ಬಂಗಾಳ ಚುನಾವಣೆ; ಮಮತಾ ಬ್ಯಾನರ್ಜಿ 'ಕ್ಲೀನ್ ಬೌಲ್ಡ್', ಬಿಜೆಪಿ ಈಗಾಗಲೇ ಶತಕ ಬಾರಿಸಿದೆ: ಪ್ರಧಾನಿ ಮೋದಿ
ಬಂಗಾಳದ ಚುನಾವಣೆ ಕುರಿತಂತೆ ಕ್ರಿಕೆಟ್ ಕಾಮೆಂಟರಿ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಧಾನಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳಲ್ಲಿ ಬಂಗಾಳದ ಜನರು ಎಷ್ಟೊಂದು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಹೊಡೆದಿದ್ದಾರೆ ಎಂದರೆ ಬಿಜೆಪಿ ಈಗಾಗಲೇ ಶತಕ ಬಾರಿಸಿದೆ ಎಂದರು.

ಬರ್ಧಾಮನ್(ಪಶ್ಚಿಮ ಬಂಗಾಳ): ಬಂಗಾಳದ ಚುನಾವಣೆ ಕುರಿತಂತೆ ಕ್ರಿಕೆಟ್ ಕಾಮೆಂಟರಿ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಧಾನಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳಲ್ಲಿ ಬಂಗಾಳದ ಜನರು ಎಷ್ಟೊಂದು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಹೊಡೆದಿದ್ದಾರೆ ಎಂದರೆ ಬಿಜೆಪಿ ಈಗಾಗಲೇ ಶತಕ ಬಾರಿಸಿದೆ ಎಂದರು.
ಬರ್ಧಾಮನ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಬಂಗಾಳದಲ್ಲಿ ಟಿಎಂಸಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಲೀನ್ ಬೌಲ್ಡ್ ಆಗಿದ್ದಾರೆ. ಇದೇ ಆಕ್ರೋಶದಲ್ಲಿ ರಾಜ್ಯದಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಕೇಂದ್ರ ಪಡೆಗಳ ವಿರುದ್ಧ ಜನರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ, ಪರಿಶಿಷ್ಟ ಜಾತಿಯವರು 'ಭಿಕ್ಷುಕರು' ಎಂದು ದೀದಿಗೆ ತುಂಬಾ ಹತ್ತಿರವಿರುವ ನಾಯಕರೊಬ್ಬರು ಕರೆದಿದ್ದರೂ ಅದಕ್ಕೆ ವಿಷಾದ ವ್ಯಕ್ತಪಡಿಸಲು ಕೇರ್ ಮಾಡುವುದಿಲ್ಲ ಎಂದರು.
ವಿಧಾನಸಭಾ ಚುನಾವಣೆಯ ಮೊದಲ 4 ಹಂತಗಳಲ್ಲಿ ಬಿಜೆಪಿ ಈಗಾಗಲೇ ಒಂದು ಶತಕ (ಸ್ಥಾನಗಳನ್ನು) ಪೂರೈಸಿದೆ. ಅರ್ಧದಷ್ಟು ಪಂದ್ಯಗಳಲ್ಲಿ(ಆಧಾ ಮೇ ಪೂರಾ ಸಾಫ್) ಟಿಎಂಸಿಯನ್ನು ಅಳಿಸಿಹಾಕಿದ್ದಾರೆ ಎಂದರು.
'ಬಂಗಾಳದ ಜನರು ನಂದಿಗ್ರಾಮ್ನಲ್ಲಿ ದೀದಿಯನ್ನು ಕ್ಲೀನ್ ಬೌಲ್ ಮಾಡಿದ್ದಾರೆ ಮತ್ತು ಅವರ ಇಡೀ ತಂಡವನ್ನು ಮೈದಾನದಿಂದ ಹೊರಹೋಗುವಂತೆ ಕೇಳಿಕೊಂಡಿದ್ದಾರೆ" ಎಂದು ಅವರು ಹೇಳಿದರು.
ಟಿಎಂಸಿ ಮುಖ್ಯಸ್ಥ ಮಮತಾ ಬ್ಯಾನರ್ಜಿಯವರ "ಮಾ, ಮತಿ, ಮನುಷ್" ಘೋಷಣೆಯನ್ನು ಅಪಹಾಸ್ಯ ಮಾಡಿದ ಪ್ರಧಾನಿ, "ಮಾ" ದೌರ್ಜನ್ಯ, 'ಮತಿ' ಮಾತೃಭೂಮಿ ಲೂಟಿ ಮತ್ತು 'ಮನುಷ್' (ಜನರ) ರಕ್ತಪಾತವು ಅದರ ವಾಸ್ತವವಾಗಿದೆ ಎಂದು ಹೇಳಿದರು.
ಏಪ್ರಿಲ್ 10 ರಂದು ಕೂಚ್ ಬೆಹಾರ್‌ನಲ್ಲಿ ಸಿಐಎಸ್ಎಫ್ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


