SIR

ಅಕ್ರಮವಾಗಿ ಮಸೀದಿಗಳಲ್ಲಿ SIR: ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು; ವಿಡಿಯೋ ರಿಲೀಸ್
ರಾಜ್ಯ ಚುನಾವಣಾ ಆಯೋಗದಿಂದ ಪ್ರತ್ಯೇಕ ಎಸ್ಐಆರ್ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ನಲ್ಲಿ ತುರ್ತು ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದಿದ್ದಾರೆ.

ದಿನ ಬೆಳಗಾದ್ರೆ ದೇವಸ್ಥಾನ ಸುತ್ತುತ್ತೀರಿ, ಮತ್ತೊಂಡೆದೆ ಮುಸ್ಲಿಮರನ್ನು ಓಲೈಸುತ್ತೀರಿ: ಜಯನಗರ ಮಸೀದಿಯಲ್ಲಿ SIR ಪ್ರಕ್ರಿಯೆ- ವಿಜಯೇಂದ್ರ
ಈ ಬೆನ್ನಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಇಂತಹುದ್ದೇ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಬೆಂಗಳೂರಿನ ಜಯನಗರದಲ್ಲಿ ಮಸೀದಿ ಒಳಗೆ ಎಸ್ಐಆರ್ ಮಾಡಲಾಗುತ್ತಿದೆ ಎಂದವರು ದೂರಿದ್ದಾರೆ.

SIR ಪ್ರಕ್ರಿಯೆಗೆ ರಾಜ್ಯ ಸರ್ಕಾರವೇ ಅಡ್ಡಿ; ಕಾಂಗ್ರೆಸ್ ನಾಯಕರನ್ನೇ BLOಗಳಾಗಿ ನೇಮಿಸಿದ್ದಾರೆ: ಆರ್. ಅಶೋಕ್ ಆರೋಪ
ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಸರ್ಕಾರಿ ಅಧಿಕಾರಿಗಳನ್ನು ಮಾತ್ರ BLOಗಳಾಗಿ ನೇಮಕ ಮಾಡಬೇಕು. ಆದರೆ, ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಸುಮಾರು 20 ಕಡೆಗಳಲ್ಲಿ ಸರ್ಕಾರಿ ನೌಕರರಲ್ಲದ ವ್ಯಕ್ತಿಗಳು ಹಾಗೂ ಕಾಂಗ್ರೆಸ್ ಮುಖಂಡರನ್ನು BLOಗಳಾಗಿ ನೇಮಕ ಮಾಡಲಾಗಿದೆ.

ರಾಜಕೀಯ ನಾಯಕರ ಮಾತಿನಿಂದ ಆತಂಕ ಸೃಷ್ಟಿಯಾಗಿದ್ದು SIR ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (SIR) ಪ್ರಕ್ರಿಯೆಯು ಆರಂಭವಾಗಿದ್ದು, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಮನೆಯಿಂದಲೇ ಇದಕ್ಕೆ ಚಾಲನೆ ಸಿಕ್ಕಿದೆ. ಇನ್ನು ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ನೀಡಿದ ಬಾನು ಮುಷ್ತಾಕ್...

'ಮತದಾನ ಹಕ್ಕು ಕಳೆದುಕೊಂಡರೆ ಸರ್ಕಾರಿ ಸೌಲಭ್ಯಗಳೂ ಕೈತಪ್ಪಬಹುದು': ಕರ್ನಾಟಕದಲ್ಲಿ ಸಿಎಂ ಮನೆಯಿಂದ SIR ಆರಂಭ; Video
ಅಧಿಕಾರಿಗಳು ಅವರ ಫೋನ್ನಲ್ಲೇ ಆ್ಯಪ್ ಡೌನ್ಲೋಡ್ ಮಾಡಿ ತಿಳಿಸಿಕೊಟ್ಟರು. ಫೋನ್ನಲ್ಲಿ ಆ್ಯಪ್ ಯೂಸ್ ಮಾಡುವುದು ಸ್ವಲ್ಪ ಜನರಿಗೆ ಗೊತ್ತಾಗಬೇಕು, ಸ್ವಲ್ಪ ಕನ್ಫ್ಯೂಸ್ ಆಗುತ್ತದೆ ಎಂದು ಸಿಎಂ ಹೇಳಿದರು. ಸ್ವತಃ ತಾವೇ ಎಸ್ಐಆರ್ ಎನುಮರೇಷನ್ ಫಾರ್ಮ್ ಭರ್ತಿ ಮಾಡಿದರು.

SIR ವಿರುದ್ಧ ಕಾನೂನು ಹೋರಾಟಕ್ಕೆ ರಾಜ್ಯ ಸರ್ಕಾರ ಸಜ್ಜು, ಎಲ್ಲಾ ಕಾನೂನು ಆಯ್ಕೆಗಳ ಪರಿಶೀಲನೆ: ಸಚಿವ ಪ್ರಿಯಾಂಕ್ ಖರ್ಗೆ
ಎಸ್‌ಐಆರ್ ಕುರಿತು ರಾಜ್ಯ ಸಚಿವ ಸಂಪುಟ ವ್ಯಕ್ತಪಡಿಸಿದ್ದ ಆಕ್ಷೇಪಣೆಗಳನ್ನು ಕಳೆದ ವಾರವೇ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ಈ ಕುರಿತು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ಅವರಿಗೂ ಮಾಹಿತಿ ನೀಡಲಾಗಿದೆ.

SIR ಪ್ರಕ್ರಿಯೆ ಕುರಿತು ಎಲ್ಲಾ ಪಕ್ಷಗಳೊಂದಿಗೆ ಚರ್ಚಿಸಿಯೇ ಜಾರಿಗೊಳಿಸುತ್ತಿರುವುದು, ಕಾಂಗ್ರೆಸ್ ಆರೋಪದಲ್ಲಿ ಸತ್ಯವಿಲ್ಲ: CEO ಅನ್ಬುಕುಮಾರ್
ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದು, ಅವರಲ್ಲಿ 91.91 ಶೇಕಡಾ ಮಂದಿಯ ಮಾಹಿತಿ ಈಗಾಗಲೇ ಮ್ಯಾಪ್ ಆಗಿದೆ.

PRC ಬಗ್ಗೆ ಆತಂಕ ಬೇಡ; ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು SIR ನೋಂದಣಿ ಕಡ್ಡಾಯ: ಸಿಎಂ ಡಿ.ಕೆ ಶಿವಕುಮಾರ್
ಸ್ವಂತ ಮನೆ ಇಲ್ಲದ ಬಾಡಿಗೆದಾರರು ಸೇರಿದಂತೆ ಶಾಶ್ವತ ವಿಳಾಸವಿಲ್ಲದವರೂ ಆಧಾರ್, ಮತದಾರರ ಗುರುತಿನ ಚೀಟಿ ಅಥವಾ ಸರ್ಕಾರ ಸೂಚಿಸಿರುವ ಇತರ ದಾಖಲೆಗಳನ್ನು ಸಲ್ಲಿಸಿ ಸ್ಥಳೀಯ ಅಧಿಕಾರಿಗಳಿಂದ ಶಾಶ್ವತ ನಿವಾಸ ಪ್ರಮಾಣಪತ್ರ ಪಡೆಯಬಹುದು.

ಕರ್ನಾಟಕದಲ್ಲಿ SIR: ಮನೆ ಮನೆಗೆ ತೆರಳಿ ಮತದಾರರ ಗಣತಿ ಇಂದು ಆರಂಭ; Video
ಮತದಾರರ ಪಟ್ಟಿಯನ್ನು ನವೀಕರಿಸಿ ಶುದ್ಧೀಕರಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ಈ ಕಾರ್ಯದಲ್ಲಿ 59,050 ಬೂತ್ ಮಟ್ಟದ ಅಧಿಕಾರಿಗಳು ರಾಜ್ಯಾದ್ಯಂತ ಮನೆ ಮನೆಗೆ ತೆರಳಿ ಪ್ರತಿಯೊಬ್ಬ ನೋಂದಾಯಿತ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಲಿದ್ದಾರೆ.

