ವಿಶ್ವಕಪ್ ಟಿ20 ಸೆಮಿಫೈನಲ್: ಪಾಕ್ ವಿರುದ್ಧ 5 ವಿಕೆಟ್ ಜಯಗಳಿಸಿದ ಆಸಿಸ್ ಫೈನಲ್ಸ್ ಗೆ
ಟಿ20 ವಿಶ್ವಕಪ್ ನ 2 ನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾ 5 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.

ದುಬೈ: ಟಿ20 ವಿಶ್ವಕಪ್ ನ 2 ನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾ 5 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ನ.14 ರಂದು ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.
ದುಬೈ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್ ಗಳಿಗೆ 4 ವಿಕೆಟ್ ಗಳ ನಷ್ಟಕ್ಕೆ 176 ರನ್ ಗಳನ್ನು ಗಳಿಸಿತು.
ಪಾಕ್ ಪರ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ (52 ಎಸೆತಗಳಲ್ಲಿ 67 ರನ್) ಬಾಬರ್ ಆಜಮ್ (34 ಎಸೆತಗಳಲ್ಲಿ 39 ರನ್ ಗಳನ್ನು) ಗಳಿಸಿ ಪಾಕ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಬಳಿಕ ಫಕರ್ ಜಮಾನ್ ಅಜೇಯ 55 ರನ್ ಗಳಿಸುವ ಮೂಲಕ ತಂಡ 176 ರನ್ ಗಳ ಮೊತ್ತ ಗಳಿಸಲು ನೆರವಾದರು.
ಆಸ್ಟ್ರೇಲಿಯಾ ತಂಡ ರನ್ ಚೇಸಿಂಗ್ ನಲ್ಲಿ ಆರಂಭದಲ್ಲಿ ಅರ್ನಾನ್ ಫಿಂಚ್ ಅವರ ವಿಕೆಟ್ ಕಳೆದುಕೊಂಡು ಮುಗ್ಗರಿಸಿದಂತೆ ತೋರಿತಾದರೂ, 30 ಎಸೆತಗಳಲ್ಲಿ 49 ರನ್ ಗಳಿಸಿದ ಡೇವಿಡ್ ವಾರ್ನರ್ ತಂಡಕ್ಕೆ ಆಸರೆಯಾಗಿ ನಿಂತರು. ಮಿಚೆಲ್ ಮಾರ್ಷ್ 22 ಎಸೆತಗಳಲ್ಲಿ 28 ರನ್ ಗಳಿಸಿದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಪಾಕ್ ಬೌಲರ್ ಗಳನ್ನು ಎದುರಿಸುವಲ್ಲಿ ಎಡವಿದರು. ಮಾರ್ಕಸ್ ಸ್ಟೊಯಿನಿಸ್ ( ಅಜೇಯವಾಗಿ 31 ಎಸೆತಗಳಲ್ಲಿ 40 ರನ್) ಮ್ಯಾಥ್ಯೂ ವೇಡ್ ( ಅಜೇಯವಾಗಿ 17 ಎಸೆತಗಳಲ್ಲಿ 41 ರನ್) ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಮ್ಯಾಥ್ಯೂ ವೇಡ್ ಹ್ಯಾಟ್ರಿಕ್ 6 ಗಳಿಸಿ ಮಿಂಚಿನ ಆಟ ಪ್ರದರ್ಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


