techie

ಬಯಲಲ್ಲಿ ಮೂತ್ರ ವಿಸರ್ಜನೆ: ವರ್ತೂರಿನಲ್ಲಿ ಟೆಕ್ಕಿ, ಸೋದರ ಮಾವನ ಮೇಲೆ ಹಲ್ಲೆ, ಪ್ರಕರಣ ದಾಖಲು
ವರ್ತೂರು ಪೊಲೀಸ್ ವ್ಯಾಪ್ತಿಯ ಬಳಗೆರೆ ರಸ್ತೆ ಬಳಿಯ ಖಾಲಿ ಜಾಗದಲ್ಲಿ ಶನಿವಾರ ಸಂಜೆ ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ 36 ವರ್ಷದ ಟೆಕ್ಕಿ ಮತ್ತು ಅವರ ಸೋದರ ಮಾವನಿಗೆ ಅಪರಿಚಿತರ ಗುಂಪೊಂದು ಥಳಿಸಿದೆ.

ತನ್ನಿಂದ ದೂರಾಗುತ್ತಿದ್ದಾಳೆಂದು ಪ್ರೇಯಸಿಗೆ ರಾಡಲ್ಲಿ ಹೊಡೆದ ಪ್ರೇಮಿ: ಬಂಧನ
ತನ್ನಿಂದ ದೂರಾಗೂತ್ತಿದ್ದಾಳೆಂದು ಭಾವಿಸಿ ಪ್ರಿಯತಮೆಯ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದ್ದ ಪ್ರೇಮಿಯೊಬ್ಬನನ್ನು ಮೈಕೋ ಲೇಔಟ್ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.

ಕಂಪನಿ ನೋಂದಣಿ ಸಮಸ್ಯೆಗೆ ಸಚಿವ ಎಂಬಿ ಪಾಟೀಲ್ ಸ್ಪಂದನೆ: 'ನಮ್ಮ ಆತ್ಮವಿಶ್ವಾಸ ಹೆಚ್ಚಿದೆ.. ಥ್ಯಾಂಕ್ಯೂ ಸರ್'.. ಟೆಕ್ಕಿ ಪ್ರತಿಕ್ರಿಯೆ!
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕಂಪನಿ ಸ್ಥಾಪಿಸಬೇಕು ಎಂಬ ಆಸೆಯಿಂದ ಇಲ್ಲಿಗೆ ಬಂದು ಕಂಪನಿ ನೋಂದಣಿಗೆ 2 ತಿಂಗಳ ಕಾಲ ಕಷ್ಟಪಟ್ಟರೂ ಸಾಧ್ಯವಾಗದೇ ಟೆಕ್ಕಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡ ಬೆನ್ನಲ್ಲೇ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯೆ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಬೆಂಗಳೂರು: ಕೆಂಗೇರಿಯಲ್ಲಿ ಮರಕ್ಕೆ ಕಾರು ಡಿಕ್ಕಿ, ಟೆಕ್ಕಿ ಸಾವು
ಕೆಂಗೇರಿಯಲ್ಲಿ ಶನಿವಾರ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ನಂತರ 35 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಸಾವನ್ನಪ್ಪಿದ್ದಾರೆ. ಮೃತನನ್ನು ಕನಕಪುರ ರಸ್ತೆ ತಾತಗುಣಿಯ ನಿಖಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಅವರ ತಂದೆ ಮಾಜಿ ಸೈನಿಕರಾಗಿದ್ದರೆ, ಅವರ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಂಪನಿ ನೋಂದಣಿಗೆ ಟೆಕ್ಕಿ ಹೈರಾಣು; ಪ್ರತಿಕ್ರಿಯಿಸಿದ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು?
ಭಾರತದಲ್ಲಿ ಅದರಲ್ಲೂ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕಂಪನಿ ಸ್ಥಾಪಿಸಬೇಕು ಎಂಬ ಆಸೆಯಿಂದ ಇಲ್ಲಿಗೆ ಬಂದು ಕಂಪನಿ ನೋಂದಣಿಗೆ 2 ತಿಂಗಳ ಕಾಲ ಕಷ್ಟಪಟ್ಟರೂ ಸಾಧ್ಯವಾಗದೇ ಟೆಕ್ಕಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡಿದ್ದು, ಇದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯೆ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಬೆಂಗಳೂರು: ಡೇಟಿಂಗ್ ಆ್ಯಪ್'ನಲ್ಲಿ ಮಹಿಳಾ ಟೆಕ್ಕಿಗೆ ವಂಚನೆ: ಆರೋಪಿ ಬಂಧನ
ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿ ಮಹಿಳಾ ಟೆಕ್ಕಿಗೆ ವಂಚನೆ ಮಾಡಿದ್ದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬೆಂಗಳೂರು: ಡೇಟಿಂಗ್ ಆ್ಯಪ್ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಟೆಕ್ಕಿ!
ಡೇಟಿಂಗ್ ಆ್ಯಪ್'ನಲ್ಲಿ ಪರಿಚಯವಾಗಿದ್ದ ವ್ಯಕ್ತಿ ಸಾಫ್ಟ್‌ವೇರ್ ಇಂಜಿಯರ್ ಒಬ್ಬಳಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಬೈಕ್ ಸವಾರರಿಂದ ಟೆಕ್ಕಿ ಕಾರ್ ಚೇಸ್ ಪ್ರಕರಣಕ್ಕೆ ಟ್ವಿಸ್ಟ್: ಸವಾರರು ಕಾರನ್ನು ಹಿಂಬಾಲಿಸಿದ್ದೇಕೆ? ಪೊಲೀಸರು ಹೇಳಿದ್ದೇನು?
ಹಳೆ ಮದ್ರಾಸ್ ರಸ್ತೆಯ ಬಿಇಎಂಎಲ್ ಗೆ ಸುರಂಜನ್ ದಾಸ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಇಬ್ಬರು ಬೈಕ್ ಸವಾರರು ತನ್ನನ್ನು ಮತ್ತು ತನ್ನ ಕುಟುಂಬವನ್ನು ಹಿಂಬಾಲಿಸಿದ ಬಗ್ಗೆ ಟ್ವೀಟ್ ಮಾಡಿದ ಟೆಕ್ಕಿಯೇ ಇದೀಗ ತಪ್ಪಿತಸ್ಥನಾಗಿದ್ದಾನೆ.

ಕೆ.ಆರ್.ಪುರಂ ಹಿಟ್ ಆ್ಯಂಡ್ ರನ್ ಕೇಸ್: ಇಬ್ಬರು ಮಹಿಳೆಯರ ಸಾವಿಗೆ ಕಾರಣನಾಗಿದ್ದ ಟೆಕ್ಕಿ ಬಂಧನ
ಹಿಟ್ ಅಂಡ್ ರನ್ ಪ್ರಕರಣವೊಂದರಲ್ಲಿ ಇಬ್ಬರು ಮಹಿಳೆಯರ ಸಾವಿಗೆ ಕಾರಣನಾಗಿದ್ದ ಟೆಕ್ಕಿಯೊಬ್ಬನನ್ನು ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.

