Survey

ಸಿಎಂ ಮನೆಗೆ ಜಾತಿಗಣತಿದಾರರ ಭೇಟಿ: 45 ನಿಮಿಷ ಸಮಾಧಾನದಿಂದ ಉತ್ತರಿಸಿದ ಸಿದ್ದರಾಮಯ್ಯ; ಪ್ರಾಮಾಣಿಕ ಮಾಹಿತಿ ನೀಡುವಂತೆ ಜನತೆಗೆ ಕರೆ
ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಂಡು, ತಮ್ಮ ಮಾಹಿತಿಯನ್ನು ಪ್ರಾಮಾಣಿಕವಾಗಿ ನೀಡಬೇಕು. ಇದರಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜನರನ್ನು ಗುರುತಿಸಿ, ಅವರ ಪ್ರಗತಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ.

ಜಾತಿಗಣತಿಗೆ ಗೈರು: 2,300 ಸಿಬ್ಬಂದಿ ವಿರುದ್ಧ 'No Work No Pay' ಆದೇಶ
ಪದೇ ಪದೇ ನೋಟಿಸ್ ಮತ್ತು ಎಸ್‌ಎಂಎಸ್ ಕಳುಹಿಸಿದರೂ ಈ ಗಣತಿದಾರರು ಕೆರ್ತವ್ಯಕ್ಕೆ ಹಾಜರಾಗಿಲ್ಲ. ಯಾವುದೇ ಕಾರಣ ನೀಡದೆ, ಅನಧಿಕೃತವಾಗಿ ಗೈರುಹಾಜರಿದ್ದಾರೆ.

ಜಾತಿಗಣತಿ: ಜಿಬಿಎ ವ್ಯಾಪ್ತಿಯಲ್ಲಿ 10 ದಿನದಲ್ಲಿ 13.12 ಲಕ್ಷ ಮನೆಗಳ ಸಮೀಕ್ಷೆ ಪೂರ್ಣ..!
ಐದು ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1,19,303 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ. ಆರಂಭದಲ್ಲಿ ದಿನಕ್ಕೆ 2 ಲಕ್ಷ ಮನೆಗಳ ಸಮೀಕ್ಷೆಯ ಗುರಿಯನ್ನು ನಿಗದಿಪಡಿಸಲಾಗಿತ್ತು. ನಂತರ ಅದನ್ನು 3 ಲಕ್ಷಕ್ಕೆ ಹೆಚ್ಚಿಲಾಯಿತು.

ಸಮೀಕ್ಷೆಗೆ ಸಿಬ್ಬಂದಿ ನಿಯೋಜನೆ: ತುರ್ತು ಪರಿಸ್ಥಿತಿ ನಿಭಾಯಿಸುವುದೇ ಗ್ರೆಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸವಾಲು!
ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮರಗಳು ಮತ್ತು ಕೊಂಬೆಗಳು ಬೀಳುವ ದೂರುಗಳು ನಿಯಂತ್ರಣ ಕೊಠಡಿ ಮತ್ತು ಹಿರಿಯ ಅಧಿಕಾರಿಗಳನ್ನು ತಲುಪುತ್ತಿವೆ. ಆದರೆ ಈ ತುರ್ತು ಪರಿಸ್ಥಿತಿಗಳಿಗೆ ನಿರ್ವಹಿಸಲು ಸಿಬ್ಬಂದಿ ನಿಯೋಜನೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಜಾತಿ ಸಮೀಕ್ಷೆ: ಸಿಎಂ ಸೂಚನೆ ಬಳಿಕವೂ 70 ಪಿಯು ಉಪನ್ಯಾಸಕರ ಕರ್ತವ್ಯಕ್ಕೆ ನಿಯೋಜನೆ!
ಬೆಂಗಳೂರಿನಲ್ಲಿ 700 ಕ್ಕೂ ಹೆಚ್ಚು ಉಪನ್ಯಾಸಕರನ್ನು ಸಮೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೀಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರನ್ನು ಸಂಪರ್ಕಿಸಿ, ಪಿಯು ಉಪನ್ಯಾಸಕರನ್ನು ಸಮೀಕ್ಷೆಯಿಂದ ಕೈ ಬಿಡುವಂತೆ ಒತ್ತಾಯಿಸಿದ್ದೇವೆ.

ಬೆಂಗಳೂರು: ಸಮೀಕ್ಷೆಗೆ ಮನೆಗೆ ಬಂದಿದ್ದ ಶಿಕ್ಷಕಿಯನ್ನು ಕೂಡಿಹಾಕಿದ್ದ ಟೀ ಅಂಗಡಿ ಮಾಲೀಕನ ಬಂಧನ
ಶಿಕ್ಷಕಿಯಿಂದ ಗುರುತಿನ ಚೀಟಿಯನ್ನು ಸಹ ಕಸಿದುಕೊಂಡು ಅವರನ್ನು ಕಾಂಪೌಂಡ್ ಒಳಗೆ ಕೂಡಿ ಹಾಕಿ ಬೀಗ ಹಾಕಿದನು. ಸ್ಥಳಕ್ಕೆ ತನ್ನ ಮೇಲಧಿಕಾರಿಗಳನ್ನು ಕರೆಯುವಂತೆ ಸುಶೀಲಮ್ಮ ಅವರಿಗೆ ಸೂಚಿಸಿದನು ಎಂದು ಪೊಲೀಸರು ಹೇಳಿದರು.

ಜಾತಿಗಣತಿ: GBA ವ್ಯಾಪ್ತಿಯಲ್ಲಿ ಪ್ರತಿದಿನ 3 ಲಕ್ಷ ಮನೆಗಳ ಸಮೀಕ್ಷೆ ಗುರಿ
ನಗರದಲ್ಲಿ ಸದ್ಯ ಪ್ರತಿ ದಿನ ಸುಮಾರು 2 ಲಕ್ಷ ಮನೆಗಳ ಸರ್ವೇ ಕಾರ್ಯ ನಡೆಯುತ್ತಿದೆ. ಬುಧವಾರದಿಂದ ಸುಮಾರು 3 ಲಕ್ಷ ಮನೆ ಗಳ ಸರ್ವೇ ನಡೆಸುವ ಗುರಿ ಹೊಂದಲಾಗಿದೆ

ಯಾರು ಎಷ್ಟೇ ವಿರೋಧಿಸಿದರು ಸಮೀಕ್ಷೆ ನಡೆಯುತ್ತದೆ, ಎಲ್ಲರೂ ಸಹಕರಿಸಿ: DCM ಡಿ.ಕೆ ಶಿವಕುಮಾರ್ ಮನವಿ
ಈ ಹಿಂದಿನ ಗಣತಿ ಸರಿಯಿಲ್ಲ. ಅದಕ್ಕೆ ಹೊಸದಾಗಿ ಗಣತಿ ಮಾಡಲಾಗುತ್ತಿದೆ. ಸಾರ್ವಜನಿಕರು ಗಣತಿದಾರರ ಪ್ರಶ್ನೆಗಳಿಗೆ ತಾಳ್ಮೆಯಿಂದ ಮಾಹಿತಿ ಒದಗಿಸಬೇಕು. ಇದರಿಂದ ಮುಂದಿನ ಪೀಳಿಗೆಗೆ ನ್ಯಾಯ ಕೊಟ್ಟಂತೆ ಆಗುತ್ತದೆ.

ಜಾತಿ ಗಣತಿ ಮಾಡುವ ಶಿಕ್ಷಕರಿಗೆ 60.36 ಕೋಟಿ ರೂ ಸಂಭಾವನೆ ಬಿಡುಗಡೆ ಮಾಡಿದ ಸರ್ಕಾರ!
ಬೃಹತ್ ಬೆಂಗಳೂರು ಪ್ರಾಧಿಕಾರದ ಪ್ರದೇಶಗಳಲ್ಲಿ ಕೆಲಸ ಮಾಡುವವರು ಬೆಂಗಳೂರಿನ ದರಗಳಿಗೆ ಅನುಗುಣವಾಗಿ ತಮ್ಮ ಹೆಚ್ಚುವರಿ ವೆಚ್ಚಗಳನ್ನು ಭರಿಸಲು ಇನ್ನೂ ಹೆಚ್ಚಿನ ಭತ್ಯೆಯನ್ನು ಪಡೆಯಲಿದ್ದಾರೆ.

