tamilnadu

ಚೆನ್ನೈ: ಎಟಿಎಂಗೆ ಸೋಂಕು ನಿವಾರಕ ಸಿಂಪಡಿಸುವ ನೆಪದಲ್ಲಿ 8.2 ಲಕ್ಷ ರೂ ಹಣ ದೋಚಿದ ಖತರ್ನಾಕ್ ಕಳ್ಳ!
ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ದೇಶಾದ್ಯಂತ ಸೋಂಕು ನಿವಾರಕ ಸಿಂಪಡಣೆ ಭರದಿಂದ ಸಾಗಿದೆ. ಇದರ ನಡುವೆಯೇ ಚೆನ್ನೈನಲ್ಲೋರ್ವ ಖತರ್ನಾಕ್ ಕಳ್ಳ ಎಟಿಎಂಗೆ ಸೋಂಕು ನಿವಾರಕ ಸಿಂಪಡಣೆ ಮಾಡುವ ನೆಪದಲ್ಲಿ 8.2 ಲಕ್ಷ ಹಣವನ್ನು ಎಗರಿಸಿದ್ದಾನೆ.

ವಿಮಾನ ಸೇವೆ ಪುನಾರಂಭ: 22 ಪ್ರಯಾಣಿಕರಲ್ಲಿ ಕೊರೋನಾ ಸೋಂಕು, ತಮಿಳುನಾಡಿನಲ್ಲೇ 17 ಪ್ರಕರಣಗಳು
ಮಾರಕ ಕೊರೋನಾ ವೈರಸ್ ಲಾಕ್ ಡೌನ್ ಜಾರಿ ಬಳಿಕ ಸ್ಥಗಿತವಾಗಿದ್ದ ವಿಮಾನಯಾನ ಸೇವೆಗೆ ಸೋಮವಾರ ಮರು ಚಾಲನೆ ನೀಡಿದ ಬೆನ್ನಲ್ಲೇ 22 ವಿಮಾನಯಾನ ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ ಎಂದು ತಿಳಿದುಬಂದಿದೆ.

ತಮಿಳುನಾಡಿನಲ್ಲಿ ಕೊರೋನಾ ಆರ್ಭಟ; ಒಂದೇ ಆಸ್ಪತ್ರೆಯ 15 ವೈದ್ಯರಿಗೆ ಸೋಂಕು!
ನೆರೆಯ ತಮಿಳುನಾಡಿನಲ್ಲಿ ಕೊರೋನಾ ಆರ್ಭಟ ಮತ್ತಷ್ಟು ಜೋರಾಗಿದ್ದು, ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಸುಮಾರು 15 ವೈದ್ಯರಿಗೇ ಸೋಂಕು ಪಸರಿಸಿದೆ ಎಂದು ತಿಳಿದುಬಂದಿದೆ.

ಜಯಲಲಿತಾ ಸ್ಮಾರಕ: ನಿವಾಸವನ್ನು ವಶಕ್ಕೆ ಪಡೆದ ತಮಿಳುನಾಡು ಸರ್ಕಾರ
ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ನಿವಾಸ ವೇದ ನಿಲಯಂನ್ನು ಸ್ಮಾರಕವನ್ನಾಗಿಸುವ ನಿಟ್ಟಿನಲ್ಲಿ ತಮಿಳು ನಾಡು ಸರ್ಕಾರ ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದೆ

ವಿಧಿಯಾಟ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾಗಲೆ ಹೃದಯಾಘಾತದಿಂದ ಕೊರೋನಾ ಸೋಂಕಿತೆ ಸಾವು!
ಇದಕ್ಕೇ ಹೇಳೋದು ವಿಧಿಯಾಟ ಎಂದು.. ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖಳಾಗಿದ್ದ ಸೋಂಕಿತರೊಬ್ಬರು ಆಸ್ಪತ್ರೆಯಿಂದ ಮನೆಗೆ ಮರಳುತ್ತಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಕೊರೋನಾ ವಿರುದ್ದ ಭಾರೀ ಕಾರ್ಯಾಚರಣೆಗಿಳಿದ ತ.ನಾಡು ಸರ್ಕಾರ: ಚೆನ್ನೈನ ಪ್ರತೀ ಮನೆ ತಪಾಸಣೆ, 16,000 ಸಿಬ್ಬಂದಿ ನಿಯೋಜನೆ
ದೇಶದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ವಿರುದ್ಧ ತಮಿಳುನಾಡು ಸರ್ಕಾರ ಭಾರೀ ಕಾರ್ಯಾಚರಣೆ ನಡೆಸಲು ಮುಂದಾಗಿದ್ದು, ಚೆನ್ನೈ ನಗರದಲ್ಲಿರುವ ಪರತೀ ಮನೆ ತಪಾಸಣೆ ಮಾಡಲು ನಿರ್ಧಾರ ಕೈಗೊಂಡಿದೆ.

ತಬ್ಲೀಗ್ ಜಮಾತ್ನಿಂದ ಹಿಂದಿರುಗಿದ ವ್ಯಕ್ತಿ ಸಾವು: ತಮಿಳುನಾಡಿನಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 2ಕ್ಕೆ ಏರಿಕೆ
ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ ತಮಿಳುನಾಡು ರಾಜ್ಯದಲ್ಲಿ ತಬ್ಲೀಘ್ ಜಮಾತ್ನಿಂದ ಹಿಂದಿರುಗಿದ್ದ ವ್ಯಕ್ತಿಯೊಬ್ಬರು ಶನಿವಾರ ಬಲಿಯಾಗಿದ್ದು, ಇದರಂತೆ ದೇಶದಲ್ಲಿ ಕೊರೋನಾ ವೈರಸ್'ಗೆ ಬಲಿಯಾದವರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ.

ಕೋವಿಡ್-19: ಕೇರಳ, ತಮಿಳುನಾಡಿನಲ್ಲಿ ಹೊಸ ಪ್ರಕರಣಗಳು, ಒಟ್ಟಾರೇ ದೇಶದಲ್ಲಿ 1065 ಮಂದಿಗೆ ಸೋಂಕು
ಕೇರಳ ಹಾಗೂ ತಮಿಳುನಾಡಿನಲ್ಲಿ ಕೋವಿಡ್ -19 ಹೊಸ ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಈವರೆಗೂ ಸೋಂಕಿತರ ಸಂಖ್ಯೆ 1065 ಆಗಿದೆ

ಕ್ವಾರಂಟೈನ್ ನಲ್ಲಿದ್ದು ಮಾನಸಿಕ ಸ್ಥೀಮಿತ ಕಳೆದುಕೊಂಡ ವ್ಯಕ್ತಿ ಬೆತ್ತಲಾಗಿ ಓಡಿ ಮಹಿಳೆ ಕತ್ತು ಕಚ್ಚಿ ಕೊಂದ
ವಿದೇಶದಿಂದ ಭಾರತಕ್ಕೆ ಬಂದು ಹೋಂ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಯೋರ್ವ ಮಾನಸಿಕ ಸ್ಥೀಮಿತ ಕಳೆದುಕೊಂಡು ರಾತ್ರಿ ಮನೆಯಿಂದ ಬೆತ್ತಲಾಗಿ ಓಡಿ ಹೋಗಿ ಮಹಿಳೆಯೊಬ್ಬರ ಕತ್ತನ್ನು ಕಚ್ಚಿ ಕೊಂದು ಹಾಕಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

