Tata Group

ಬೆಂಗಳೂರನ್ನು ಪ್ರಮುಖ ವೈಮಾನಿಕ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ Air India-BIAL ಸಹಿ!
ಬೆಂಗಳೂರನ್ನು ಪ್ರಮುಖ ವೈಮಾನಿಕ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಏರ್ ಇಂಡಿಯಾ, ಬಿಐಎಎಲ್ ಸಹಿ ಮಾಡಿದೆ.

ಐಪಿಎಲ್ ಪ್ರಾಯೋಜಕತ್ವ ದಾಖಲೆ; ಟೈಟಲ್ ಹಕ್ಕು ಮತ್ತೆ ಟಾಟಾ ಪಾಲು, 2024 ರಿಂದ 2028ರವರೆಗಿನ 'ಸ್ಪಾನ್ಸರ್ ಶಿಪ್'!
ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಪ್ರಾಯೋಜಕತ್ವ ಹಕ್ಕು ಮತ್ತೆ ಟಾಟಾ ಸಂಸ್ಥೆಯ ಪಾಲಾಗಿದ್ದು, ಹಾಲಿ ಅಂದರೆ 2024ರಿಂದ 2028ರವರೆಗಿನ ಟೈಟಲ್ 'ಸ್ಪಾನ್ಸರ್ ಶಿಪ್' ಹಕ್ಕು ಟಾಟಾ ಸಮೂಹದ ಪಾಲಾಗಿದೆ.

ಸೈರಸ್ ಮಿಸ್ತ್ರಿಗೆ ಆದದ್ದು ನಿಮಗೂ ಆಗುತ್ತದೆ: ರತನ್ ಟಾಟಾಗೆ ಬೆದರಿಕೆ ಕರೆ, ಮುಂಬೈ ಪೊಲೀಸರ ಹೈ ಅಲರ್ಟ್, ಸುಳಿವು ಲಭ್ಯ
ಹಿರಿಯ ಕೈಗಾರಿಕೋದ್ಯಮಿ ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರಿಗೆ ಬೆದರಿಕೆ ಕರೆ ಬಂದಿದ್ದು, 'ಸೈರಸ್ ಮಿಸ್ತ್ರಿಗೆ ಬಂದ ಸ್ಥಿತಿಯೇ ಬರಲಿದೆ ಎಂದು ಎಚ್ಚರಿಸಲಾಗಿದೆ.

ಪ್ರಯಾಣಿಕರಿಗೆ ಅನಾನುಕೂಲ: ಮತ್ತೆ ಏರ್ ಇಂಡಿಯಾಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಡಿಜಿಸಿಎ
ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಮಾನದಂಡಗಳನ್ನು ಅನುಸರಿಸದ ಏರ್ ಇಂಡಿಯಾಕ್ಕೆ ವಿಮಾನಯಾನ ವಲಯದ ನಿಯಂತ್ರಕ (ಡಿಜಿಸಿಎ) 10 ಲಕ್ಷ ರೂಪಾಯಿ ದಂಡ ವಿಧಿಸಿದೆ.

TATA ತೆಕ್ಕೆಗೆ ವಿಸ್ಟ್ರಾನ್: ಟಾಟಾ ಗ್ರೂಪ್ ಈಗ ಭಾರತದ ಮೊದಲ ಸ್ವದೇಶಿ ಐಫೋನ್ ತಯಾರಕ
Apple Inc ನ ಪ್ರಮುಖ ಪೂರೈಕೆದಾರರಲ್ಲಿ ಒಬ್ಬರಾದ Wistron Corp, ದಕ್ಷಿಣ ಭಾರತದಲ್ಲಿನ ಒಂದು ಘಟಕವನ್ನು ಟಾಟಾ ಗ್ರೂಪ್ ಮಾರಾಟ ಮಾಡಿದ ನಂತರ ಇದೀಗ ಟಾಟಾ ಭಾರತದ ಮೊದಲ ಸ್ವದೇಶಿ ಐಫೋನ್ ತಯಾರಿಕೆಗೆ ಸಿದ್ಧವಾಗಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ.

ಏರ್ ಇಂಡಿಯಾದ ನೂತನ ಲೋಗೋ ಅನಾವರಣ ಮಾಡಿದ ಟಾಟಾ ಸಂಸ್ಥೆ
ಟಾಟಾ ಸಮೂಹದ ಒಡೆತನದಲ್ಲಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ನೂತನ ಲೋಗೊವನ್ನು ಗುರುವಾರ ಅನಾವರಣಗೊಳಿಸಲಾಯಿತು.

ಉದ್ಯಮಿ ರತನ್ ಟಾಟಾಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ!
ಭಾರತದ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವವಾದ ಆರ್ಡರ್ ಆಫ್ ಆಸ್ಟ್ರೇಲಿಯಾವನ್ನು ಸ್ವೀಕರಿಸಿದರು. ಭಾರತದಲ್ಲಿರುವ ಆಸ್ಟ್ರೇಲಿಯಾದ ರಾಯಭಾರಿ ಬ್ಯಾರಿ ಓ'ಫಾರೆಲ್ ಟ್ವಿಟರ್‌ನಲ್ಲಿ ಈ ಮಾಹಿತಿ ನೀಡಿದ್ದಾರೆ.

2023ರಲ್ಲಿ ಏರ್ ಇಂಡಿಯಾದಿಂದ 5100 ಪೈಲಟ್, ಕ್ಯಾಬಿನ್ ಸಿಬ್ಬಂದಿಗಳ ನೇಮಕ: ವರದಿ
ಇತ್ತೀಚಿಗಷ್ಟೇ 300ಕ್ಕೂ ಅಧಿಕ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಏರ್ ಇಂಡಿಯಾ ಇದೀಗ 2023ರಲ್ಲಿ 5100 ಪೈಲಟ್ ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳ ನೇಮಕಕ್ಕೆ ಮುಂದಾಗಿದೆ.

ಏರೋ ಇಂಡಿಯಾ 2023: ಭಾರತದಲ್ಲಿ ಹೊಸ ಲಾಜಿಸ್ಟಿಕ್ಸ್ ಕೇಂದ್ರ ಸ್ಥಾಪನೆ; ಬೋಯಿಂಗ್ ಮಹತ್ವದ ಘೋಷಣೆ
ಟಾಟಾ ಗ್ರೂಪ್ ಒಡೆತನ ಏರ್ ಇಂಡಿಯಾ ಸಂಸ್ಥೆ ದೊಡ್ಡ ಪ್ರಮಾಣದಲ್ಲಿ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುವಂತೆಯೇ ಇತ್ತ ಜಗತ್ತಿನ ಅತೀ ದೊಡ್ಡ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಭಾರತದಲ್ಲಿ ತನ್ನ ಹೊಸ ಲಾಜಿಸ್ಟಿಕ್ಸ್ ಕೇಂದ್ರ ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ.

