Shobha Karandlaje

ದತ್ತ ಜಯಂತಿ ಶೋಭಾ ಯಾತ್ರೆ: ಕಾರ್ಯಕರ್ತರೊಂದಿಗೆ ಶೋಭಾ ಕರಂದ್ಲಾಜೆ, ಸಿಟಿ ರವಿ ಹೆಜ್ಜೆ! ವಿಡಿಯೋ
ಜಿಲ್ಲೆಯ ಹಲವೆಡೆ ಅದ್ಧೂರಿಯಾಗಿ ದತ್ತ ಜಯಂತಿ ಆಚರಣೆ ಮಾಡಲಾಗುತ್ತಿದೆ. ತಾಲೂಕಿನ ಆಲ್ದೂರಿನಲ್ಲಿ ಶನಿವಾರ ನಡೆದ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಚಿವ ಸಿ.ಟಿ. ರವಿ ಕಾರ್ಯಕರ್ತರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.

ಕೊಬ್ಬರಿ ಬೆಳೆಗಾರರ ನೆರವಿಗೆ ಮುಂದಾಗುವಂತೆ ಕೇಂದ್ರ ಸಚಿವರಿಗೆ ಜೆಡಿಎಸ್ ನಿಯೋಗದ ಮನವಿ
ರಾಜ್ಯಾದ್ಯಂತ ಕೊಬ್ಬರಿ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದು ಕೂಡಲೇ ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಶಾಸಕರ ತಂಡ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯವರಿಗೆ ಮನವಿ ಸಲ್ಲಿಸಿತು.

ಆರ್‌ಎಸ್‌ಎಸ್ ಸಮಾನತೆ, ಏಕತೆ ಪರವಾಗಿ ನಿಂತಿದೆ: ಗೂಳಿಹಟ್ಟಿ ಆರೋಪ ತಳ್ಳಿಹಾಕಿದ ಶೋಭಾ ಕರಂದ್ಲಾಜೆ
ದೇಶದ ಎಲ್ಲ ವರ್ಗದವರಲ್ಲಿ ಸಮಾನತೆ ಮತ್ತು ಏಕತೆಯನ್ನು ಖಚಿತಪಡಿಸಿಕೊಳ್ಳವುದು ಆರ್‌ಎಸ್‌ಎಸ್‌ನ ಉದ್ದೇಶವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಶನಿವಾರ...

'ಗ್ಯಾರಂಟಿ' ಮೋಸ ಎನ್ನುವುದು ಸಾಬೀತಾಗಿದೆ; ಬಿಜೆಪಿಗೆ ಮತ ನೀಡಿ ಜನ ಮೋದಿ ಬೆಂಬಲಿಸಿದ್ದಾರೆ: ಶೋಭಾ ಕರಂದ್ಲಾಜೆ
3 ರಾಜ್ಯಗಳ ಜನರು ಬಿಜೆಪಿಗೆ ಮತ ನೀಡಿ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಿದ್ದಾರೆ. ಕಾಂಗ್ರೆಸ್‌ನವರ ಗ್ಯಾರಂಟಿ ಅದು ಗ್ಯಾರಂಟಿ ಅಲ್ಲ, ಮೋಸ ಎನ್ನುವುದು ಸಾಬೀತಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದಿರುವ ಕೇಂದ್ರ ಸರಕಾರದ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ಗೆ ರಾಜ್ಯ ಸರ್ಕಾರ ಸಂಪೂರ್ಣ ಅಸಹಕಾರ ತೋರಿಸುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಅಧಿಕಾರದಲ್ಲಿದ್ದಾಗ ಸಹಕಾರ ಖಾತೆಯನ್ನೇ ಕೊಟ್ಟಿತ್ತು; ಆಗ ಅಧಿಕಾರ ಅನುಭವಿಸಿ ಈಗ ಪಕ್ಷ ಸಂಘಟನೆ ಮಾಡುವುದಿಲ್ಲ ಎಂದರೆ ಹೇಗೆ?'
ಪಕ್ಷ ಅಧಿಕಾರದಲ್ಲಿ ಇದ್ದಾಗ ಅಧಿಕಾರ ಅನುಭವಿಸಿ ಇಲ್ಲದಿದ್ದಾಗ ಪಕ್ಷ ಸಂಘಟನೆ ಮಾಡುವುದಿಲ್ಲ ಎಂದರೆ ಹೇಗೆ, ಮೈಸೂರಿನಂತಹ ದೊಡ್ಡ ಜಿಲ್ಲೆಯ ಉಸ್ತುವಾರಿ ನೀಡಲಾಗಿತ್ತು. ನಾವೀಗ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲ, ಸಮಸ್ಯೆಯಲ್ಲಿ ಇದ್ದೇವೆ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಶೋಭಾ ನೇಮಕಕ್ಕೆ ಇಲ್ಲ ತಕರಾರು? ಸಂತೋಷ್-ಯಡಿಯೂರಪ್ಪ ಬಣಗಳ ಸರ್ವ ಸಮ್ಮತ ನಾಯಕಿ ಕರಂದ್ಲಾಜೆ!
ಶೋಭಾ ಕರಂದ್ಲಾಜೆ ಅವರ ಕಾರ್ಯವೈಖರಿಯನ್ನು ಬಿಜೆಪಿ ಹೈಕಮಾಂಡ್ ಸಮೀಪದಿಂದ ನೋಡಿದೆ. ಇನ್ನು ಈಗಾಗಲೇ ಹಲವು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಶೋಭಾ, ಕೊಟ್ಟ ಟಾಸ್ಕ್ ಪೂರೈಸುತ್ತಾ ಬಂದಿದ್ದಾರೆ.

ಕೇಂದ್ರದಲ್ಲಿ ಸಚಿವೆಯಾಗಿ ಸಂತೋಷವಾಗಿದ್ದೇನೆ: ಮಾವುತರು, ಕಾವಾಡಿಗರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಶೋಭಾ ಕರಂದ್ಲಾಜೆ
ನವರಾತ್ರಿಯ ಮಹಾನವಮಿ ದಿನ ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರು ಮೈಸೂರು ಅರಮನೆ ಆವರಣದಲ್ಲಿ ಇಂದು ಆಯುಧಪೂಜೆ ದಿನ ಕಾವಾಡಿಗರಿಗೆ ಮತ್ತು ಮಾವುತರಿಗೆ ವಿಶೇಷ ಉಪಹಾರ ಬಡಿಸಿ ವಿಭಿನ್ನ ರೀತಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ದಸರಾ ಆಸುಪಾಸಿನಲ್ಲಿ ಬಿಜೆಪಿಗೆ ನೂತನ ಸಾರಥಿ: ರವಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಲು ವಿರೋಧ; ಮುಂಚೂಣಿಯಲ್ಲಿ ಶೋಭಾ-ವಿಜಯೇಂದ್ರ!
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸಿ,ಟಿ ರವಿ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರ ಹೆಸರು ಕೇಳಿ ಬರುತ್ತಿದೆ. ಲೋಕಸಭೆ ಚುನಾವಣೆಗೆ ಕೇವಲ ಆರು ತಿಂಗಳು ಮಾತ್ರ ಬಾಕಿ ಇದೆ, 14 ತಿಂಗಳ ಹಿಂದೆಯೇ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಅವಧಿ ಮುಗಿದಿದ್ದರೂ ಸ್ಥಾನಗಳ ಪರಿಷ್ಕರಣೆಯಾಗಿಲ್ಲ.

