ಪಂಜಾಬ್ ಸಿಎಂ ಜತೆ ಸೇರಿ ಸಾಮಾಜಿಕ ಅಂತರದ ಸಂದೇಶ ಸಾರಿದ 5 ವರ್ಷದ ಟಿಕ್‌ಟಾಕ್ ಸ್ಟಾರ್!
ಪಂಜಾಬಿನ ಮೊಗಾ ಜಿಲ್ಲೆಯ ಐದು ವರ್ಷದ ಟಿಕ್ ಟಾಕ್ ಸ್ತಾರ್ ನೂರ್‌ಪ್ರೀತ್ ಕೌರ್ ಅಲಿಯಾಸ್ ನೂರ್ ಈಗ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಜತೆ ಸೇರಿ ಸಾಮಾಜಿಕ ಅಂತರದ ಪಾಠ ಹೇಳುತ್ತಿದ್ದಾಖೆ. ಮಾಸ್ಕ್ ಧಾರಣೆ ಹಾಗೂ ಇತರೆ ಲಾಕ್‌ಡೌನ್ ಮಾನದಂಡಗಳನ್ನು ಪಾಲಿಸುವ ಮೂಲಕ ಸಾಮಾಜಿಕ ಅಂತರದ ಮಹತ್ವವನ್ನು ಸಾರುವುದರಲ್ಲಿ ಬ್ಯುಸಿಯಾಗಿದ್ದಾಳೆ.

ಚಂಡೀಘರ್: ಪಂಜಾಬಿನ ಮೊಗಾ ಜಿಲ್ಲೆಯ ಐದು ವರ್ಷದ ಟಿಕ್ ಟಾಕ್ ಸ್ತಾರ್ ನೂರ್‌ಪ್ರೀತ್ ಕೌರ್ ಅಲಿಯಾಸ್ ನೂರ್ ಈಗ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಜತೆ ಸೇರಿ ಸಾಮಾಜಿಕ ಅಂತರದ ಪಾಠ ಹೇಳುತ್ತಿದ್ದಾಖೆ. ಮಾಸ್ಕ್ ಧಾರಣೆ ಹಾಗೂ ಇತರೆ ಲಾಕ್‌ಡೌನ್ ಮಾನದಂಡಗಳನ್ನು ಪಾಲಿಸುವ ಮೂಲಕ ಸಾಮಾಜಿಕ ಅಂತರದ ಮಹತ್ವವನ್ನು ಸಾರುವುದರಲ್ಲಿ ಬ್ಯುಸಿಯಾಗಿದ್ದಾಳೆ.
ತನ್ನ ಇತ್ತೀಚಿನ ವಿಡಿಯೋದಲ್ಲಿ, ನೂರ್ ತನ್ನ ತಲೆಯ ಮೇಲೆ ಪಟ್ಕಾ ಧರಿಸಿ ಹುಡುಗನಂತೆ ಗೆಟಪ್ ಹಾಕಿದ್ದು ಲಾಕ್ ಡೌನ್ ನಡುವೆ ಹುಡುಗರ ಗುಂಪು ಕ್ರಿಕೆಟ್ ಆಡಲು ಮುಂದಾಗಿರುವ ಬಗ್ಗೆ ಸಿಎಂಗೆ ದೂರು ನೀಡುವುದನ್ನು ಕಾಣಬಹುದು. ಅಷ್ಟಲ್ಲದೆ ಆಕೆ ತನ್ನ ಸ್ನೇಹಿತರಿಗೆ ತಕ್ಷಣ ಆಟವನ್ನು ನಿಲ್ಲಿಸಿ ಮನೆಗೆ ತೆರಳುವಂತೆ ಕೇಳಿದ್ದಾಳೆ. ಆದರೆ ಹುಡುಗಋ ಆಕೆಯ ಮಾತು ಕೇಳುವುದಿಲ್ಲ. ನಂತರ ಆಕೆ ಸಿಎಂ ಅಮರಿಂದರ್ ಅವರಿಗೆ ಹುಡುಗರ ಬಗ್ಗೆ ದೂರು ನೀಡುವ ವೀಡಿಯೊ ಕರೆ ಮಾಡುತ್ತಾಳೆ. ಸಿಎಂ ಹುಡುಗರಿಗೆ ಲಾಲ್ ಡೌನ್ ನ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಹೇಳುತ್ತಾರೆ. ಇದಿಷ್ಟೂ ಆ ವಿಡಿಯೋದಲ್ಲಿದೆ.
ಮುಖ್ಯಮಂತ್ರಿ ಕಚೇರಿ (ಸಿಎಮ್‌ಒ) ಯ ಸೋಷಿಯಲ್ ಮೀಡಿಯಾ ತಂಡವು ನೂರ್ ಮತ್ತು ಹುಡುಗರೊಂದಿಗೆ ಕೈಜೋಡಿಸಿ ಈ ವಿಡಿಯೋವನ್ನು ಹೊರತಂದಿದೆ. ನೂರ್‌ನ ಸೋಷಿಯಲ್ ಮೀಡಿಯಾ ತಂಡ ಟಿಕ್ ಟಾಕ್ ನಲ್ಲಿ ಅಪ್‌ಲೋಡ್ ಮಾಡಿರುವ ಈ ವಿಡಿಯೋಕ್ಕೆ ಇದುವರೆಗೆ 5.32 ಲಕ್ಷಕ್ಕೂ ಹೆಚ್ಚು ಲೈಕ್ ಮತ್ತು 3.2 ಮಿಲಿಯನ್ ವೀಕ್ಷಣೆಗಳು ಬಂದಿವೆ. ಇದನ್ನು ಅಮರೀಂದರ್ ಅವರ ಫ್ಯಾನ್ಸ್ ಪುಟದಲ್ಲಿ ಫೇಸ್‌ಬುಕ್ 'Punjab Da Captain’.ಲ್ಲಿ ಸಹ ಹಂಚಿಕೊಳ್ಳಲಾಗಿದೆ.
ಪಂಜಾಬ್ ಯೂತ್ ಕಾಂಗ್ರೆಸ್ ತನ್ನ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ ಮತ್ತು "ಒಂದು ಮಗು ಲಾಕ್‌ಡೌನ್ ಅನ್ನು ಬಹಳ ಮುಖ್ಯವಾದ ಕೆಲಸಗಳನ್ನು ಮಾಡುವುದಕ್ಕಾಗಿ ಮಾತ್ರ ಸಡಿಲಿಕೆ ಮಾಡಲಾಗಿದೆ ಹಾಗೂ ಮೋಜಿನ ಚಟುವಟಿಕೆಗಳಿಗಾಗಿ ಅಲ್ಲ ಎಂದು ಅರ್ಥಮಾಡಿದೆ ಎಂದರೆ ನಾವೆಲ್ಲರೂ ಅದನ್ನು ರ್ಥಮಾಡಿಕೊಳ್ಳಬಹುದು! ಅಗತ್ಯವಿಲ್ಲದಿದ್ದರೆ ಮನೆಯಲ್ಲೇ ಇರಿ" ಎಂದು ಬರೆಯಲಾಗಿದೆ.
ನೂರ್ ಮೊಗಾ ಜಿಲ್ಲೆಯ ಭಿಂದರ್ ಕಲಾನ್ ಗ್ರಾಮದ ಸತ್ನಮ್ ಸಿಂಗ್ ಅವರ ಪುತ್ರಿ, ಅವರು ಇಟ್ಟಿಗೆ ಗೂಡು ತಯಾರಿಕೆ ಘಟಕದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಅವಳು ತನ್ನ 9 ವರ್ಷದ ಸಹೋದರಿ ಜಶನ್‌ಪ್ರೀತ್‌ನೊಂದಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಳು. ಅವರ ತಾಯಿ ಗೃಹಿಣಿ. ಸಾಮಾಜಿಕ ಅಂತರದ ಸಂದೇಶವನ್ನು ಹರಡಲು ಅವರು ಈ ಹಿಂದೆ ಮೊಗಾ ಪೊಲೀಸರೊಂದಿಗೆ ಕೈಜೋಡಿಸಿದ್ದಳು. ಈಗ ಟಿಕ್ ಟಾಕ್ ಸೆನ್ಸೇಶನ್ ಆಗಿರುವ ನೂರ್ ಈ ಹಿಂದೆ ವೀಡಿಯೊದಲ್ಲಿ ಯುವ ಸಿಖ್ ಹುಡುಗನಾಗಿ ಬಂದಿದ್ದಳು. ಕೇವಲ 10 ದಿನಗಳಲ್ಲಿ ಅವಳು ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದು ಆಕೆಯ ಟಿಕ್ ತಾಕ್ ಖಾತೆಯು ಎಂಟು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


