ದೇಶ

ಪ್ಯಾಂಪೋರ್ ಉಗ್ರ ದಾಳಿ: 3ನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ, ಓರ್ವ ಉಗ್ರನ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ನ ಹೊರವಲಯದ ಸರ್ಕಾರಿ ಕಚೇರಿಗೆ ದಾಳಿ ಮಾಡಿರುವ ಉಗ್ರರ ವಿರುದ್ಧದ ಕಾರ್ಯಾಚರಣೆ ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಓರ್ವ ಉಗ್ರನನ್ನು ಹತ್ಯೆಗೈಯುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.

ಪ್ಯಾಂಪೋರ್ ಉಗ್ರ ದಾಳಿ: 3ನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ, ಓರ್ವ ಉಗ್ರನ ಹತ್ಯೆ
ಪ್ಯಾಂಪೋರ್ ದಾಳಿ (ಸಂಗ್ರಹ ಚಿತ್ರ)
Published On :

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ನ ಹೊರವಲಯದ ಸರ್ಕಾರಿ ಕಚೇರಿಗೆ ದಾಳಿ ಮಾಡಿರುವ ಉಗ್ರರ ವಿರುದ್ಧದ ಕಾರ್ಯಾಚರಣೆ ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಓರ್ವ  ಉಗ್ರನನ್ನು ಹತ್ಯೆಗೈಯುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.

ಕಟ್ಟಡದಲ್ಲಿ ನುಸುಳಿ ದಾಳಿ ಮಾಡುತ್ತಿರುವ ಉಗ್ರರ ವಿರುದ್ಧ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಭಾರತೀಯ ಸೇನೆ ದಾಳಿ ಮಾಡುತ್ತಿದ್ದು, ನಿನ್ನೆ 50ಕ್ಕೂ ಹೆಚ್ಚು ರಾಕೆಟ್ ಗಳು, ಮೆಷಿನ್ ಗನ್  ಹಾಗೂ ಗ್ರೆನೇಡ್ ಗಳ ಮೂಲಕ ಕಟ್ಟಡದಲ್ಲಿ ದಾಳಿ ನಡೆಸಿದ್ದಾರೆ. ಸೇನಾಪಡೆಗಳು ಸಿಡಿಸಿದ ರಾಕೆಟ್ ದಾಳಿಯಲ್ಲಿ ಓರ್ವ ಉಗ್ರಗಾಮಿ ಹತನಾಗಿರಬಹುದು ಎಂದು ಸೇನಾಧಿಕಾರಿಗಳು  ತಿಳಿಸಿದ್ದಾರೆ. ಕಟ್ಟಡದಲ್ಲಿ ಇನ್ನೂ ಇಬ್ಬರು ಉಗ್ರಗಾಮಿಗಳು ಅಡಗಿ ಕುಳಿತಿರುವ ಶಂಕೆ ಇದ್ದು, ಪ್ರಸ್ತುತ ಸೇನಾಪಡೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ಉಗ್ರರು ಗುಂಡು ಸಿಡಿಸುವುದನ್ನೇ ಕಾದು ನೋಡುತ್ತಿರುವ ಸೈನಿಕರು ಗುಂಡು ಹಾರಿಬರುವ ಜಾಗಕ್ಕೆ ಪ್ರತಿದಾಳಿ ನಡೆಸುತ್ತಿದ್ದಾರೆ.

ಕಟ್ಟಡ ಧ್ವಂಸಕ್ಕೆ ಸೇನೆ ಚಿಂತನೆ
ಇತ್ತ ಸೇನಾಪಡೆಗಳು ಕಾರ್ಯಾಚರಣೆ ನಡೆಸುತ್ತಿರುವಂತೆಯೇ ಅತ್ತ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಉಗ್ರರು ದಾಳಿ ನಡೆಸುತ್ತಿರುವ ಸರ್ಕಾರಿ ಕಟ್ಟಡವನ್ನೇ ಧರೆಗುರುಳಿಸಲು  ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಇಡಿಐ ಕಟ್ಟಡದ ಮೇಲೆ ಉಗ್ರರು ಮೂರನೇ ಬಾರಿ ದಾಳಿ ನಡೆಸುತ್ತಿದ್ದು, ಪ್ರತೀ ಬಾರಿ ದಾಳಿ ಮಾಡಿದಾಗಲೂ ಕಟ್ಟಡವನ್ನು  ಉಗ್ರರು ಬಂಕರ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಇತರೆ ಸಂದರ್ಭಗಳಲ್ಲಿ ಇದೇ ಕಟ್ಟಡದಲ್ಲಿ ಸ್ಥಳೀಯ ಮೂಲಭೂತವಾದಿಗಳು ಕಾಶ್ಮೀರಿ ಯುವಕರಿಗೆ ತರಬೇತಿ ನೀಡುವ  ಕುರಿತು ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇದೀಗ ಉಗ್ರರು ದಾಳಿ ಮಾಡಿರುವ ಕಟ್ಟಡವನ್ನು ಸ್ಫೋಟಿಸಿ ಧರೆಗುರುಳಿಸುವ ಚಿಂತನೆಯಲ್ಲಿ ಸೇನಾಧಿಕಾರಿಗಳು ತೊಡಗಿದ್ದಾರೆ ಎಂದು  ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.