Sringeri

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳ ಮರುಎಣಿಕೆ: ಜೀವರಾಜ್, ರಾಜೇಗೌಡಗೆ ಅಗ್ನಿ ಪರೀಕ್ಷೆ!
ಒಟ್ಟು 1,540 ಅಂಚೆ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತು ಮತ್ತು ಎಣಿಕೆಯ ನಂತರ, ರಾಜೇಗೌಡ ಅವರನ್ನು 201 ಮತಗಳ ಕಡಿಮೆ ಅಂತರದಿಂದ ವಿಜೇತರೆಂದು ಘೋಷಿಸಲಾಯಿತು.

ಆಧ್ಯಾತ್ಮದ ಆಲಯ, ಪ್ರಕೃತಿಯ ಅದ್ಭುತ ಸಂಗಮ: ಶೃಂಗೇರಿ ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ಏಕೆ?
ಶೃಂಗೇರಿಯ ಪ್ರಮುಖ ಆಕರ್ಷಣೆಯೆಂದರೆ ಕ್ರಿ.ಶ. 1338ರಲ್ಲಿ ನಿರ್ಮಿಸಲಾದ ವಿದ್ಯಾಶಂಕರ ದೇವಾಲಯ. ಇದು ಭಾರತದ ಅತ್ಯಂತ ವಿಶಿಷ್ಟವಾದ ದೇವಾಲಯಗಳಲ್ಲಿ ಒಂದಾಗಿದೆ.

ನಿರ್ಮಲ ತುಂಗಭದ್ರಾ ಅಭಿಯಾನ: ನವೆಂಬರ್ 4 ರಂದು ಶೃಂಗೇರಿಯಿಂದ ಆರಂಭ
ಶೃಂಗೇರಿಯಲ್ಲಿ ಕೇವಲ 40 ಸಾವಿರ ಜನಸಂಖ್ಯೆ ಇದ್ದರೂ ವರ್ಷಕ್ಕೆ ಸುಮಾರು ಒಂದು ಕೋಟಿ ಪ್ರವಾಸಿಗರು, ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ನಗರದಲ್ಲಿ ಚರಂಡಿ ವ್ಯವಸ್ಥೆ ಇದೆ ಆದರೆ ಯುಜಿಡಿ ವ್ಯವಸ್ಥೆ ಇಲ್ಲ. ಕಲುಷಿತ ನೀರನ್ನು ಶುದ್ಧೀಕರಿಸದೆ ನದಿಗೆ ಬಿಡಲಾಗುತ್ತಿದೆ.

ಶೃಂಗೇರಿ ಶಾರದಾಂಬೆ ದೇವಾಲಯ: ಆಗಸ್ಟ್ 15 ರಿಂದ ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ಕಡ್ಡಾಯ
ಪುರುಷರು ಧೋತಿ, ಶಲ್ಯ, ಉತ್ತರೀಯ (ಅಂಗವಸ್ತ್ರ) ಮಹಿಳೆಯರು ಸೀರೆ, ಸಲ್ವಾರ್, ದುಪಟ್ಟಾ, ಲಂಗಾ ದಾವಣಿ ಧರಿಸಿ ದೇವಾಲಯವನ್ನು ಪ್ರವೇಶಿಸಬಹುದಾಗಿದೆ.

ಶೃಂಗೇರಿಯಲ್ಲಿ ಧಾರಾಕಾರ ಮಳೆ: ಉಕ್ಕಿ ಹರಿಯುತ್ತಿರುವ ತುಂಗಾ ನದಿ, ಪ್ರವಾಸಿಗರಿಗೆ ಎಚ್ಚರಿಕೆ!
ಶೃಂಗೇರಿಯಲ್ಲಿ ಹಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಗುರುವಾರದ ಕೆರೆಕಟ್ಟೆಯಲ್ಲಿ 234.8 ಮಿ.ಮೀ ಮಳೆಯಾಗಿದೆ.

ಕರ್ನಾಟಕದ ಪುರೋಹಿತರಿಂದ ನಾಳೆ ಸಂಸತ್ ಭವನ ಉದ್ಘಾಟನೆ ವಿಧಿವಿಧಾನ
ನಾಳೆ ನೂತನ ಸಂಸತ್ ಭವನದ ಉದ್ಘಾಟನೆಯಾಗಲಿದ್ದು, ಉದ್ಘಾಟನೆಗೂ ಮುನ್ನ ಇಂದು ಸಂಜೆಯಿಂದ ಸಂಸತ್ ಭವನದಲ್ಲಿ ಕೆಲವು ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿದೆ.

ಕಾಶ್ಮೀರದ ಶಾರದಾ ದೇವಾಲಯಕ್ಕೆ ಕರ್ನಾಟಕದ ಶೃಂಗೇರಿ ಶಾರದ ಪೀಠದಿಂದ ವಿಗ್ರಹ
ಕಾಶ್ಮೀರದ ತಿತ್ವಾಲ್ ನಲ್ಲಿ ನಿರ್ಮಾಣವಾಗುತ್ತಿರುವ ಶಾರದಾ ದೇವಿ ದೇವಾಲಯಕ್ಕೆ ಕರ್ನಾಟಕದ ಶೃಂಗೇರಿ ಶಾರದಾ ಪೀಠದಿಂದ ಶಾರದೆಯ ಪಂಚಲೋಹ ವಿಗ್ರಹವನ್ನು ಹಸ್ತಾಂತರ ಮಾಡಲಾಗಿದೆ.

ಕರ್ನಾಟಕದ ಹೆಮ್ಮೆ: ನೂತನ ಸಂಸತ್ ಭವನ ಶಿಲಾನ್ಯಾಸ, ಭೂಮಿ ಪೂಜೆ ನಡೆದಿದ್ದು ಶೃಂಗೇರಿ ಮಠದ ನೇತೃತ್ವದಲ್ಲಿ!
ಡಿ.10 ರಂದು ನೂತನ ಸಂಸತ್ ಭವನಕ್ಕಾಗಿ ಶಿಲಾನ್ಯಾಸ, ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದ್ದು, ಕರ್ನಾಟಕ ಹೆಮ್ಮೆ ಪಡುವಂತಹ ಅಂಶ ಇದರಲ್ಲಿದೆ.

ತುಂಗಾ ಪುಷ್ಕರದ ಅಂಗವಾಗಿ ಶೃಂಗೇರಿಯಲ್ಲಿ ತುಂಗಾ ಆರತಿ, ತೆಪ್ಪೋತ್ಸವ
ತುಂಗಾ ಪುಷ್ಕರ ಮಹೋತ್ಸವದ ಅಂಗವಾಗಿ ಶೃಂಗೇರಿಯ ಶಾರದಾ ಪೀಠದಲ್ಲಿ ತುಂಗಾ ಆರತಿ ಮತ್ತು ತೆಪ್ಪೋತ್ಸವ ನಡೆಯುತ್ತಿದೆ. ಪ್ರತಿ ದಿನ ಸಂಜೆ ತುಂಗಾ ನದಿಗೆ ಆರತಿ ಬೆಳಗಿ ತೆಪ್ಪೋತ್ಸವ ನಡೆಸಲಾಗುತ್ತದೆ.

