Tamil Nadu, West Bengal

ನಮ್ಮ ಹೋರಾಟ 'ಸರಿಯಾದ ಹಾದಿಯಲ್ಲಿ' ಸಾಗಿದೆ; ಜುಲೈ ವೇಳೆಗೆ ರಾಜಕೀಯ ಪಕ್ಷ: ಅಣ್ಣಾಮಲೈ
ಸದ್ಯ 18 ಲಕ್ಷ ಸದಸ್ಯರು 'ಯಾವುದೇ ನಿರೀಕ್ಷೆಗಳಿಲ್ಲದೆ' ಆಂದೋಲನಕ್ಕೆ ಸೇರಿದ್ದಾರೆ. ಸದಸ್ಯತ್ವವು ಆನ್ಲೈನ್ನಲ್ಲಿ ಮಾತ್ರವಲ್ಲದೆ ನೇರವಾಗಿ ಜನರನ್ನು ಭೇಟಿ ಮಾಡುವ ಮೂಲಕವೂ ನಡೆಯುತ್ತಿದೆ ಎಂದು ಹೇಳಿದರು.

ಜೂನ್ ತಿಂಗಳ ಮೊದಲಾರ್ಧ ಕಡಿಮೆ ಮಳೆ: ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರಿನ ಹಂಚಿಕೆಯಲ್ಲಿ ಶೇ. 60ರಷ್ಟು ಕೊರತೆ
ಪ್ರಸ್ತುತ ಜಲವರ್ಷದ (ಜೂನ್ 2026 – ಮೇ 2027) ಮೊದಲ ಸಭೆಯಲ್ಲಿ, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಎರಡೂ ರಾಜ್ಯಗಳಿಗೆ ಖಾರಿಫ್ ಬೆಳೆ ಬಿತ್ತನೆಗಾಗಿ ರೈತರಿಗೆ ನೀರು ಒದಗಿಸುವ ವಿಷಯದಲ್ಲಿ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದು, ಕುಡಿಯುವ ನೀರಿನ ಅಗತ್ಯಗಳಿಗೆ ಮೊದಲ ಆದ್ಯತೆ ನೀಡುವಂತೆ ಸೂಚಿಸಿದೆ.

'ಸೈಲೆಂಟ್ ಮೋಡ್'ನಿಂದ ಯಾವಾಗ ಹೊರಬರುತ್ತೀರಿ? ಯಾಕೀ ದಿವ್ಯ ಮೌನ?: ಸಿಎಂ ವಿಜಯ್ಗೆ ಸ್ಟಾಲಿನ್ ಪ್ರಶ್ನೆ
"ಡಿಎಂಕೆಯಿಂದ ನೀವು ದೊಡ್ಡ ಪ್ರತಿಭಟನೆಯನ್ನು ನಿರೀಕ್ಷಿಸುತ್ತೀರಾ? ಮಿಸ್ಟರ್ ಮುಖ್ಯಮಂತ್ರಿಗಳೇ, ನೀವು ಏಕೆ ಮೌನವಾಗಿದ್ದೀರಿ?" ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.

ತಮಿಳುನಾಡು ರೈತರಿಗೆ ಸಿಎಂ ವಿಜಯ್ ಭರ್ಜರಿ ಗಿಫ್ಟ್; 75,000 ರೂ ವರೆಗಿನ ಬೆಳೆ ಸಾಲ ಸಂಪೂರ್ಣ ಮನ್ನಾ!
ರೈತ ಸಂಘಗಳು ಮತ್ತು ರಾಜಕೀಯ ಪಕ್ಷಗಳ ಬೇಡಿಕೆಗಳನ್ನು ಅನುಸರಿಸಿ ಸಿಎಂ ವಿಜಯ್ ಅವರು, ಸಹಕಾರಿ ಬ್ಯಾಂಕುಗಳಿಂದ ರೈತರು ಪಡೆದ 75,000 ರೂ.ಗಳವರೆಗಿನ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಹೇಳಿದ್ದಾರೆ.

ಎಲ್ಲವೂ ಮಿತಿ ಮೀರಿದೆ: ಮಮತಾ ಬ್ಯಾನರ್ಜಿ ಸೇರಿದಂತೆ ಮುಖಂಡರಿಗೆ ನೋಟಿಸ್ ಕಳುಹಿಸಿದ TMC ಸಂಸದೆ ಪುತ್ರ!
ತೃಣಮೂಲ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷದ ಮಧ್ಯೆ, ಬಂಡಾಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರ ಪುತ್ರ ಬೈದ್ಯನಾಥ್ ಘೋಷ್, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ಹಲವಾರು ಹಿರಿಯ ನಾಯಕರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.

AIADMKಗೆ ರಾಜೀನಾಮೆ ನೀಡಿದ ಖ್ಯಾತ ನಟಿ ಗೌತಮಿ ತಡಿಮಲ್ಲ!
ಬಿಜೆಪಿ ತೊರೆದ ಬಳಿಕ 2024ರಲ್ಲಿ ಗೌತಮಿ ಅವರು ಎಡಪ್ಪಾಡಿ ಕೆ ಪಳನಿಸ್ವಾಮಿ ಸಮ್ಮುಖದಲ್ಲಿ ಎಐಎಡಿಎಂಕೆ ಸೇರಿದರು ಮತ್ತು ನಂತರ ಅದೇ ವರ್ಷದ ಅಕ್ಟೋಬರ್ನಲ್ಲಿ ಪಕ್ಷದ ಉಪ ಪ್ರಚಾರ ಕಾರ್ಯದರ್ಶಿಯಾಗಿ ನೇಮಕಗೊಂಡರು.

ಕೋಲ್ಕತಾ ಸರ್ಕಾರಿ ಕಟ್ಟಡದಲ್ಲಿ ಅಗ್ನಿ ದುರಂತ: ಚುನಾವಣೆಯಲ್ಲಿ ಬಳಸಲಾಗಿದ್ದ 4,000 ಇವಿಎಂ ಭಸ್ಮ; ಅವಘಡದ ಸುತ್ತ ಅನುಮಾನದ ಹುತ್ತ!
"ಸುಮಾರು 4,000 ಇವಿಎಂಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 10 ಕ್ಷೇತ್ರಗಳಲ್ಲಿ ಆ ಇವಿಎಂಗಳನ್ನು ಬಳಸಲಾಗಿತ್ತು" ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವರು ತಿಳಿಸಿದ್ದಾರೆ.

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದು, ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ ವಿಜಯ್; Video
ಇಂದು ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಜಯ್ ಅವರು, ಅಲ್ಲಿಂದ ಕಾರಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು.

'ಯಾವುದೇ ಕಾರಣಕ್ಕೂ ದೀದಿ ಕೈ ಬಿಡಲ್ಲ': ಪ್ರಧಾನಿ ಮೋದಿ ಹೊಗಳಿಕೆ ನಂತರ ಮಮತಾ ಬ್ಯಾನರ್ಜಿ ಪರ ಶತ್ರುಘ್ನ ಸಿನ್ಹಾ ಬ್ಯಾಟಿಂಗ್!
ಶತ್ರುಘ್ನ ಸಿನ್ಹಾ ಅವರ ಮುಂದಿನ ನಡೆಯ ಬಗ್ಗೆ ಊಹಾಪೋಹಗಳು ಹೆಚ್ಚಾಗುತ್ತಿದ್ದಂತೆ, ನಟ-ರಾಜಕಾರಣಿ, ವರದಿಗಳನ್ನು ತಳ್ಳಿಹಾಕಿದ್ದಾರೆ.

