Taliban

ಭಾರತ ಪ್ರವೇಶಿಸಲಿಚ್ಛಿಸುವ ಆಫ್ಘನ್ನರಿಗೆ ಇನ್ಮುಂದೆ ಇ-ವೀಸಾ ಕಡ್ಡಾಯ
ಕೆಲ ಆಫ್ಘನ್ನರ ಪಾಸ್ ಪೋರ್ಟ್ ಗಳು ಕಾಣೆಯಾಗಿರುವ ಬಗ್ಗೆ ವರದಿಗಳು ಕೇಳಿಬಂದ ಹಿನ್ನೆಲೆಯಲ್ಲಿ ಭಾರತ ಈ ಹಿಂದೆ ಆಫ್ಘನ್ನರಿಗೆ ನೀಡಿದ್ದ ವೀಸಾಗಳಿಗೆ ನಿರ್ಬಂಧ ಹೇರಿದೆ. ಕೇವಲ ಇ- ವೀಸಾಗಳು ಮಾತ್ರವೆ ಮಾನ್ಯತೆ ನೀಡಲಾಗುವುದು.

ಮುಂದಿನ ಆಫ್ಘಾನಿಸ್ತಾನ ಸರ್ಕಾರಕ್ಕೆ ಧಾರ್ಮಿಕ ವಿದ್ವಾಂಸರ ನಾಯಕತ್ವ: ತಾಲಿಬಾನ್
ವಾರದ ಹಿಂದೆ ಉಗ್ರ ಸಂಘಟನೆ ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನನ್ನು ವಶಕ್ಕೆ ಪಡೆದ ನಂತರ ಅಲ್ಲಿನ ಸರ್ಕಾರ ಪತನಗೊಂಡು ಅರಾಜಕತೆ, ಅಸ್ಥಿರತೆ ಉಂಟಾಗಿರುವಂತೆಯೇ, ಮುಂಬರುವ ಸರ್ಕಾರವನ್ನು ಧಾರ್ಮಿಕ ವಿದ್ವಾಂಸರು ಮುನ್ನಡೆಸಲಿದ್ದಾರೆ ಎಂದು ತಾಲಿಬಾನ್ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ 10 ಮಂದಿಗೆ ಕೊರೊನಾ ಸೋಂಕು
ಸೋಮವಾರ ಮತ್ತು ಮಂಗಳವಾರ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದಿದ್ದ 81 ಆಫ್ಘನ್ ನಾಗರಿಕರಿಗೆ ಸೋಂಕು ಪತ್ತೆ ಪರೀಕ್ಷೆ ಕೈಗೊಳ್ಳಲಾಗಿತ್ತು.

ಅಫ್ಘಾನಿಸ್ತಾನ ಭಯೋತ್ಪಾದನೆಯ ನೆಲೆಯಾಗದಂತೆ ತಡೆಯಲು ಜಿ-7 ರಾಷ್ಟ್ರಗಳು ಒಪ್ಪಿಗೆ: ಜೋ ಬೈಡನ್
ತಾಲಿಬಾನ್ ವಿಚಾರದಲ್ಲಿ ಜಿ-7 ರಾಷ್ಟ್ರಗಳು ಒಗ್ಗಟ್ಟಾಗಿದ್ದು, ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯ ನೆಲೆಯಾಗದಂತೆ ತಡೆಯಲು ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಕಾಶ್ಮೀರದಲ್ಲಿ ಪಾಕಿಸ್ತಾನಕ್ಕೆ ತಾಲಿಬಾನ್ ನೆರವು: ಇಮ್ರಾನ್ ಖಾನ್' ಪಾರ್ಟಿ ಲೀಡರ್ ಹೇಳಿಕೆ; ವಿಡಿಯೋ
ಪಾಕಿಸ್ತಾನ ಸರ್ಕಾರ ಕಾಶ್ಮೀರದಲ್ಲಿ ತಾಲಿಬಾನ್ ನೆರವನ್ನು ಪಡೆಯುವ ಬಗ್ಗೆ ಮಾತನಾಡಿರುವುದಾಗಿ ಆ ದೇಶದ ಆಡಳಿತಾರೂಢ ತೆಹ್ರಿಕ್ -ಇ- ಇನ್ಸಾಫ್ ಪಕ್ಷದ ಮುಖಂಡೆಯೊಬ್ಬಳು ಟಿವಿ ಶೋ ವೊಂದರಲ್ಲಿ ಹೇಳುವುದರೊಂದಿಗೆ ಪಾಕಿಸ್ತಾನ ಮಿಲಿಟರಿ ತಾಲಿಬಾನ್ ನೊಂದಿಗೆ ನಿಕಟ ಒಪ್ಪಂದ ಮತ್ತು ಅದರ ಭಾರತ ವಿರೋಧಿ ಅಜೆಂಡಾವನ್ನು ಒಪ್ಪಿಕೊಂಡಿದ್ದಾರೆ.

ತಾಲಿಬಾನ್ ಮುಷ್ಟಿಯಲ್ಲಿರುವ ಕಾಬೂಲ್ ನಿಂದ ಹೊರಟಿದ್ದ ಯುಕ್ರೇನ್ ವಿಮಾನ ಇರಾನ್ ಗೆ ಹೈಜಾಕ್!
ಸ್ಥಳಾಂತರ ಕಾರ್ಯಾಚರಣೆಗೆಂದು ತೆರಳಿದ್ದ ತಮ್ಮ ದೇಶದ ವಿಮಾನವನ್ನು ಮೊದಲು ಹೈಜಾಕ್ ಮಾಡಿ ಕಳವು ಮಾಡಲಾಗಿದೆಯೆಂದು ಯುಕ್ರೇನ್ ಡೆಪ್ಯುಟಿ ವಿದೇಶಾಂಗ ಸಚಿವರು ಆರೋಪಿಸಿದ್ದಾರೆ.

ತಾಲಿಬಾನ್ ಗೆ ಪಾಕಿಸ್ತಾನ ಬೆಂಬಲ; ಭಾರತ ನಮ್ಮ ನಿಜವಾದ ಮಿತ್ರ: ಆಫ್ಘನ್ ಪಾಪ್ ಗಾಯಕಿ
ತಾಲಿಬಾನ್ ಪಡೆಗಳು ಅಫ್ಗಾನಿಸ್ತಾನದಲ್ಲಿ ಬೆಳೆಯಲು ಮತ್ತು ನಮ್ಮ ದೇಶವನ್ನು ವಶಕ್ಕೆ ಪಡೆಯಲು ಪಾಕಿಸ್ತಾನವೇ ನೇರ ಕಾರಣ ಎಂದು ಆ ದೇಶದಿಂದ ಪಲಾಯನ ಮಾಡಿರುವ ಖ್ಯಾತ ಪಾಪ್ ತಾರೆ ಆರ್ಯಾನಾ ಸಯೀದ್ ಹೇಳಿದ್ದಾರೆ.

ಅಂದ್ರಾಬ್ ಕಣಿವೆಯಲ್ಲಿ ಪರಿಸ್ಥಿತಿ ಗಂಭೀರ; ಆಹಾರ, ಅಗತ್ಯ ವಸ್ತುಗಳ ಸರಬರಾಜಿಗೆ ತಾಲಿಬಾನಿಗಳ ತಡೆ: ಅಮರುಲ್ಲಾ ಸಾಲೇಹ್
ಪಂಜ್ ಶೀರ್ ಪ್ರಾಂತ್ಯದಲ್ಲಿ ತಾಲಿಬಾನಿಗಳಿಗೆ ತೀವ್ರ ಪ್ರತಿರೋಧ ಒಡ್ಡುತ್ತಿರುವ ನಾರ್ದರ್ನ್ ಅಲಯನ್ಸ್ ಪಡೆಗಳನ್ನು ಶತಾಯಗತಾಯ ಮಣಿಸಲೇಬೇಕು ಎಂದು ಪಣ ತೊಟ್ಟಂತಿರುವ ತಾಲಿಬಾನಿಗಳು ಅಂದ್ರಾಬ್ ಕಣಿವೆಯಲ್ಲಿ ಆಹಾರ, ಅಗತ್ಯ ವಸ್ತುಗಳ ಸರಬರಾಜು ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ.

ತಾಲಿಬಾನ್ ನಿಂದ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರ ನೇಮಕ
ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ ಹಂಗಾಮಿ ಮುಖ್ಯಸ್ಥರನ್ನಾಗಿ ತಾಲಿಬಾನ್ ಮೊಹಮ್ಮದ್ ಇಡ್ರಿಸ್ ಎಂಬುವವರನ್ನು ನೇಮಕ ಮಾಡಿರುವುದಾಗಿ ತಿಳಿದುಬಂದಿದೆ. ಹೊರಜಗತ್ತಿಗೆ ಮೊಹಮ್ಮದ್ ಇಡ್ರಿಸ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಎನ್ನುವುದು ಕುತೂಹಲದ ವಿಷಯ!

