Social distance

ಮುಂಗಾರು ಅಧಿವೇಶನ: ಸಾಮಾಜಿಕ ಅಂತರ ನಿಯಮ ಪಾಲಿಸುವುದೇ ದೊಡ್ಡ ಸವಾಲು
ಕೊರೋನಾ ಸೋಂಕಿನ ಆತಂಕದ ವಿಧಾನಸಭೆ ಮತ್ತು ಸಂಸತ್ತಿನ ಮುಂಗಾರು ಅಧಿವೇಶನ ನಡೆಸಲು ಸಿದ್ದತೆಗಳು ನಡೆಯುತ್ತಿವೆ. ಸದನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಸವಾಲಿನ ಕೆಲಸವಾಗಿದೆ.

ಪಂಜಾಬ್ ಸಿಎಂ ಜತೆ ಸೇರಿ ಸಾಮಾಜಿಕ ಅಂತರದ ಸಂದೇಶ ಸಾರಿದ 5 ವರ್ಷದ ಟಿಕ್‌ಟಾಕ್ ಸ್ಟಾರ್!
ಪಂಜಾಬಿನ ಮೊಗಾ ಜಿಲ್ಲೆಯ ಐದು ವರ್ಷದ ಟಿಕ್ ಟಾಕ್ ಸ್ತಾರ್ ನೂರ್‌ಪ್ರೀತ್ ಕೌರ್ ಅಲಿಯಾಸ್ ನೂರ್ ಈಗ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಜತೆ ಸೇರಿ ಸಾಮಾಜಿಕ ಅಂತರದ ಪಾಠ ಹೇಳುತ್ತಿದ್ದಾಖೆ. ಮಾಸ್ಕ್ ಧಾರಣೆ ಹಾಗೂ ಇತರೆ ಲಾಕ್‌ಡೌನ್ ಮಾನದಂಡಗಳನ್ನು ಪಾಲಿಸುವ ಮೂಲಕ ಸಾಮಾಜಿಕ ಅಂತರದ ಮಹತ್ವವನ್ನು ಸಾರುವುದರಲ್ಲಿ ಬ್ಯುಸಿಯಾಗಿದ್ದಾಳೆ.

ಜನಪ್ರತಿನಿಧಿಗಳೇ ಹೀಗಾದ್ರೆ ಹೇಗೆ?: ಸಾಮಾಜಿಕ ಅಂತರ ನಿಯಮ ಗಾಳಿಗೆ ತೂರಿದ ಸಚಿವ ಸೋಮಣ್ಣ!
ರಾಮನಗರ ಎಪಿಎಂಸಿ ಮಾರುಕಟ್ಟೆಯಲ್ಲಿ ಎಸ್ ಟಿ ಸೋಮಶೇಖರ್ ಮಾಡಿದ ತಪ್ಪನ್ನೇ ಬೆಂಗಳೂರಿನಲ್ಲಿ ವಿ ಸೋಮಣ್ಣ ಪುನಾರಾವರ್ತಿಸಿದ್ದಾರೆ. ಮೂಡಲ ಪಾಳ್ಯದಲ್ಲಿ ಕೆಮಿಕಲ್ ಟನಲ್ ಉದ್ಘಾಟನೆಯ ವೇಳೆ ವಸತಿ ಸಚಿವ ವಿ.ಸೋಮಣ್ಣ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳದ ಸಚಿವ ಎಸ್.ಟಿ ಸೋಮಶೇಖರ್: ವ್ಯಾಪಕ ಟೀಕೆ
ಎಪಿಎಂಸಿ ಮಾರುಕಟ್ಟೆಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಭೇಟಿ ನೀಡಿ, ಮಾರ್ಕೆಟ್ನ ಸ್ಥಿತಿಗತಿ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಬೆಳಂಬೆಳಗ್ಗೆಯೇ ಅಧಿಕಾರಿಗಳ ಜೊತೆಗೆ ಮಾರ್ಕೆಟ್ ರೌಂಡ್ಸ್ ಮಾಡಿದರು.

ಮಂಗಳೂರು: ಕೂಲಿ ಕಾರ್ಮಿಕರಿಗೆ 2000 ರೂ. ಸಿಕ್ಕುವ ವದಂತಿ-ಸಾಮಾಜಿಕ ಅಂತರ ಮರೆತು ಗುಂಪು ಸೇರಿದ ನೂರಾರು ಮಂದಿ
ಸರ್ಕಾರ ತಮ್ಮ ಕಷ್ಟಕ್ಕೆ ಸ್ಪಂದಿಸಿ ತಮಗೆ 2,000 ರೂ. ನಗದು ನೀಡುತ್ತದೆ ಎಂದು ಭಾವಿಸಿ ಲಾಕ್ ಡೌನ್, ಸಾಮಾಜಿಕ ಅಂತರದ ನಿಯಮಗಳನ್ನೆಲ್ಲಾ ಮರೆತು ನೂರಾರು ಜನ ಗುಂಪು ಗುಂಪಾಗಿ ನೆರೆದ ವಿಲಕ್ಷಣ ಘಟನೆ ಮಂಗಳುರಿನಲ್ಲಿ ನಡೆದಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರವನ್ನೇ ಮನೆಯನ್ನಾಗಿ ಮಾಡಿಕೊಂಡ ವಕೀಲ!
ಕೊರೋನಾವೈರಸ್ ಕಾರಣ ಲಾಕ್ ಡೌನ್ ಜಾರಿಯಲ್ಲಿದ್ದು,ಉತ್ಕರ ಪ್ರದೇಶದ ಹಪೂರ್ ಜಿಲ್ಲೆಯಲ್ಲಿ ವಕೀಲರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದ ಮೇಲೆ ತಾತ್ಕಾಲಿಕವಾಗಿ ಮನೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ.

ಕೊರೋನಾವೈರಸ್ ತಡೆಗಾಗಿ ಜನತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ- ರಾಷ್ಟ್ರಪತಿ
ಕೊರೋನಾವೈರಸ್ ತಡೆಗಾಗಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಹಾಗೂ ಸರ್ಕಾರದ ಎಲ್ಲಾ ಮಾರ್ಗಸೂತ್ರಗಳನ್ನು ಅನುಸರಿಸುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದ್ದಾರೆ.

ದೀಪ ಹಚ್ಚುವ ಭರದಲ್ಲಿ ಸಾಮಾಜಿಕ ಅಂತರ ಎಂಬ ಲಕ್ಷ್ಮಣ ರೇಖೆ ದಾಟದಿರಿ: ಜನತೆಗೆ ಪ್ರಧಾನಿ ಮೋದಿ ಮನವಿ
ಕೊರೋನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ದೀಪ ಹಚ್ಚುವ ಭರದಲ್ಲಿ ಸಾಮಾಜಿಕ ಅಂತರ ಎಂಬ ಲಕ್ಷ್ಮಣ ರೇಖೆಯನ್ನು ದಾಟದಿರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆ ಬಳಿ ಮನಿ ಮಾಡಿಕೊಂಡಿದ್ದಾರೆ.

'ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳುವವರು ಕಲಾಪ ನಡೆಸುವುದು ಏಕೆ: ಪ್ರಧಾನಿ ಮೋದಿಗೆ ಶಿವಸೇನೆ ಪ್ರಶ್ನೆ
ಕೊರೋನಾ ವೈರಸ್ ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಪ್ರಧಾನಿ ಮೋದಿ ಕೇಳುತ್ತಿದ್ದಾರೆ, ಆದರೆ ಇನ್ನೊಂದೆಡೆ ಅವರು, ರಾಜಕೀಯ ಉದ್ದೇಶಕ್ಕೆ ಸಂಸತ್ತು ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿರುವ ಕ್ರಮದ ಅರ್ಥವೇನು ಎಂದು ಶಿವಸೇನೆ ಪ್ರಶ್ನೆ ಮಾಡಿದೆ.

