದಾನವಾಗಿದೆ.

ಪಶ್ಚಿಮ ಬಂಗಾಳ: ಕೊರೋನಾ ಸೋಂಕಿನಿಂದ ಖರ್ದಹ ಟಿಎಂಸಿ ಅಭ್ಯರ್ಥಿ ಕಾಜಲ್ ಸಿನ್ಹಾ ಸಾವು
ಮಹಾಮಾರಿ ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳದ ಖರ್ದಹ ನಗರದ ಟಿಎಂಸಿ ಅಭ್ಯರ್ಥಿ ಕಾಜಲ್ ಸಿನ್ಹಾ ಅವರು ಸಾವನ್ನಪ್ಪಿದ್ದಾರೆಂದು ಭಾನುವಾರ ತಿಳಿದುಬಂದಿದೆ.

ಮಿಥುನ್ ಚಕ್ರವರ್ತಿ, ದಿಲೀಪ್ ಘೋಷ್ ರಿಂದ ಕೋವಿಡ್ ನಿಯಮ ಉಲ್ಲಂಘನೆ, ದೂರು ದಾಖಲು: ಟಿಎಂಸಿ ನಾಯಕ
ಬಿಜೆಪಿ ನಾಯಕರಾದ ದಿಲೀಪ್ ಘೋಷ್ ಮತ್ತು ನಟ ಮಿಥುನ್ ಚಕ್ರವರ್ತಿ ಅವರು 500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಮೂಲಕ ಕೋವಿಡ್ -19 ಪ್ರೋಟೋಕಾಲ್ ಉಲ್ಲಂಘಿಸಿದ್ದಾರೆ

ಕೇಂದ್ರಿಯ ಪಡೆಗಳು ಹಾರಿಸಿದ ಗುಂಡಿನಿಂದ ಇಬ್ಬರು ಕಾರ್ಯಕರ್ತರಿಗೆ ಗಾಯ: ಟಿಎಂಸಿ ಆರೋಪ ನಿರಾಕರಿಸಿದ ಆಯೋಗ
ಉತ್ತರ 24 ಪರಗಣ ಜಿಲ್ಲೆಯ ಅಶೋಕ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರೀಯ ಪಡೆಗಳು ಹಾರಿಸಿದ ಗುಂಡಿನಿಂದ ತನ್ನ ಇಬ್ಬರು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂಬ ತೃಣಮೂಲ ಕಾಂಗ್ರೆಸ್ ಆರೋಪವನ್ನು ಚುನಾವಣಾ ಆಯೋಗ ತಳ್ಳಿ ಹಾಕಿರುವುದಾಗಿ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಇನ್ನು ಮುಂದೆ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ ನಡೆಸುವುದಿಲ್ಲ: ಟಿಎಂಸಿ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇನ್ನು ಮುಂದೆ ಚುನಾವಣಾ ಪ್ರಚಾರ ನಡೆಸುವುದಿಲ್ಲ ಎಂದು ಟಿಎಂಸಿ ಹೇಳಿದೆ.

ಬಂಗಾಳ ಚುನಾವಣೆ; ಮಮತಾ ಬ್ಯಾನರ್ಜಿ 'ಕ್ಲೀನ್ ಬೌಲ್ಡ್', ಬಿಜೆಪಿ ಈಗಾಗಲೇ ಶತಕ ಬಾರಿಸಿದೆ: ಪ್ರಧಾನಿ ಮೋದಿ
ಬಂಗಾಳದ ಚುನಾವಣೆ ಕುರಿತಂತೆ ಕ್ರಿಕೆಟ್ ಕಾಮೆಂಟರಿ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಧಾನಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳಲ್ಲಿ ಬಂಗಾಳದ ಜನರು ಎಷ್ಟೊಂದು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಹೊಡೆದಿದ್ದಾರೆ ಎಂದರೆ ಬಿಜೆಪಿ ಈಗಾಗಲೇ ಶತಕ ಬಾರಿಸಿದೆ ಎಂದರು.

ಪಶ್ಚಿಮ ಬಂಗಾಳದ ಸಿಟಾಲ್ಕುಚಿ, ಕೂಚ್ ಬೆಹರ್ ನಲ್ಲಿ ಪರಿಸ್ಥಿತಿ ಉದ್ವಿಗ್ನ: ಸಿಐಎಸ್ ಎಫ್ ಗುಂಡಿನ ದಾಳಿಗೆ ನಾಲ್ವರು ಬಲಿ
ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಸಿಟಲ್ಕುಚಿ ಮತಗಟ್ಟೆ ಬಳಿ ನಡೆದ ಗುಂಡಿನ ದಾಳಿಯಲ್ಲಿ ಯುವ ಮತದಾರ ಹತ್ಯೆಗೀಡಾದ ನಂತರ ಎದ್ದ ಗಲಭೆಯನ್ನು ನಿಯಂತ್ರಿಸಲು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ನಡೆಸಿದ ಗುಂಡಿನ ದಾಳಿಗೆ ಶನಿವಾರ ಮತ್ತೆ ನಾಲ್ವರು ಬಲಿಯಾಗಿದ್ದಾರೆ.

