Tihar jail

ನಿರ್ಭಯಾ ಹಂತಕರಿಗೆ ಗಲ್ಲು: ಭಾರತದ ಮಾನವ ಹಕ್ಕು ಹೋರಾಟ ಚರಿತ್ರೆ ಮೇಲೆ ಅಳಿಸಲಾಗದ ಕಲೆ ಎಂದ ಅಮ್ನೆಸ್ಟಿ ಇಂಡಿಯಾ
ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಿದ ಕ್ರಮ ಭಾರತದ ಮಾನವ ಹಕ್ಕು ಹೋರಾಟದ ಮೇಲೆ ಅಳಿಸಲಾಗದ ಕಲೆಯನ್ನುಂಟು ಮಾಡಿದೆ ಎಂದು ಅಮ್ನೆಸ್ಟಿ ಇಂಡಿಯಾ ಸಂಸ್ಥೆ ಅಭಿಪ್ರಾಯಪಟ್ಟಿದೆ.

ನನ್ನ ಅಂಗಾಂಗ ದಾನ ಮಾಡಿ: ಗಲ್ಲಿಗೇರಿದ ನಿರ್ಭಯಾ ಹತ್ಯಾಚಾರಿಯ ಆಸೆ!
ಸತತ 8 ವರ್ಷಗಳ ಬಳಿಕ ನಿರ್ಭಯಾ ಹತ್ಯಾಚಾರಿಗಳನ್ನು ಇಂದು ಮುಂಜಾನೆ ಗಲ್ಲಿಗೇರಿಸಲಾಗಿದ್ದು, ಪ್ರಕರಣ ಅಪರಾಧಿಗಳಲ್ಲಿ ಒಬ್ಬ ತನ್ನ ಮರಣಾನಂತರ ತನ್ನ ದೇಹದ ಅಂಗಗಳನ್ನು ದಾನ ಮಾಡುವಂತೆ ಅಧಿಕಾರಿಗಳಲ್ಲಿ ತನ್ನ ಆಸೆ ಹೇಳಿಕೊಂಡಿದ್ದನಂತೆ.

ನಿರ್ಭಯಾ ಹಂತಕರ ಗಲ್ಲಿಗೇರಿಸಲು ಸಕಲ ಸಿದ್ಧತೆಗಳು ನಡೆದಿವೆ: ತಿಹಾರ್ ಜೈಲಾಧಿಕಾರಿಗಳು
ಗಲ್ಲು ಶಿಕ್ಷೆಯನ್ನು ಮುಂದೂಡಲು ಸಾಧ್ಯವಿರುವ ಎಲ್ಲಾ ಕಾನೂನು ಅವಕಾಶಗಳನ್ನು ನಿರ್ಭಯಾ ಹಂತಕರು ಬಳಸಿಕೊಳ್ಳುತ್ತಿದ್ದು, ಈ ನಡುವಲ್ಲೇ ಹಂತಕರ ಗಲ್ಲಿಗೇರಿಸಲು ಎಲ್ಲಾ ರೀತಿಯ ಸಿದ್ಧತೆಗಳಾಗಿವೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

ನಿರ್ಭಯಾ ಅಪರಾಧಿ ಮಾನಸಿಕ ರೋಗಿ ಎನ್ನುವುದು 'ವಿಕೃತ ಮನಸ್ಸುಗಳ ಕಟ್ಟುಕಥೆ', ವಿನಯ್ ಶರ್ಮಾ ಅರ್ಜಿ ವಜಾ
ನಿರ್ಭಯಾ ಪ್ರಕರಣದ ಅಪರಾಧಿಯೊಬ್ಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ಹೇಳಿರುವುದು ಕೇವಲ "ವಿಕೃತ ಸಂಗತಿಗಳ ಕಟ್ಟುಕಥೆ" ಎಂದು ತಿಹಾರ್ ಜೈಲು ಅಧಿಕಾರಿಗಳು ಶನಿವಾರ ಹೇಳಿದರು. ಇದೇ ವೇಳೆ ವಿನಯ್ ಶರ್ಮಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಗಿ ತನಗೆ ಚಿಕಿತ್ಸೆಗೆ ಸಹಕರಿಸಿ ಎಂದು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ

ನಿರ್ಭಯಾ ಪ್ರಕರಣ: ಮಾನಸಿಕ ರೋಗಿಯಾದ ಅಪರಾಧಿ! ಸ್ಕಿಜೋಫ್ರೇನಿಯಾ ಚಿಕಿತ್ಸೆಗಾಗಿ ಕೋರ್ಟಿಗೆ ಮೊರೆ
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳ ಪೈಕಿ ಒಬ್ಬನಾದ ವಿನಯ್ ಕುಮಾರ್ ಶರ್ಮಾ ಮಾನಸಿಕ ಅಸ್ವಸ್ಥತೆ, ಸ್ಕಿಜೋಫ್ರೇನಿಯಾ ಮತ್ತು ತಲೆ ಮತ್ತು ತೋಳಿನ ಗಾಯದಿಂದ ಬಳಲುತ್ತಿದ್ದು ಆತನಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡಬೇಕೆಂದು ದೆಹಲಿ ನ್ಯಾಯಾಲಯ ಗುರುವಾರ ತಿಹಾರ್ ಜೈಲು ಅಧಿಕಾರಿಗಳಿಗೆ ಹೇಳಿದೆ

ನಿರ್ಭಯಾ ಆತ್ಯಾಚಾರಿಗಳಿಗೆ ಹೊಸ ಡೆತ್ ವಾರಂಟ್: ತಿಹಾರ್ ಜೈಲು ಅಧಿಕಾರಿಗಳ ಅರ್ಜಿ ವಜಾಗೊಳಿಸಿದ ದೆಹಲಿ ಕೋರ್ಟ್!
ನಿರ್ಭಯಾ ಆತ್ಯಾಚಾರಿಗಳಿಗೆ ಹೊಸದಾಗಿ ಡೆತ್ ವಾರಂಟ್ ಜಾರಿ ಮಾಡುವಂತೆ ಜಾರಿ ಮಾಡುವಂತೆ ಕೋರಿ ತಿಹಾರ್ ಜೈಲು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಕೋರ್ಟ್ ವಜಾಗೊಳಿಸಿದೆ.

ನಿರ್ಭಯಾ ಪ್ರಕರಣ: ಅಪರಾಧಿಗಳಿಗೆ ಗಲ್ಲು ಜಾರಿಗೊಳಿಸಲು ದಿನಾಂಕ ನಿಗದಿಪಡಿಸುವಂತೆ ಕೋರ್ಟ್ ಗೆ ತಿಹಾರ್ ಜೈಲು ಮನವಿ
ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ದಿನಾಂಕ ನಿಗದಿಪಡಿಸುವಂತೆ ಕೋರಿ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಗೆ ಮನವಿ ಸಲ್ಲಿಸಲಾಗುವುದು ಎಂದು ಶನಿವಾರ ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

'ಸಾವಿನ ಭಯ' ಜೈಲಿನಲ್ಲಿ ನಿರ್ಭಯಾ ಅತ್ಯಾಚಾರಿಗಳ ರಂಪಾಟ, ಕೊನೆ ಆಸೆಗೆ ನಕಾರ!
ನಿರ್ಭಯಾ ಅತ್ಯಾಚಾರಿ ಮಾಡಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದರೂ ನೇಣು ಕುಣಿಕೆಯಿಂದ ತಪ್ಪಿಸಿಕೊಂಡು ಬರುತ್ತಿದ್ದ ಅಪರಾಧಿಗಳಿಗೆ ಇದೀಗ ಸಾವಿನ ಭಯ ಶುರುವಾಗಿದ್ದು ಜೈಲಿನಲ್ಲಿ ರಂಪಾಟ ಶುರು ಮಾಡಿದ್ದಾರೆ. ಅಲ್ಲದೆ ತಮ್ಮ ಕೊನೆಯ ಆಸೆಯನ್ನು ನಿರಾಕರಿಸುತ್ತಿದ್ದಾರೆ ಎಂದು ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಭಯಾ ಅತ್ಯಾಚಾರಿಗಳಿಗೆ ನೇಣು: ತಿಹಾರ್ ಜೈಲಿನಿಂದ ವರದಿ ಕೇಳಿದ ನ್ಯಾಯಾಲಯ
2012ರಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ನಿಗದಿಯಾಗಿರುವ ಮರಣದಂಡನೆ ಕುರಿತಂತೆ ನಾಳೆಯೊಳಗೆ ವರದಿಯೊಂದನ್ನು ಸಲ್ಲಿಸುವಂತೆ ದೆಹಲಿಯ ನ್ಯಾಯಾಲಯವೊಂದು ತಿಹಾರ್ ಜೈಲಿಗೆ ನಿರ್ದೇಶಿಸಿದೆ.

