theft

ಅಸ್ಸಾಂ: ಫುಟ್ ಬಾಲ್ ದಂತಕಥೆ ಡಿಯೆಗೊ ಮರಡೋನಾರಿಗೆ ಸೇರಿದ ಕಳವಾಗಿದ್ದ ಇನ್ನಷ್ಟು ವಸ್ತುಗಳು ಪತ್ತೆ
ಈ ಹಿಂದೆ ದುಬೈ ಪೊಲೀಸರು ನೀಡಿದ್ದ ಸುಳಿವಿನ ಮೇಲೆ ಅಸ್ಸಾಂ ಪೊಲೀಸರು ಗುವಾಹಟಿ ನಿವಾಸಿ ಆರೋಪಿ ವಜೀದ್ ಹುಸೇನ್ ಮನೆ ಮೇಲೆ ದಾಳಿ ನಡೆಸಿದ್ದರು. ಆ ಸಂದರ್ಭ ಮರಡೋನ ಅವರಿಗೆ ಸೇರಿದ ಕೈಗಡಿಯಾರ ಪತ್ತೆಯಾಗಿತ್ತು.

ಬೆಂಗಳೂರು: ಸಂಚಾರಿ ಪೊಲೀಸ್ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ ಮನೆಯಲ್ಲಿ ಕಳ್ಳತನ
ಟ್ರಾಫಿಕ್ ಪೊಲೀಸ್ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಮನೆಯಲ್ಲಿ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಸಂಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳು ಕಳವು ಆಗಿವೆ.

'007 ಮತ್ತೆ ಬರುತ್ತೇವೆ': ಕಳ್ಳರ ಗ್ಯಾಂಗ್ ಬಂಧಿಸುವಲ್ಲಿ ಯಶಸ್ವಿಯಾದ ಬೆಂಗಳೂರು ಪೊಲೀಸರು
ನಗರದಲ್ಲಿ ಜೇಮ್ಸ್ ಬಾಂಡ್ ರೀತಿಯಲ್ಲೇ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ರಾಜಸ್ಥಾನದ ಮೂಲದ ಬಿಚ್ಚು ಗ್ಯಾಂಗ್ನ ಅರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಳ್ಳತನ ಪ್ರಕರಣ: ಕಲಬುರಗಿ ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವು, ತನಿಖೆ ಆರಂಭ
ಕಲಬುರಗಿಯ ಎಂಬಿ ನಗರ ಠಾಣೆ ಪೊಲೀಸರ ವಶದಲ್ಲಿದ್ದ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಈ ಸಂಬಂಧ ಹಲವು ಅನುಮಾನಗಳು ಮೂಡತೊಡಗಿವೆ.

ಕಳ್ಳತನದ ಕೇಂದ್ರವಾದ ಮಡಿಕೇರಿ ಕೋವಿಡ್ ಆಸ್ಪತ್ರೆ: ಮೃತರ ಸಂಬಂಧಿಕರಿಂದ ದೂರು ದಾಖಲು!
ಇಲ್ಲಿನ ಕೋವಿಡ್-19 ಆಸ್ಪತ್ರೆ ಕಳ್ಳತನದ ಕೇಂದ್ರವಾಗಿ ಹೂರಹೊಮ್ಮಿದ್ದು, ದೂರುಗಳನ್ನು ಸ್ವೀಕರಿಸುವುದರಲ್ಲಿ ಕೊಡಗು ಪೊಲೀಸರು ಬ್ಯುಸಿಯಾಗಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಮಾಜಿ ಸಚಿವೆ ಉಮಾಶ್ರೀ ಮನೆ ಕಳವು: ಇಬ್ಬರು ಆರೋಪಿಗಳ ಬಂಧನ
ಮಾಜಿ ಸಚಿವೆ ಉಮಾಶ್ರೀ ಅವರ ಮನೆಯಲ್ಲಿ ನಡೆದ ಕಳವು ಪ್ರಕರಣ ಸಂಬಂಧ ತೇರದಾಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೈಸೂರು: ಬೀಗ ಹಾಕಿದ ಮನೆಯಿಂದ 2 ಕೆಜಿ ಚಿನ್ನ ನಾಪತ್ತೆ!
ಅರಮನೆಗಳ ನಗರಿಯಲ್ಲಿ ವಿಚಿತ್ರವಾದ ಕಳವು ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಬಾಗಿಲು ಹಾಕಿದ ಮನೆಯಿಂದ 2 ಕೆಜಿ ಚಿನ್ನಾಭರಣ ಕಾಣೆಯಾಗಿವೆ.

ಲಾಕ್ ಆಗಿದ್ದ ಕೊರೋನಾ ರೋಗಿಯ ಮನೆಯಲ್ಲಿ ಕಳ್ಳರ ದರ್ಬಾರ್, ನಗ-ನಾಣ್ಯ ಲೂಟಿ
ಕೊರೋನಾ ಸೋಂಕಿತೆಯ ಲಾಕ್ ಆಗಿದ್ದ ಮನೆ ಮೇಲೆ ದಾಳಿ ಮಾಡಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ನಗ-ನಾಣ್ಯ ಲೂಟಿ ಮಾಡಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ರಾಜಸ್ಥಾನದಲ್ಲಿ ಅಮಾನವೀಯ ಘಟನೆ: ಕಳ್ಳತನದ ಆರೋಪಿಗಳಿಗೆ ಸ್ಕ್ರೂಡ್ರೈವರ್ ನಿಂದ ಖಾಸಗಿ ಭಾಗಕ್ಕೆ ತಿವಿದು ಚಿತ್ರಹಿಂಸೆ
ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ದಲಿತ ಯುವಕರಿಗೆ ಪೆಟ್ರೋಲ್ ನಲ್ಲಿ ಅದ್ದಿದ ಸ್ಕ್ರೂಡ್ರೈವರ್ ನಿಂದ ಖಾಸಗಿ ಭಾಗಕ್ಕೆ ತಿವಿದು ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದೆ.

