Shobha Karandlaje

ರೈತರಂತೆ ನಟಿಸುವವರ ಮನವೊಲಿಸಲು ಸಾಧ್ಯವಿಲ್ಲ; ಕೇಂದ್ರ ಕೃಷಿ ಸಚಿವೆ ಕರಂದ್ಲಾಜೆ
ರೈತರ ಮನವೊಲಿಸಬಹುದು... ಆದರೆ, ರೈತರಂತೆ ನಟಿಸುವವರ ಮನವೊಲಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನೂತನ ಕೃಷಿ ಕಾಯ್ದೆಯಿಂದ ರೈತರ ಬೆಳೆಗೆ ಹೆಚ್ಚಿನ ಬೆಲೆ, ರಾಜ್ಯ ರಾಜಕಾರಣಕ್ಕೆ ಮರಳುವುದಿಲ್ಲ: ಶೋಭಾ ಕರಂದ್ಲಾಜೆ
ಹಳ್ಳಿಯಲ್ಲಿ ನಾನು ಓದುವಾಗ ವಿದ್ಯುತ್, ರಸ್ತೆ ಇರಲಿಲ್ಲ. ಅಂತಹ ಹಳ್ಳಿಯಿಂದ ಬಂದವಳಿಗೆ ಕೃಷಿ ಖಾತೆ ಕೊಟ್ಟು ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ನಾವು ದೇಶದ ಶೇಕಡ 80ರಷ್ಟು ರೈತರ ಹಿತ ಕಾಯಬೇಕಿದೆ.

ಜನಾಶೀರ್ವಾದ ಯಾತ್ರೆ: ಭತ್ತ ನಾಟಿ ಮಾಡಿದ ಶೋಭಾ, ರೋಡ್ ಶೋ ನಡೆಸಿದ ಖೂಬಾ; ಮಠಕ್ಕೆ ರಾಜೀವ್ ಚಂದ್ರಶೇಖರ್ ಭೇಟಿ!
ಜನಾಶೀರ್ವಾದ ಯಾತ್ರೆ ಕೈಗೊಂಡಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೋಮವಾರ ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಗದ್ದೆ ನಾಟಿ ಮಾಡಿ ಗಮನ ಸೆಳೆದರು. ರೈತ ಮಹಿಳೆಯರ ಜೊತೆ ಗದ್ದೆಗೆ ಇಳಿದ ಶೋಭಾ 5 ನಿಮಿಷಗಳ ಕಾಲ ನಾಟಿ ಮಾಡಿದರು.

ಕುವೈತ್‌ನಲ್ಲಿ ಸಿಲುಕಿದ್ದ ತಾಯಿ-ಮಗು ಮಂಗಳೂರಿಗೆ ಪ್ರಯಾಣಿಸಲು 5 ನಿಮಿಷದಲ್ಲಿ ವ್ಯವಸ್ಥೆ ಮಾಡಿಸಿದ ಸಚಿವೆ ಶೋಭಾ ಕರಂದ್ಲಾಜೆ
ಸಮಯಕ್ಕೆ ಸರಿಯಾಗಿ ವಿದೇಶಾಂಗ ಸಚಿವಾಲಯ(ಎಂಇಎ) ನೆರವಾಗಿದ್ದರಿಂದ ಮಹಿಳೆ ಮತ್ತು ಆಕೆಯ ಆರು ತಿಂಗಳ ಮಗು ಕುವೈತ್‌ನಿಂದ ಮಂಗಳೂರು ವಿಮಾನ ಹತ್ತಲು ಸಾಧ್ಯವಾಯಿತು.

ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆ: ಅಧಿಕಾರಿಗಳಿಂದ ಮಾಹಿತಿ ಪಡೆದ ಶೋಭಾ ಕರಂದ್ಲಾಜೆ
ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳೊಂದಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಶುಕ್ರವಾರ ಸಭೆ ನಡೆಸಿ, ಮಾಹಿತಿ ಪಡೆದುಕೊಂಡರು.

ರೈತರ ಮನವೊಲಿಸಬಹುದು, ಆದರೆ ರಾಜಕೀಯ ಪ್ರೇರಿತರನ್ನಲ್ಲ: ಶೋಭಾ ಕರಂದ್ಲಾಜೆ
ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತವಾದದ್ದು ಎಂದು ನೂತನ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.

ನಾನು ರೈತನ ಮಗಳು, ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತೇನೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ರೈತರ ಪರ ಕೆಲಸ ಮಾಡುವ ಜವಾಬ್ದಾರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನಗೆ ನೀಡಿದ್ದಾರೆ. ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತೇನೆ ಎಂದು ಕೇಂದ್ರದ ನೂತನ ಕೃಷಿ ಮತ್ತು ರೈತರ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಏಕೈಕ ಒಕ್ಕಲಿಗ ಮಹಿಳೆ ಶೋಭಾ ಕರಂದ್ಲಾಜೆ!
ಡಿವಿ ಸದಾನಂದಗೌಡರ ನಂತರ ಮತ್ತೊಬ್ಬ ಒಕ್ಕಲಿಗ ಪ್ರಭಾವಿ ನಾಯಕಿ ಶೋಭ ಕರಂದ್ಲಾಜೆ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ದೊರೆತಿದೆ.

ಸಂಪುಟ ವಿಸ್ತರಣೆಗೆ ಮುನ್ನ ಪ್ರಧಾನಿ ಅಧಿಕೃತ ನಿವಾಸ ಬಳಿ ಬಿರುಸಿನ ಚಟುವಟಿಕೆ: ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ ಆಗಮನ?
ರಾಷ್ಟ್ರ ರಾಜಧಾನಿ ದೆಹಲಿಯತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಎನ್ ಡಿಎ-2 ಸರ್ಕಾರ ಬಂದ ಮೇಲೆ ನರೇಂದ್ರ ಮೋದಿ ಸಂಪುಟದ ವಿಸ್ತರಣೆ ಇಂದು ಸಾಯಂಕಾಲ ನಡೆಯಲಿದೆ. ಅದಕ್ಕೂ ಮುನ್ನ ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸ ದೆಹಲಿಯ 7, ಲೋಕ ಕಲ್ಯಾಣ ಮಾರ್ಗ್ ಗೆ ಈಗ ಒಬ್ಬೊಬ್ಬರೇ ಸಂಭಾವ್ಯ ಸಚಿವರು, ರಾಜಕೀಯ ನಾಯಕರು ಆಗಮಿಸುತ್ತಿದ್ದಾರೆ.

