Shobha Karandlaje

ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ
ಪ್ರತಿಪಕ್ಷಗಳ ಭಾರಿ ವಿರೋಧದ ಮಧ್ಯೆ ಸರ್ಕಾರವು ವಿಧಾನಮಂಡಲದಲ್ಲಿ ಈ ಮಸೂದೆಗೆ ಅಂಗೀಕಾರ ಪಡೆದುಕೊಂಡಿದೆ. ಆದರೆ ಈ ಮಸೂದೆಗೆ ಅಂಕಿತ ಹಾಕಬೇಡಿ ಎಂದು ಕೋರಿ, ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ.

ಕಾಂಗ್ರೆಸ್ ಗೆದ್ದಾಗ ಮತಗಳ್ಳತನದ ಪ್ರಶ್ನೆಯೇ ಇರಲ್ಲ, ನಾವು ಗೆದ್ದರೆ ಮತಗಳ್ಳತನವೇ?: ಶೋಭಾ ಕರಂದ್ಲಾಜೆ
ಮತದಾರರ ಪಟ್ಟಿ ಪರಿಷ್ಕರಣೆ ನಂತರ ಉತ್ತಮ ಮತದಾನವಾಗಿದೆ. ಚುನಾವಣೆಯಲ್ಲಿ ಎನ್‌ಡಿಎ ಗೆದ್ದಿದೆ. ಕಾಂಗ್ರೆಸ್ ಗೆದ್ದಾಗ ಮತಗಳ್ಳತನದ ಪ್ರಶ್ನೆಯೇ ಬರುವುದಿಲ್ಲ. ನಾವು ಗೆದ್ದರೆ ಮತಗಳ್ಳತನವಾಗಿದೆಯೇ.

ಬೆಂಗಳೂರು: ಜಿಕೆವಿಕೆ ಕೃಷಿ ಮೇಳಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ
ನಮ್ಮ ರೈತರಲ್ಲಿ ಶೇ. 80 ಕ್ಕೂ ಹೆಚ್ಚು ಜನರು ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದು, ಎರಡೂವರೆ ಎಕರೆಗಿಂತ ಕಡಿಮೆ ಭೂಮಿ ಹೊಂದಿದ್ದಾರೆ. ನಮ್ಮ ಯೋಜನೆಗಳು ಅವರನ್ನು ಬಲಪಡಿಸುವ ಮತ್ತು ಬೆಂಬಲಿಸುವ ಗುರಿಯನ್ನು ಹೊಂದಿರಬೇಕು.

'ಕಿಲ್ಲರ್ ಕಾಂಗ್ರೆಸ್' ನಿಂದ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ: ಶೋಭಾ ಕರಂದ್ಲಾಜೆ ಕಿಡಿ
ಮಗಳ ಶವ ಪರೀಕ್ಷೆಗೂ ಲಂಚ ಪಡೆದ ಪ್ರಕರಣದಿಂದ ಕರ್ನಾಟಕದ ಮಾನ ರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ರಾಜ್ಯದಲ್ಲಿ ಲಂಚಾವತಾರ ತಾಂಡವವಾಡುತ್ತಿದೆ.

ಮೈಸೂರು ರೇಷ್ಮೆಗೆ ಜಾಗತಿಕ ಬೇಡಿಕೆಯಿದ್ದು, ಗುಣಮಟ್ಟದ ಉತ್ಪಾದನೆಯತ್ತ ಗಮನ ಹರಿಸಬೇಕಿದೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ರೇಷ್ಮೆ ಬಟ್ಟೆಯ ಬೇಡಿಕೆ 45,000 ಮೆಟ್ರಿಕ್ ಟನ್ ಇದೆ. ಆದರೆ ಭಾರತದಲ್ಲಿ ಕೇವಲ 41,000 ಮೆಟ್ರಿಕ್ ಟನ್ ರೇಷ್ಮೆ ಉತ್ಪಾದಿಸಲಾಗುತ್ತದೆ.

ರಾಹುಲ್ ಗಾಂಧಿ ತನಿಖೆ ಮಾಡಿದರೆ ಮತಗಳ್ಳತನದ ಬಗ್ಗೆ ತಿಳಿಯುತ್ತೆ: ಶೋಭಾ ಕರಂದ್ಲಾಜೆ
ದೇಶದ ಮೇಲೆ ಅಪನಂಬಿಕೆ ಬರುವ ರೀತಿಯಲ್ಲಿ ಮಾಡುವುದು ರಾಹುಲ್ ಗಾಂಧಿ ವಿಚಾರ. ದೇಶದಲ್ಲಿ ಕಲಹಸೃಷ್ಟಿ ಮಾಡಿ ಅಶಾಂತಿ ಹುಟ್ಟಿಸುವುದು ಕಾಂಗ್ರೆಸ್‌ನ ಉದ್ದೇಶ. ಇದರ ಹಿಂದೆ ಜಾರ್ಜ್ ಸೊರೊಸ್ ಇದ್ದಾರೆ, ಅವರ ಉದ್ದೇಶ ಅಶಾಂತಿ ಹುಟ್ಟಿಸುವುದು.

ಮುಂದಿನ ಜನ್ಮದಲ್ಲಿ 'ಮುಸ್ಲಿಂ' ಆಗಿ ಹುಟ್ಟುವ ಆಸೆ: ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ ವಿರುದ್ಧ ಬಿಜೆಪಿ ಕಿಡಿ! Video
ಈದ್‌ಮಿಲಾದ್ ಹಬ್ಬದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ರಕ್ತದಾನ, ಉಚಿತ ಆರೋಗ್ಯ ತಪಾಸಣೆ ಶಿಬಿರದದಲ್ಲಿ ಮಾತನಾಡಿದ ಅವರು, ನಾನು ನಾಲ್ಕು ಬಾರಿ ಶಾಸಕನಾಗಿ ನಿಮ್ಮ ಮುಂದೆ ಮಾತಾಡಿ ಬಂದಿದ್ದೇನೆ ಅಂದ್ರೆ ಅದಕ್ಕೆ ಕಾರಣ ಮುಸ್ಲಿಂ ಬಾಂಧವರು ಎಂದಿದ್ದಾರೆ.

ಡಿ.ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದಾರೆ, ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ
ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯೊಂದನ್ನು ನಡೆಸಿ ಕರ್ನಾಟಕ ಸರ್ಕಾರವನ್ನು ಅದರಲ್ಲೂ ನಿರ್ದಿಷ್ಟವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ನೀತಿ, ಕಾನೂನು ಸುವ್ಯವಸ್ಥೆ ರಾಜ್ಯದ ವಿಷಯ; ಟಿಎಂಸಿ ಪ್ರಶ್ನೆಗೆ ಸಚಿವೆ ಶೋಭಾ ಕರಂದ್ಲಾಜೆ ಉತ್ತರ
ಇಂದು ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಶೋಭಾ ಕರಂದ್ಲಾಜೆ ಅವರು, ಅಸಂಘಟಿತ ಕಾರ್ಮಿಕರ ಸಂಖ್ಯೆಯಲ್ಲಿ ಪಶ್ಚಿಮ ಬಂಗಾಳ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

