Tihar jail

ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿಯಿದೆ,ಮರಣದಂಡನೆ ಮುಂದೂಡಿ! ಡೆತ್ ವಾರಂಟ್ ವಿರುದ್ಧ ನಿರ್ಭಯಾ ಅಪರಾಧಿಯಿಂದ ಹೈಕೋರ್ಟಿಗೆ ಮೊರೆ
ಜನವರಿ 22 ರಂದು ಗಲ್ಲಿಗೇರಿಸಲಿರುವ ನಾಲ್ವರು ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಕ್ಯುರೇಟಿವ್ ಅರ್ಜಯನ್ನು ಸುಪ್ರೀಂ ವಜಾಗೊಳಿಸಿದ ಬೆನ್ನಲ್ಲೇ ಓರ್ವ ಆರೋಪಿ ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಡೆತ್ ವಾರಂಟ್ ಅನ್ನು ವಜಾಗೊಳಿಸುವಂತೆ ಮತ್ತೆ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾನೆ.

ಬಂಧಿತ ಭೀಮ್ ಆರ್ಮಿ ಮುಖ್ಯಸ್ಥನಿಗೆ ತುರ್ತು ವೈದ್ಯಕೀಯ ಚಿಕಿತ್ಸೆಗೆ ಕೋರ್ಟ್ ಆದೇಶ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ದರ್ಯಾಗಂಜ್ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರಿಗೆ....

ನಿರ್ಭಯಾ ಅತ್ಯಾಚಾರಿಗಳಿಗೆ ಏಕಕಾಲದಲ್ಲಿ ಗಲ್ಲು, ಐತಿಹಾಸಿಕ ದಾಖಲೆ ಬರೆಯಲಿದೆ ತಿಹಾರ್ ಜೈಲು!
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರಿಗಳನ್ನು ಏಕಕಾಲಕ್ಕೆ ಗಲ್ಲಿಗೇರಿಸಲು ಸಿದ್ಧತೆ ನಡೆಸಲಾಗಿದ್ದು, ಆ ಮೂಲಕ ತಿಹಾರ್ ಜೈಲು ಐತಿಹಾಸಿಕ ದಾಖಲೆ ಬರೆಯಲು ಸಜ್ಜಾಗಿದೆ.

ಛೋಟಾ ರಾಜನ್ ಹತ್ಯೆಗೆ ಛೋಟಾ ಶಕೀಲ್ ಹೊಸ ಸಂಚು, ತಿಹಾರ್ ಜೈಲಿನಲ್ಲಿ ಭದ್ರತೆ ಹೆಚ್ಚಳ
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಛೋಟಾ ಶಕೀಲ್ ತನ್ನ ಪರಮ ಶತ್ರು ಛೋಟಾ ರಾಜನ್ ನನ್ನು ಹತ್ಯೆ ಮಾಡಲು ಹೊಸ ಸಂಚು ರೂಪಿಸಿದ್ದು, ತಿಹಾರ್ ಜೈಲಿನ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ನಿರ್ಭಯಾ ಹತ್ಯಾಚಾರಿಗಳನ್ನು ನೇಣಿಗೇರಿಸಲು ಇಬ್ಬರನ್ನು ಕಳುಹಿಸಿ: ಉತ್ತರ ಪ್ರದೇಶಕ್ಕೆ ತಿಹಾರ್ ಜೈಲಿಂದ ಮನವಿ
ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಡಿಸೆಂಬರ್ 16ರಂದು ಗಲ್ಲು ಶಿಕ್ಷೆ ವಿಧಿಸಲಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಗಲ್ಲಿಗೇರಿಸುವ ಕಾರ್ಯಕ್ಕೆ ಇಬ್ಬರನ್ನು ಒದಗಿಸಬೇಕು ಎಂದು ಉತ್ತರ ಪ್ರದೇಶ ಪೊಲೀಸರಿಗೆ ತಿಹಾರ್ ಜೈಲಿನಿಂದ ಮನವಿ ಹೋಗಿದೆ.

ದಿ ಎಂಡ್..?; ತಿಹಾರ್ ಜೈಲಿಗೆ ನಿರ್ಭಯಾ ಆರೋಪಿಗಳ ರವಾನೆ, 10 ನೇಣು ಹಗ್ಗಗಳಿಗೆ ಆರ್ಡರ್!
ಪಶು ವೈದ್ಯೆ ದಿಶಾ ಹತ್ಯಾಚಾರ ಆರೋಪಿಗಳ ಎನ್ಕೌಂಟರ್ ಬೆನ್ನಲ್ಲೇ ಇತ್ತ ತಿಹಾರ್ ಜೈಲಿನಲ್ಲಿ ಅತ್ಯಾಚಾರಿಗಳಿಗೆ ನೇಣು ಕುಣಿಕೆ ತಯಾರಿಸುತ್ತಿರುವ ಸುದ್ದಿ ಹೊರಬಿದ್ದಿದೆ.

ನಿರ್ಭಯಾ ದೋಷಿಗಳಿಗೆ ಶಿಕ್ಷೆ ಸನ್ನಿಹಿತ: ಗಲ್ಲು ಶಿಕ್ಷೆ ಜಾರಿಗೊಳಿಸುವ ಅಧಿಕಾರಿಗಾಗಿ ಹುಡುಕಾಟ ಆರಂಭ
ಗಲ್ಲು ಶಿಕ್ಷೆಯಿಂದ ಕ್ಷಮೆ ಕೋರಿ ನಿರ್ಭಯಾ ಪ್ರಕರಣದ ದೋಷಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿರುವ ಬೆನ್ನಲ್ಲೇ, ದಹಲಿಯ ತಿಹಾರ್ ಜೈಲಿನ ಅಧಿಕಾರಿಗಳು, ಗಲ್ಲು ಶಿಕ್ಷೆ ಜಾರಿಗೊಳಿಸುವ ವ್ಯಕ್ತಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

'ನನ್ನ ವಿರುದ್ಧ ಒಂದೇ ಒಂದು ಆರೋಪ ಹೊರಿಸಲಾಗಿಲ್ಲ': 106 ದಿನಗಳ ಜೈಲುವಾಸದ ನಂತರ ಚಿದಂಬರಂ ಹೇಳಿದ್ದಿಷ್ಟು
105 ದಿನಗಳ ಜೈಲುವಾಸದ ನಂತರ ಬಿಧವಾರ ತಿಹಾರ್ ಜೈಲಿನಿಂದ ಬಿಡುಅಡೆಯಾದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ರಾತ್ರಿ 8.10 ಕ್ಕೆ ಜೈಲಿನ ಗೇಟ್ ನಂ 3 ರಿಂದ ಹೊರಬಂದಿದ್ದಾರೆ. ಆ ವೇಳೆ ನೂರಾರು ಕಾಂಗ್ರೆಸ್ ಬೆಂಬಲಿಗರು ಚಿದಂಬರಂ ಅವರಿಗೆ ಸ್ವಾಗತ ಕೋರಿದ್ದಾರೆ.

ನಿರ್ಭಯಾ ಅತ್ಯಾಚಾರಿಗಳನ್ನು ಶೀಘ್ರದಲ್ಲೇ ಗಲ್ಲಿಗೇರಿಸಲಾಗುವುದು: ತಿಹಾರ್ ಜೈಲು ಅಧಿಕಾರಿಗಳು
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಶೀಘ್ರದಲ್ಲೇ ಗಲ್ಲಿಗೇರಿಸಲಾಗುವುದು ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

