T20

ಭಾರತಕ್ಕಾಗಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಲು ಸಿದ್ಧ ಎಂದ ಹರ್ಭಜನ್ ಸಿಂಗ್
ತಾವು ಇನ್ನೂ ಫಿಟ್ ಆಗಿದ್ದು, ಭಾರತಕ್ಕಾಗಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಆಡಲು ಸಿದ್ಧರಿರುವುದಾಗಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಕೊಹ್ಲಿಗೆ ಸಾಕು, ಟಿ20 ನಾಯಕತ್ವ ರೋಹಿತ್ ಶರ್ಮಾಗೆ ನೀಡಬೇಕು: ಅತುಲ್ ವಸನ್
ಟೀಂ ಇಂಡಿಯಾದ ನಾಯಕತ್ವವನ್ನು ಹಂಚಬೇಕು ಎಂಬ ಮಾತುಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ವಿರಾಟ್ ಕೊಹ್ಲಿ, ಭಾರತ ತಂಡವನ್ನು ಮೂರು ವಿಭಾಗಗಳಲ್ಲಿ ಮುನ್ನಡೆಸುತ್ತಿದ್ದಾರೆ. ಮಾಜಿ ವೇಗಿ ಅತುಲ್ ವಸನ್ ಈ ಬಗ್ಗೆ ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ.

ಯಶಸ್ವಿ ಟಿ20 ಬ್ಯಾಟಿಂಗ್ ತರಬೇತುದಾರನಾಗಲು ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವ ಬೇಕಿಲ್ಲ: ಗಂಭೀರ್
ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವ ಯಶಸ್ವಿ ಟಿ20 ಬ್ಯಾಟಿಂಗ್ ತರಬೇತುದಾರನಾಗಲು ಅನಿವಾರ್ಯವಲ್ಲ ಎಂದು ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಟೆಸ್ಟ್, ಟಿ20 ಕ್ರಿಕೆಟ್ ನಮಗೆ ನಂ.1 ಆದ್ಯತೆ: ರವಿ ಶಾಸ್ತ್ರಿ
ಟೆಸ್ಟ್ ಹಾಗೂ ಟಿ20 ಕ್ರಿಕೆಟ್ ನಮಗೆ ನಂ.1 ಆದ್ಯತೆ ಎಂದು ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

3ನೇ ಟಿ20 ಪಂದ್ಯ: ಭಾರತ-ಶ್ರೀಲಂಕಾಕ್ಕಿಂದು ನಿರ್ಣಾಯಕ ಕದನ
ಐಸಿಸಿ ಟಿ20 ವಿಶ್ವಕಪ್'ಗೆ ತಯಾರಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಶುಕ್ರವಾರ ಪುಣೆ ಮಹಾರಾಷ್ಟ್ರದ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಆಡಲಿದೆ. 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಹೊಂದಿದ್ದು, ನಾಯಕ ವಿರಾಟ್ ಕೊಹ್ಲಿ ಸರಣಿ ಗೆಲ್ಲುವುದರ ಜೊತೆಗೆ ಬೆಂಚ್ ಕಾಯುತ್ತಿರುವ...

ಎರಡನೇ ಟಿ20: ಠಾಕೂರ್ ಮಾರಕ ಬೌಲಿಂಗ್, ಲಂಕಾವನ್ನು 142 ರನ್‍ಗಳಿಗೆ ಕಟ್ಟಿ ಹಾಕಿದ ಭಾರತ!
ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿತ್ತು. ಇದೀಗ ಇಂದೋರ್ ನಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಲಂಕಾ ತಂಡ 142 ರನ್ ಪೇರಿಸಿದೆ.

ಟೀಂ ಇಂಡಿಯಾದ ಗೆಲುವಿನಲ್ಲಿ ಮಿಂಚುವುದೇ ಗುರಿ: ಶಿಖರ್ ಧವನ್
ಗಾಯದಿಂದ ಚೇತರಿಸಿಕೊಂಡು, ಅವಕಾಶವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿರುವುದಾಗಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ತಿಳಿಸಿದ್ದಾರೆ.

ನಾಚಿಕೆಯಾಗಬೇಕು: ಪಿಚ್ ಒಣಗಿಸಲು ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ ಬಳಸಿದ್ದಕ್ಕೆ ಬಿಸಿಸಿಐಗೆ ನೆಟಿಗರ ವ್ಯಂಗ್ಯ!
ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ. ಬೇಗನೆ ಮಳೆ ನಿಂತರೂ ಪಂದ್ಯ ಶುರುವಾಗಲಿಲ್ಲ. ಹೊದಿಕೆ ಹಾಸಿದ್ದರೂ ಪಿಚ್ ನಲ್ಲಿ ನಿಂತಿದ್ದರಿಂದ ಸಿಬ್ಬಂದಿ ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆ ಬಳಸಿದ್ದು ಕಟು ಟೀಕೆಗೆ ಗುರಿಯಾಗಿದೆ.

ನಾಳಿನ ಎರಡನೇ ಟಿ20 ಕದನದ ಮೇಲೆ ಭಾರತ-ಲಂಕಾ ಕಣ್ಣು
ಗುವಾಹಟಿ ಬಸ್ರಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲನೇ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಬೇಸರಕ್ಕೆ ಒಳಗಾಗಿರುವ ಭಾರತ ಹಾಗೂ ಶ್ರೀಲಂಕಾ ತಂಡಗಳು ನಾಳೆ ಇಲ್ಲಿನ ಹೋಲ್ಕರ್ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯವಾಡಲು ಸಜ್ಜಾಗಿವೆ.

