ಕರ್ನಾಟಕದ ಪುರೋಹಿತರಿಂದ ನಾಳೆ ಸಂಸತ್ ಭವನ ಉದ್ಘಾಟನೆ ವಿಧಿವಿಧಾನ
ನಾಳೆ ನೂತನ ಸಂಸತ್ ಭವನದ ಉದ್ಘಾಟನೆಯಾಗಲಿದ್ದು, ಉದ್ಘಾಟನೆಗೂ ಮುನ್ನ ಇಂದು ಸಂಜೆಯಿಂದ ಸಂಸತ್ ಭವನದಲ್ಲಿ ಕೆಲವು ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿದೆ.

ನವದೆಹಲಿ: ನಾಳೆ ನೂತನ ಸಂಸತ್ ಭವನದ ಉದ್ಘಾಟನೆಯಾಗಲಿದ್ದು, ಉದ್ಘಾಟನೆಗೂ ಮುನ್ನ ಇಂದು ಸಂಜೆಯಿಂದ ಸಂಸತ್ ಭವನದಲ್ಲಿ ಕೆಲವು ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿದೆ.
ಶೃಂಗೇರಿಯ ಶಾರದಾ ಪೀಠದಿಂದ ಪುರೋಹಿತರು, ವಿದ್ವಾಂಸರ ನೇತೃತ್ವದಲ್ಲಿ ಸಂಸತ್ ಭವನ ಉದ್ಘಾಟನೆಯ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದೆ. ಶೃಂಗೇರಿ ಮಠದ ವಿದ್ವಾಂಸರಾದ ಸೀತಾರಾಮ ಶರ್ಮ, ರಾಮ ಶರ್ಮ,ಲಕ್ಷ್ಮೀಶ ತಂತ್ರಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ.
ಈ ಹಿಂದೆ ಸಂಸತ್ ಭವನದ ಮೇಲೆ ಲಾಂಛನ ಲೋಕಾರ್ಪಣೆ, ನೂತನ ಸಂಸತ್ ಭವನದ ಶಂಕುಸ್ಥಾಪನೆ ಕಾರ್ಯಕ್ರಮಗಳ ಧಾರ್ಮಿಕ ವಿಧಿವಿಧಾನಗಳೂ ಕರ್ನಾಟಕದ ಶೃಂಗೇರಿಯ ಪುರೋಹಿತರು, ವಿದ್ವಾಂಸರ ನೇತೃತ್ವದಲ್ಲಿ ನಡೆದಿತ್ತು.
ಇನ್ನು ರಾಜದಂಡ (ಸೆಂಗೋಲ್) ನ್ನು ಅಧೀನಂ ಸಾಧು-ಸಂತರ ತಂಡ ಪ್ರಧಾನಿಗೆ ಇಂದು ಹಸ್ತಾಂತರಿಸಿದ್ದು, ಅದನ್ನು ನಾಳೆ ಸಂಸತ್ ನಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


