T20 World Cup

ನಾಳೆ ಟಿ20 ವಿಶ್ವಕಪ್ ಫೈನಲ್: ಮೂರು ಫಾರ್ಮ್ಯಾಟ್ ಕ್ರಿಕೆಟ್ ನಲ್ಲಿ ನಂಬರ್ 1 ಆಗಲು ಕಿವೀಸ್ ಗೆ ಸುವರ್ಣಾವಕಾಶ
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಗೇರಿ ವಿರೋಚಿತ ಸೋಲು ಕಂಡು, ಏಕದಿನ ಕ್ರಿಕೆಟ್ ನಲ್ಲಿ ನಂಬರ್ 1 ಸ್ಥಾನಕ್ಕೇರಿದ್ದ ನ್ಯೂಜಿಲೆಂಡ್ ತಂಡ ಬಳಿಕ ಭಾರತದ ವಿರುದ್ಧ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಗೆದ್ದು ಟೆಸ್ಟ್ ಕ್ರಿಕೆಟ್ ನಲ್ಲೂ ಅಗ್ರ ಸ್ಥಾನಕ್ಕೇರಿತ್ತು. ಇದೀಗ ಟಿ20 ಕ್ರಿಕೆಟ್ ನಲ್ಲೂ ಅಗ್ರ ಸ್ಥಾನಕ್ಕೇರುವ ಸುವರ್ಣಾವಕಾಶ ಕೇನ್ ವಿಲಿಯಮ್ಸನ್ ಪಡೆ ಮುಂದಿದೆ.

ವಿಶ್ವಕಪ್ ಟಿ20 ಸೆಮಿಫೈನಲ್: ಪಾಕ್ ವಿರುದ್ಧ 5 ವಿಕೆಟ್ ಜಯಗಳಿಸಿದ ಆಸಿಸ್ ಫೈನಲ್ಸ್ ಗೆ
ಟಿ20 ವಿಶ್ವಕಪ್ ನ 2 ನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾ 5 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.

ಪಾಕಿಸ್ತಾನ ಟಿ-20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಫಾಫ್ ಡು ಪ್ಲೆಸಿಸ್ ಭವಿಷ್ಯ
ಟಿ-20 ವಿಶ್ವಕಪ್-2021 ಅಂತಿಮ ಹಂತ ತಲುಪಿದೆ. ಇಂದು ನಡೆದ ಮೊದಲ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಗೆದ್ದಿದ್ದು, ನಾಳೆ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ಎರಡನೇ ಸೆಮಿಫೈನಲ್ ನಡೆಯಲಿದೆ.

ಟಿ20 ವಿಶ್ವಕಪ್: ಮಿಚೆಲ್ ಮಿಂಚಿನ ಆಟ, ಮೊದಲ ಬಾರಿ ಫೈನಲ್ಸ್ ತಲುಪಿದ ನ್ಯೂಜಿಲ್ಯಾಂಡ್, ಇಂಗ್ಲೆಂಡ್ ಕನಸು ಭಗ್ನ
ಅಬುಧಾಬಿಯಲ್ಲಿ ನಡೆದ ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಎದುರಾಳಿ ತಂಡದ ವಿರುದ್ಧ 5 ವಿಕೆಟ್ ಗಳ ಭರ್ಜರಿ ಜಯ ಗಳಿಸಿದ್ದು, ಫೈನಲ್ಸ್ ಪ್ರವೇಶಿಸಿದೆ.

ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ: ಮುಂಬೈ ಪೊಲೀಸರಿಂದ ಹೈದರಾಬಾದ್ ವ್ಯಕ್ತಿ ಬಂಧನ
ಭಾರತ ಟಿ20 ಕ್ರಿಕೆಟ್ ತಂಡ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಹೈದರಾಬಾದ್ ಮೂಲದ ವ್ಯಕ್ತಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಾರಿಯ ಟಿ20 ವಿಶ್ವಕಪ್ ನಮಗೆ ಒಳ್ಳೆಯ ಪಾಠ ಕಲಿಸಿತು: ಕೆ.ಎಲ್ ರಾಹುಲ್
ಈ ಟೂರ್ನಿಯ ಮೂಲಕ ಟ್ವೆಂಟಿ-20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಹಾಡಿದ್ದಾರೆ. ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಅರುಣ್ ಭರತ್ ಹಾಗೂ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರ ಪಾಲಿಗೂ ಸೋಮವಾರದ ಪಂದ್ಯ ವಿದಾಯದ ಪಂದ್ಯವಾಗಿತ್ತು.

T20 World Cup: ಐಪಿಎಲ್ ನಿಂದ ತುಂಬಾನೇ ಲಾಭ ಆಗಿದೆ- ಕಿವೀಸ್ ನಾಯಕ ಕೇನ್ ವಿಲಿಯಮ್ಸನ್
ಇಂಡಿಯನ್ ಪ್ರಿಮಿಯರ್ ಲೀಗ್ ನಿಂದ ನಮಗೆ ತುಂಬಾನೇ ಲಾಭ ಆಗಿದೆ ಅಂತಾ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ. ಐಪಿಎಲ್ ನಿಂದಾಗಿ ಭಾರತೀಯ ಕ್ರಿಕೆಟ್ ತಂಡ ಟಿ-20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕೇನ್ ವಿಲಿಯಮ್ಸನ್ ಈ ಹೇಳಿಕೆ ಹೊರಬಿದ್ದಿದೆ.

ಭಾರತೀಯ ಕ್ರಿಕೆಟ್ ಆಟಗಾರರ ಮಾನಸಿಕ ಹಾಗೂ ದೈಹಿಕ ಬಳಲಿಕೆಯೇ ಸೋಲಿಗೆ ಕಾರಣ: ರವಿಶಾಸ್ತ್ರಿ
ಭಾರತೀಯ ತಂಡ ನಮೀಬಿಯ ಎದುರು 9 ವಿಕೆಟ್ಗಳ ಜಯ ಗಳಿಸಿದ ನಂತರ ಅವರು ಮಾತನಾಡುತ್ತಿದ್ದರು. ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಇದುವರೆಗೂ ಹೊಣೆ ನಿರ್ವಹಿಸಿದ್ದ ರವಿ ಶಾಸ್ತ್ರಿ ಅವಧಿ ಇಂದಿಗೆ ಕೊನೆಗೊಳ್ಳಲಿದೆ.

ಟಿ20 ವಿಶ್ವಕಪ್: ನ್ಯೂಜಿಲೆಂಡ್-ಆಫ್ಘನ್ ಪಂದ್ಯದ ಪಿಚ್ ಕ್ಯೂರೇಟರ್ ಮೃತದೇಹ ಪತ್ತೆ
ಅಬುಧಾಬಿ ಶೇಖ್ ಜಾಯೆದ್ ಗ್ರೌಂಡ್ ನಿಂದ ಕೆಟ್ಟ ಸುದ್ದಿಯೊಂದು ಹೊರಬಂದಿದೆ. ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ಪಂದ್ಯದ ಪಿಚ್ ಕ್ಯೂರೇಟರ್ ಆಗಿದ್ದ ಮೋಹನ್ ಸಿಂಗ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.

