Srinagar

ಪ್ಯಾಂಪೋರ್ ಉಗ್ರ ದಾಳಿ: 3ನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ, ಓರ್ವ ಉಗ್ರನ ಹತ್ಯೆ
ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ನ ಹೊರವಲಯದ ಸರ್ಕಾರಿ ಕಚೇರಿಗೆ ದಾಳಿ ಮಾಡಿರುವ ಉಗ್ರರ ವಿರುದ್ಧದ ಕಾರ್ಯಾಚರಣೆ ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಓರ್ವ ಉಗ್ರನನ್ನು ಹತ್ಯೆಗೈಯುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.

ಪ್ಯಾಂಪೋರ್ ಉಗ್ರ ದಾಳಿ; ಗಾಯಾಳು ಸೈನಿಕ, ಪೊಲೀಸ್ ಅಧಿಕಾರಿ ಹುತಾತ್ಮ
ಪ್ಯಾಂಪೋರ್ ಉಗ್ರ ದಾಳಿಯಲ್ಲಿ ಉಗ್ರರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ಓರ್ವ ಸೈನಿಕ ಹಾಗೂ ಪೊಲೀಸ್ ಅಧಿಕಾರಿಗಳು ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ಯಾಂಪೋರ್ ಉಗ್ರ ದಾಳಿ; ಉಗ್ರರ ಹೆಡೆಮುರಿ ಕಟ್ಟಲು ಹೆಚ್ಚುವರಿ ಸೈನಿಕರ ಆಗಮನ
ಸರ್ಕಾರಿ ಕಚೇರಿಗೇ ನುಗ್ಗಿ ದಾಳಿ ಮಾಡುತ್ತಿರುವ ಪಾಕಿಸ್ತಾನ ಮೂಲದ ಉಗ್ರರನ್ನು ಸೆದೆಬಡಿಯಲು ನಡೆಯುತ್ತಿರುವ ಸೇನಾಕಾರ್ಯಾಚರಣೆ ಮಂಗಳವಾರವೂ ಮುಂದುವರೆದಿದ್ದು, ನುಸುಕಿನ ಜಾವ ಕೇಳಿಬಂದ ಭಾರಿ ಪ್ರಮಾಣದ ಬಾಂಬ್ ಸ್ಫೋಟದ ಬಳಿಕ ಘಟನಾ ಸ್ಥಳಕ್ಕೆ ಹೆಚ್ಚುವರಿ ಯೋಧರನ್ನು ನಿಯೋಜಿಸಲಾಗುತ್ತಿದೆ.

ಶೋಪಿಯಾನ್ ನಲ್ಲೂ ಉಗ್ರರ ಅಟ್ಟಹಾಸ; ಸೇನಾ ವಾಹನದ ಮೇಲೆ ಗ್ರೆನೇಡ್ ದಾಳಿ, ಓರ್ವ ಸೈನಿಕ ಸೇರಿ 9 ಮಂದಿಗೆ ಗಾಯ
ಅತ್ತ ಪ್ಯಾಂಪೋರ್ ಹೊರವಲಯದ ಸರ್ಕಾರಿ ಕಚೇರಿಯ ಮೇಲೆ ಉಗ್ರರ ದಾಳಿ ಮುಂದುವರೆದಿರುವಂತೆಯೇ ಇತ್ತ ಶೋಪಿಯಾನ್ ನಲ್ಲೂ ಉಗ್ರರು ಅಟ್ಟಹಾಸ ಮೆರೆದಿದ್ದು, ಸೇನಾ ವಾಹನಗಳ ಮೇಲೆ ಗ್ರೆನೇಡ್ ಎಸೆದಿದ್ದು, ದಾಳಿಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ: ಓರ್ವ ಬಾಲಕ ಬಲಿ, ಸಾವಿನ ಸಂಖ್ಯೆ 91ಕ್ಕೆ ಏರಿಕೆ
ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿದ್ದು, 13 ವರ್ಷದ ಬಾಲಕನೋರ್ವ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ...

ಬಾಲಕನ ಸಾವಿನ ಬಳಿಕ ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರ: ಹಲವೆಡೆ ಕರ್ಫ್ಯೂ ಜಾರಿ
ಪೆಲೆಟ್ ಗನ್ ದಾಳಿಗೆ ಬಾಲಕ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಶ್ರೀನಗರದ ಹಲವೆಡೆ ಶನಿವಾರ ಕರ್ಫ್ಯೂ ಜಾರಿ ಮಾಡಲಾಗಿದೆ...

ಬಾರಾಮುಲ್ಲಾ ಉಗ್ರ ದಾಳಿ: ಸೈನಿಕರಿಂದ ಪ್ರಾಣ ಉಳಿಸಿಕೊಳ್ಳಲು ನದಿಗೆ ಹಾರಿದ ಉಗ್ರ!
ಬಾರಾಮುಲ್ಲಾ ಸೇನಾ ಶಿಬಿರದ ಮೇಲೆ ದಾಳಿ ಮಾಡಿದ್ದ ಉಗ್ರರ ಪೈಕಿ ಓರ್ವ ಉಗ್ರ ಪ್ರಾಣ ಉಳಿಸಿಕೊಳ್ಳಲು ಝೇಲಂ ನದಿಗೆ ಹಾರಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಎಲ್ ಒಸಿ ಬಳಿ ಮತ್ತೆ ಗುಂಡಿನ ಚಕಮಕಿ
ಪಿಒಕೆಯಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ಬಳಿಕ ಉಭಯ ರಾಷ್ಟ್ರಗಳ ಗಡಿ ಉದ್ವಿಗ್ನಗೊಂಡಿರುವಂತೆಯೇ ಪರಿಸ್ಥಿತಿಯನ್ನು ಮತ್ತಷ್ಟು ವಿಕೋಪಕ್ಕೆ ದೂಡಲು ಪಾಕಿಸ್ತಾನಿ ಸೈನಿಕರು ಯತ್ನಿಸುತ್ತಿದ್ದು, ಪದೇ ಪದೇ ಭಾರತೀಯ ಸೈನಿಕರತ್ತ ಗುಂಡಿನ ದಾಳಿ ನಡೆಸುತ್ತಿದ್ದಾರೆ.

ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ!
ಅಪ್ರಚೋದಿತ ದಾಳಿಗಳಾದರೆ ಅದಕ್ಕೆ ಸಂಪೂರ್ಣ ಬಲದೊಂದಿಗೆ ಉತ್ತರ ನೀಡಿ ಎಂಬ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹೇಳಿಕೆ ಬೆನ್ನಲ್ಲೇ ಪಾಕಿಸ್ತಾನಿ ಸೈನಿಕರು ಉದ್ಧಟತನ ಪ್ರದರ್ಶನ ಮಾಡಿದ್ದು, ಭಾರತೀಯ ಪೋಸ್ಟ್ ಗಳತ್ತ ಗುಂಡಿನ ದಾಳಿ ನಡೆಸಿದ್ದಾರೆ.

