Sunil Gavaskar

ಒಬ್ಬೊಬ್ಬರಿಗೆ ಒಂದೊಂದು ನಿಯಮವೇ? ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವಿರುದ್ಧ ಗವಾಸ್ಕರ್ ಆಕ್ರೋಶ
ಯುವ ವೇಗಿ ಟಿ ನಟರಾಜನ್ ಅವರನ್ನು ಟೀಮ್ ಇಂಡಿಯಾದಲ್ಲಿ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್, ಒಬ್ಬೊಬ್ಬ ಆಟಗಾರರಿಗೆ ಒಂದೊಂದು ನಿಯಮವೇ? ಎಂದು ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ.

ಪೃಥ್ವಿ ಶಾ ಬದಲು ರಾಹುಲ್ ಆರಂಭಿಕನಾಗಲಿ: ಗವಾಸ್ಕರ್
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅನುಭವಿಸಿದ ಹೀನಾಯ ಸೋಲು ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗೆ ಕುಸಿದಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಇಶಾಂತ್ ಶರ್ಮಾ ಫಿಟ್ ಇದ್ದರೆ ಆಸ್ಟ್ರೇಲಿಯಾಗೆ ಕಳುಹಿಸಿ: ಗವಾಸ್ಕರ್
ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತ ಬೆನ್ನಲ್ಲೆ ಭಾರತಕ್ಕೆ ಭಾರಿ ಹಿನ್ನಡೆಯಾಗಿದೆ. ವಿರಾಟ್ ಕೊಹ್ಲಿ ಇನ್ನುಳಿದ ಮೂರು ಪಂದ್ಯಗಳಿಗೆ ಅಲಭ್ಯರಾಗುವುದು ಈಗಾಗಲೇ ಎಲ್ಲರಿಗೂ ಗೊತ್ತು.

ವಿರಾಟ್ ಅನುಪಸ್ಥಿತಿಯು ಆಸ್ಟ್ರೇಲಿಯಾಕ್ಕೆ ಸಮಾಧಾನದ ವಿಷಯ: ಸುನಿಲ್ ಗವಾಸ್ಕರ್
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇಲ್ಲದಿರುವುದು ಆಸ್ಟ್ರೇಲಿಯಾ ತಂಡಕ್ಕೆ ನೆಮ್ಮದಿ ನೀಡುತ್ತದೆ ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆಗೆ ನಾಯಕತ್ವದ ಒತ್ತಡವಿಲ್ಲ: ಸುನಿಲ್ ಗವಾಸ್ಕರ್
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಇನ್ನು ನಾಯಕತ್ವದ ಒತ್ತಡದಿಂದ ರಹಾನೆ ತತ್ತರಿಸುವುದಿಲ್ಲ ಎಂದು ಬ್ಯಾಟಿಂಗ್ ಶ್ರೇಷ್ಠ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಚಹಾಲ್ ನಿಯಮಾನುಸಾರ ಆಡಿದ್ದಾರೆ, ಆದರೆ ಕಂಕಷನ್ ವಿವಾದದಿಂದ ಬೇಸರವಾಗಿದೆ: ಗವಾಸ್ಕರ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ-20 ಪಂದ್ಯದ ವೇಳೆ ಕಂಕಷನ್ ಕುರಿತ ವಿವಾದದಿಂದ ತಮಗೆ ಸಾಕಷ್ಟು ಆಶ್ಚರ್ಯವಾಗಿದೆ ಎಂದು ಭಾರತದ ಮಾಜಿ ನಾಯಕ ಮತ್ತು ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಅಲಭ್ಯ: ರೋಹಿತ್ ಶರ್ಮಾ ಗಾಯದ ಬಗ್ಗೆ ಪಾರದರ್ಶಕತೆಗೆ ಗವಾಸ್ಕರ್ ಕರೆ
ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಪ್ರಕಟಿಸಲಾಗಿರುವ ಟೀಂ ಇಂಡಿಯಾ ಆಟಗಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಆರಂಭಿಕ ಸ್ಟಾರ್ ಆಟಗಾರ ರೋಹಿತ್ ಶರ್ಮಾರ ಫಿಟ್ನೆಸ್ ಸಂಬಂಧ ಪಾರದರ್ಶಕತೆಗೆ ಬ್ಯಾಟಿಂಗ್ ಲೆಜೆಂಡ್ ಸುನೀಲ್ ಗವಾಸ್ಕರ್ ಕರೆ ನೀಡಿದ್ದಾರೆ.

ವೈಡ್ ಬಾಲ್ ವಿವಾದ: ಎಂಎಸ್ ಧೋನಿ ಗೆ ಸುನೀಲ್ ಗವಾಸ್ಕರ್ ಬೆಂಬಲ
'ವೈಡ್ ಬಾಲ್' ವಿವಾದಕ್ಕೆ ಸಂಬಂಧಿಸಿದಂತೆ ಟೀಕೆಗೆ ಗುರಿಯಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಅವರಿಗೆ ಭಾರತೀಯ ಕ್ರಿಕೆಟ್ ದಂತಕತೆ ಹಾಗೂ 2020ರ ಐಪಿಎಲ್‌ನ ಕಾಮೆಂಟರಿ ಪ್ಯಾನೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುನೀಲ್ ಗವಾಸ್ಕರ್ ಬೆಂಬಲ ಸೂಚಿಸಿದ್ದಾರೆ.

ಆರ್‌ಸಿಬಿ ವೇಗಿ ನವದೀಪ್ ಸೈನಿ ನಡೆ ಖಂಡಿಸಿದ ಸುನೀಲ್ ಗವಾಸ್ಕರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೋಮವಾರ ರಾತ್ರಿ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಸಂಘಟಿತ ಪ್ರದರ್ಶನ ತೋರಿದ ಶ್ರೇಯಸ್ ಅಯ್ಯರ್ ಬಳಗ 59 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು.

