ಕ್ರೀಡೆ

ಅಸ್ಸಾಂ: ಫುಟ್ ಬಾಲ್ ದಂತಕಥೆ ಡಿಯೆಗೊ ಮರಡೋನಾರಿಗೆ ಸೇರಿದ ಕಳವಾಗಿದ್ದ ಇನ್ನಷ್ಟು ವಸ್ತುಗಳು ಪತ್ತೆ

ಈ ಹಿಂದೆ ದುಬೈ ಪೊಲೀಸರು ನೀಡಿದ್ದ ಸುಳಿವಿನ ಮೇಲೆ ಅಸ್ಸಾಂ ಪೊಲೀಸರು ಗುವಾಹಟಿ ನಿವಾಸಿ ಆರೋಪಿ ವಜೀದ್ ಹುಸೇನ್ ಮನೆ ಮೇಲೆ ದಾಳಿ ನಡೆಸಿದ್ದರು. ಆ ಸಂದರ್ಭ ಮರಡೋನ ಅವರಿಗೆ ಸೇರಿದ ಕೈಗಡಿಯಾರ ಪತ್ತೆಯಾಗಿತ್ತು.

ಅಸ್ಸಾಂ: ಫುಟ್ ಬಾಲ್ ದಂತಕಥೆ ಡಿಯೆಗೊ ಮರಡೋನಾರಿಗೆ ಸೇರಿದ ಕಳವಾಗಿದ್ದ ಇನ್ನಷ್ಟು ವಸ್ತುಗಳು ಪತ್ತೆ
ಆರೋಪಿ ವಜೀದ್ ಹುಸೇನ್ ಮತ್ತು ಮರಡೋನ (ಒಳಚಿತ್ರದಲ್ಲಿ ಕಳವಾಗಿದ್ದ ವಾಚ್)
Published On :

ಗುವಾಹಟಿ: ಇತ್ತೀಚಿಗಷ್ಟೆ ಪುಟ್ಬಾಲ್ ದಂತಕಥೆ ದಿವಂಗತ ಡಿಯೆಗೊ ಮರಡೋನಾ ಅವರಿಗೆ ಸೇರಿದ ಕಳವಾಗಿದ್ದ ಕೈಗಡಿಯಾರವನ್ನು ಅಸ್ಸಾಂ ಪೊಲೀಸರು ವಶಪಡಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಡಿಯೆಗೊ ಮರಡೋನಾ ಅವರಿಗೆ ಸೇರಿದೆಯೆನ್ನಲಾದ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಕೈಗಡಿಯಾರವನ್ನು ಕಳವು ಮಾಡಿದ್ದ ಆರೋಪಿ ವಜೀದ್ ಹುಸೇನ್ ಎಂಬಾತನ ಸಂಬಂಧಿಕರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭ ಮರಡೋನಾ ಅವರಿಗೆ ಸೇರಿದ ಜಾಕೆಟ್, ಟಿ-ಶರ್ಟ್, ಎರಡು ಜೊತೆ ಶೂ, ೬ ಲೈಟರ್ ಗಳು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ.

ಪತ್ತೆಯಾಗಿರುವ ವಸ್ತುಗಳಲ್ಲಿ ಮರಡೋನಾ ಅವರಿಗೆ ಸೇರಿದ ವಸ್ತುಗಳು ಯಾವುವು ಎನ್ನುವ ಬಗ್ಗೆ ತನಿಖೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮುನ್ನ ದುಬೈ ಪೊಲೀಸರು ನೀಡಿದ್ದ ಸುಳಿವಿನ ಮೇಲೆ ಅಸ್ಸಾಂ ಪೊಲೀಸರು ಗುವಾಹಟಿ ನಿವಾಸಿ ಆರೋಪಿ ವಜೀದ್ ಹುಸೇನ್ ಮನೆ ಮೇಲೆ ದಾಳಿ ನಡೆಸಿದ್ದರು. ಆ ಸಂದರ್ಭ ಮರಡೋನ ಅವರಿಗೆ ಸೇರಿದ ಕೈಗಡಿಯಾರ ಪತ್ತೆಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.