shooting

ಜನವರಿಯಿಂದ 'ಟಾಕ್ಸಿಕ್' ಶೂಟಿಂಗ್: ಶೃತಿ ಹಾಸನ್ ಜೊತೆ ಮೃಣಾಲ್, ಸಾಯಿಪಲ್ಲವಿ? 19ನೇ ಸಿನಿಮಾಗೆ ಯಶ್ ನಿರ್ಮಾಪಕ!
ಸ್ಯಾಂಡಲ್‌ವುಡ್‌ನಲ್ಲಿ ಟಾಕ್ಸಿಕ್ ಚಿತ್ರದ ಚರ್ಚೆ ಹೆಚ್ಚಾಗುತ್ತಿದೆ. 18 ತಿಂಗಳು ಕಾದ ಫ್ಯಾನ್ಸ್‌ಗೆ ಈ ಮೂಲಕ ಹೊಸ ಸುದ್ದಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲಿಯೇ ಸಿನಿಮಾ ಕುರಿತು ಸಾಕಷ್ಟು ಕುತೂಹಲಗಳು ಕೇಳಿ ಬರುತ್ತಿವೆ.

ಶೂಟಿಂಗ್ ವೇಳೆ ಕ್ವಾರಿಗೆ ಬಿದ್ದ ನಟ ಮಂಡ್ಯ ರಮೇಶ್: ಕೈ-ಕಾಲು ಮೂಳೆ ಮುರಿತ!
ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರು ಧಾರಾವಾಹಿ ಚಿತ್ರೀಕರಣದ ವೇಳೆ ಕಾಲು ಜಾರಿ ಬಿದ್ದಿದ್ದು, ತೀವ್ರಗಾಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಧಾರಾವಾಹಿ ಶೂಟಿಂಗ್ ವೇಳೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ.

ಗುಂಡು ಹಾರಿಸಿ ಕೊಲ್ಲಲು ಬಂದವರಿಗೆ 'ಪೊರಕೆ ಪೂಜೆ': ರೌಡಿಗಳನ್ನು ಓಡಿಸಿದ ಮಹಿಳೆಯ ವಿಡಿಯೋ ವೈರಲ್
ಮನೆ ಮುಂದೆ ನಿಂತಿದ್ದ ವ್ಯಕ್ತಿ ಮೇಲೆ ಗುಂಡು ಹಾರಿಸಿ ಕೊಲ್ಲಲು ಬಂದ ದುಷ್ಕರ್ಮಿಗಳನ್ನು ಕಸ ಗುಡಿಸುವ ಪೊರಕೆಯಿಂದಲೇ ಮಹಿಳೆಯೊಬ್ಬರು ಹೆದರಿಸಿ ಓಡಿಸಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

‘ನಮ್ಮ ಮೆಟ್ರೊ’ದಲ್ಲಿ ಶೂಟಿಂಗ್ ಗೆ ಅವಕಾಶ: ಬಿಎಂಆರ್‌ಸಿಎಲ್ ಮಾರ್ಗಸೂಚಿ ಪ್ರಕಟ
ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ತನ್ನ ರೈಲುಗಳಲ್ಲಿ ಚಿತ್ರೀಕರಣಕ್ಕಾಗಿ ಶುಲ್ಕಪರಿಷ್ಕರಿಸಿದೆ ಮತ್ತು ಹೊಸ ನಿಯಮಗಳೊಂದಿಗೆ ಬಂದಿದೆ. ‘ನಮ್ಮ ಮೆಟ್ರೊ’ದಲ್ಲಿ ಸಿನಿಮಾ, ಕಿರುಚಿತ್ರ ಹಾಗೂ ಧಾರಾವಾಹಿ ಚಿತ್ರೀಕರಣಕ್ಕೆ ಅವಕಾಶ ನೀಡಿ ಬಿಎಂಆರ್‌ಸಿಎಲ್ ಮಾರ್ಗಸೂಚಿ ಪ್ರಕಟಿಸಿದೆ.

'ಕಂಗುವ' ಶೂಟಿಂಗ್ ವೇಳೆ ಅಪಘಾತ: ನಟ ಸೂರ್ಯ ಆಸ್ಪತ್ರೆಗೆ ದಾಖಲು
‘ಕಂಗುವ‘ ಸಿನಿಮಾದ ಶೂಟಿಂಗ್ ವೇಳೆ ಕಾಲಿವುಡ್ ನಟ ಸೂರ್ಯ ಅವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶೀತ ಹವಾಮಾನ ಮತ್ತು ಮಳೆಯಿಂದಾಗಿ ಅಮೆರಿಕಾದಲ್ಲಿ ಶೂಟಿಂಗ್ ಸವಾಲಿನದ್ದಾಗಿತ್ತು: ನಾಗತಿಹಳ್ಳಿ ಚಂದ್ರಶೇಖರ್
ಅಮೇರಿಕಾ ಅಮೇರಿಕಾ ಎಂಬ ಕ್ಲಾಸಿಕ್ ಸಿನಿಮಾ ನೀಡಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಮುಂದಿನ ಅಮರ ಮಧುರ ಪ್ರೇಮ ಚಿತ್ರದ ಶೂಟಿಂಗ್ ಗಾಗಿ ಯುಎಸ್‌ಎಗೆ ತೆರಳಿದ್ದಾರೆ.

ಅಮೆರಿಕಾದಲ್ಲಿ ಬಂಧೂಕುಧಾರಿಗಳ ಅಟ್ಟಹಾಸ: ಸಾಮೂಹಿಕ ಗುಂಡಿನ ದಾಳಿಯಲ್ಲಿ 22 ಮಂದಿ ದುರ್ಮರಣ
ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಮತ್ತೆ ಬಂದೂಕುಧಾರಿಗಳು ಅಟ್ಟಹಾಸ ಮೆರೆದಿದ್ದಾರೆ. ಲೆವಿಸ್ಟನ್ ಪ್ರಾಂತ್ಯದ ಮೈನೆಯಲ್ಲಿ ಬುಧವಾರ ರಾತ್ರಿ ಬಂದೂಕುಧಾರಿಯೊಬ್ಬ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

'ಶೆಫ್ ಚಿದಂಬರ' ಚಿತ್ರೀಕರಣ 29 ದಿನಗಳಲ್ಲಿ ಮುಕ್ತಾಯ
ಅನಿರುದ್ಧ ಜಟ್ಕರ್ ಅವರ ಮುಂದಿನ ಸಿನಿಮಾ ಶೆಫ್ ಚಿದಂಬರ ಕೇವಲ 29 ದಿನಗಳಲ್ಲೇ ಚಿತ್ರೀಕರಣ ಮುಕ್ತಾಯಗೊಳಿಸಿದೆ. ಆನಂದ್ ರಾಜ್ ಸಿನಿಮಾ ನಿರ್ದೇಶನ ಮಾಡಿದ್ದು, ಅ.10 ರಂದು ಚಿತ್ರೀಕರಣ ಪೂರ್ಣಗೊಂಡಿದೆ.

ಏಷ್ಯನ್ ಗೇಮ್ಸ್ 2023: 10 ಮೀ ಶೂಟಿಂಗ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ
ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತದ ಅದ್ಭುತ ಪ್ರದರ್ಶನ ಶನಿವಾರವೂ ಮುಂದುವರಿದಿದೆ.

