Taliban

ತಾಲಿಬಾನಿಗಳಿಂದ ಆಫ್ಘನ್ ಪಾಪ್ ಸ್ಟಾರ್ ಅರಿಯಾನ ಸಯೀದ್ ಎಸ್ಕೇಪ್!
ಅಫ್ಘಾನಿಸ್ತಾನದಲ್ಲಿ ಹೆಂಗಸರು ಬುರ್ಖಾ ತೊಡದಿದ್ದರೆ ತಲೆದಂಡ ಖಚಿತ ಎನ್ನುವ ವಾತಾವರಣ ಎರಡು ದಶಕಗಳ ನಂತರ ನಿರ್ಮಾಣವಾಗುತ್ತಿದೆ. ಹೀಗಿರುವಾಗ, ಸಾವಿರಾರು ಆಫ್ಘನ್ ಪುರುಷರ ನಿದ್ದೆಗೆಡಿಸಿದ್ದ ಓರ್ವ ಪಾಪ್ ಸ್ಟಾರ್ ಅನ್ನು ಅವರು ಜೀವಂತ ಬಿಟ್ಟಾರೆಯೇ?

72 ಮಂದಿ ಆಫ್ಘನ್ ಮೂಲದ ಸಿಖ್ಖರು ಮತ್ತು ಹಿಂದೂಗಳನ್ನು ವಿಮಾನ ಏರಲು ಬಿಡದ ತಾಲಿಬಾನ್
ಅಫ್ಘಾನಿಸ್ತಾನ ಮೂಲದ 72 ಮಂದಿ ಸಿಖ್ಖರು ಮತ್ತು ಹಿಂದೂಗಳ ಗುಂಪು ಭಾರತಕ್ಕೆ ಸ್ಥಳಾಂತರಗೊಳ್ಳುವ ಸಲುವಾಗಿ ವಿಮಾನ ಏರಬೇಕಿತ್ತು. ಆದರೆ ಅಷ್ಟರಲ್ಲಿ ಎಚ್ಚೆತ್ತುಕೊಂಡ ತಾಲಿಬಾನಿಗಳು ಅವರನ್ನು ತಡೆದಿದ್ದಾರೆ ಎಂದು ವಿಶ್ವ ಪಂಜಾಬಿ ಸಂಘದ ಅಧ್ಯಕ್ಷ ವಿಕ್ರಂ ಜಿತ್ ಸಾಹ್ನಿ ತಿಳಿಸಿದ್ದಾರೆ.

ತಾಲಿಬಾನ್ ಮತ್ತು ಅಲ್ ಖೈದಾ ನಡುವೆ ಬೇರ್ಪಡಿಸಲಾಗದ ನಂಟು: ತಜ್ಞರ ವರದಿ
ತಾಲಿಬಾನ್ ಮತ್ತು ಅಲ್ ಖೈದಾ ವಿಚಾರಧಾರೆಗಳಲ್ಲಿ ಸಾಮ್ಯತೆ ಇದ್ದು, ಅವೆರಡೂ ಸಂಘಟನೆಗಳು ಒಂದೇ ರೀತಿ ಹೋರಾಟ ನಡೆಸಿವೆ ಹಾಗೂ ಜಗತ್ತಿನ ವಿರೋಧ ಕಟ್ಟಿಕೊಂಡಿವೆ. ಎಲ್ಲಕ್ಕಿಂತ ಹೆಚ್ಚಾಗಿ ಅವೆರಡೂ ಸಂಘಟನೆಗಳ ನಡುವೆ ವಿವಾಹ ಸಂಬಂಧಗಳೂ ಏರ್ಪಟ್ಟಿವೆ.

ಸರ್ಕಾರ ರಚನೆ ಕುರಿತು ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಕಾಬುಲ್'ನಲ್ಲಿ ಮಾತುಕತೆ!
ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಕಾಬುಲ್ ತಲುಪಿದ್ದು, ತಮ್ಮ ಸಂಘಟನೆಯ ಸದಸ್ಯರು ಹಾಗೂ ಇತರೆ ರಾಜಕಾರಣಿಗಳೊಂದಿಗೆ ಹೊಸ ಸರ್ಕಾರ ರಚನೆ ಕುರಿತು ಮಾತುಕತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಅಧಿಕೃತ ತಾಲಿಬಾನ್ ಜಾಲತಾಣಗಳು ಸ್ಥಗಿತ: ಕಾರಣ ನಿಗೂಢ
ತಾಲಿಬಾನಿಗಳು ತಮ್ಮ ವಿಜಯ ಸಂದೇಶವನ್ನು, ಘೋಷಣೆಗಳನ್ನು ಅಧಿಕೃತ ಹೇಳಿಕೆಗಳನ್ನು ಈ ಜಾಲತಾಣಗಳಲ್ಲಿ ಪ್ರಕಟ ಮಾಡುತ್ತಿದ್ದರು.

ಉಗ್ರ ಸಂಘಟನೆಗಳ ನಂಟು ಕುರಿತು ಮೌನ ತಾಳಿದ ತಾಲಿಬಾನ್: ಅಫ್ಘಾನಿಸ್ತಾನದ ಬೆಳವಣಿಗೆಳು ಜಾಗತಿಕ ಭದ್ರತೆಗೆ ಸವಾಲು!
20 ವರ್ಷಗಳ ನಂತರ ಅಫ್ಘಾನಿಸ್ಥಾನ ರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿರುವ ತಾಲಿಬಾನ್ ಉಗ್ರ ಸಂಘಟನೆ, ಅಲ್-ಖೈದಾ ದಂತಹ ಭಯೋತ್ಪಾದಕ ಸಂಘಟನೆಗಳೊಂದಿನ ನಂಟು ಹೊಂದಿರುವ ಕುರಿತು ಮೌನ ತಾಳಿರುವುದಕ್ಕೆ ಇಡೀ ವಿಶ್ವ ಸಮುದಾಯ ಕಳವಳ ವ್ಯಕ್ತಪಡಿಸುತ್ತಿದೆ.

ವಿರೋಧಿ ಬಣದಿಂದ 3 ಜಿಲ್ಲೆಗಳು ತಾಲಿಬಾನ್ ಮುಕ್ತ, ಹಲವು ತಾಲಿಬಾನಿಗಳ ಹತ್ಯೆ: ವರದಿ
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಹೆದರಿ ದೇಶ ಬಿಟ್ಟು ಪರಾರಿಯಾಗುತ್ತಿರುವ ನಾಗರೀಕರ ನಡುವೆಯೇ ಅಲ್ಲೊಂದು ಸಣ್ಣ ತಾಲಿಬಾನ್ ವಿರೋಧಿ ಬಣ ಕೂಡ ಸೃಷ್ಟಿಯಾಗಿದ್ದು, ಈ ಬಣದ ದಿಟ್ಟ ಹೋರಾಟದಿಂದಾಗಿ ಕೇವಲ ಕೆಲವೇ ದಿನಗಳ ಅಂತರದಲ್ಲಿ 3 ಜಿಲ್ಲೆಗಳು ತಾಲಿಬಾನ್ ಮುಕ್ತವಾಗಿದೆ.

ಆಫ್ಘಾನಿಸ್ತಾನದಲ್ಲಿ ಇತಿಹಾಸದ ಅತಿದೊಡ್ಡ ಮತ್ತು ಅತ್ಯಂತ ಕಷ್ಟಕರವಾದ ಏರ್‌ಲಿಫ್ಟ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್
ಆಫ್ಘಾನಿಸ್ತಾನದಲ್ಲಿ ಹಾಲಿ ಪರಿಸ್ಥಿತಿ ಕುರಿತಂತೆ ಜಗತ್ತಿನಾದ್ಯಂತ ವ್ಯಾಪಕ ಟೀಕೆಗಳು ಎದುರಾಗುತ್ತಿರುವ ಬೆನ್ನಲ್ಲೇ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಇತಿಹಾಸದ ಅತಿದೊಡ್ಡ ಮತ್ತು ಅತ್ಯಂತ ಕಷ್ಟಕರವಾದ ಏರ್‌ಲಿಫ್ಟ್ ಅಮೆರಿಕ ಸೇನೆ ಆಫ್ಘಾನಿಸ್ತಾನದಲ್ಲಿ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಭೀಕರ ದೃಶ್ಯ: ಶರಣಾಗತನಾಗಿದ್ದ ಪೊಲೀಸ್ ಮುಖ್ಯಸ್ಥನ ಕೈಕಾಲು ಕಟ್ಟಿ ಗುಂಡಿಕ್ಕಿ ಕೊಂದ ತಾಲಿಬಾನಿಗಳು!
ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ತಾವು ಎಲ್ಲರನ್ನು ಕ್ಷಮಿಸಿದ್ದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಆಫ್ಘಾನ್ ಯೋಧರು, ಪೊಲೀಸರನ್ನು ಹುಡುಕಿ ಹುಡುಕಿ ಗುಂಡಿಕ್ಕಿ ಕೊಲ್ಲುವ ಮೂಲಕ ಭೀಕರತೆ ಸೃಷ್ಟಿಸುತ್ತಿದ್ದಾರೆ.

