Shiv Sena

ಅತಂತ್ರ ಸ್ಥಿತಿ ನಿರ್ಮಾಣಕ್ಕೆ ಯತ್ನ; ಬಂಗಾಳ ರಾಜ್ಯಪಾಲರ ಬದಲಿಸಲು ಶಿವಸೇನೆ ಆಗ್ರಹ
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಅತಂತ್ರಸ್ಥಿತಿ ನಿರ್ಮಾಣಕ್ಕೆ ರಾಜ್ಯಪಾಲರಾದ ಜಗದೀಪ್ ಧಂಕರ್ ಅವರು ಯತ್ನಿಸುತ್ತಿದ್ದು, ಕೂಡಲೇ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿವಸೇನೆ ಆಗ್ರಹಿಸಿದೆ.

ಚುನಾವಣೆ ನಂತರ ತೈಲ ಬೆಲೆ ಏರಿಕೆ: ಕೇಂದ್ರ ಸರ್ಕಾರ ವಿರುದ್ಧ 'ಸಾಮ್ನಾ'ದಲ್ಲಿ ಶಿವಸೇನೆ ಟೀಕೆ!
ಕೆಲ ರಾಜ್ಯಗಳಲ್ಲಿ ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆ ನಂತರ ತೈಲ ಬೆಲೆಯನ್ನು ಮತ್ತೆ ಏರಿಸಿರುವ ಕೇಂದ್ರ ಸರ್ಕಾರವನ್ನು ಶಿವಸೇನೆ ಗುರುವಾರ ಟೀಕಿಸಿದೆ.

ಭಾರತದ ಕೋವಿಡ್-19 ವಿರುದ್ಧದ ಹೋರಾಟ ನೆಹರು-ಗಾಂಧಿಗಳು ಸೃಷ್ಟಿಸಿದ ವ್ಯವಸ್ಥೆಯಿಂದ ಸಾಧ್ಯವಾಗಿದೆ: ಶಿವಸೇನೆ
ಕೋವಿಡ್-19 ನಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸುವ ವಿಷಯದಲ್ಲಿ ಮೋದಿ ಸರ್ಕಾರದ ವಿರುದ್ಧ ಶಿವಸೇನೆ ತೀವ್ರ ಟೀಕೆ ಮಾಡಿದೆ.

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ 'ದುರಹಂಕಾರ'ವೂ ಕಾರಣ: ಶಿವಸೇನೆ
ಇತ್ತೀಚಿಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿಗೆ ಬಿಜೆಪಿಯ ದುರಹಂಕಾರವೂ ಒಂದು ಕಾರಣ ಎಂದು ಶಿವಸೇನೆ ಮಂಗಳವಾರ ಹೇಳಿದೆ.

ನನಗೆ ಕೊರೋನಾ ವೈರಸ್ ಕಂಡರೆ ಅದನ್ನು ಫಡ್ನವೀಸ್ ಬಾಯೊಳಗೆ ಹಾಕುತ್ತೇನೆ: ಶಿವಸೇನೆ ಶಾಸಕ
ಮಹಾರಾಷ್ಟ್ರದಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದು ಪೂರೈಕೆ ವಿಷಯದಲ್ಲಿ ವಿವಾದ ಉಂಟಾಗಿರುವ ಬೆನ್ನಲ್ಲೇ ಶಿವಸೇನೆಯ ಶಾಸಕ ಸಂಜಯ್ ಗಾಯಕ್ವಾಡ್ ನೀಡಿರುವ ಹೇಳಿಕೆ ಮತ್ತೊಂದು ವಿವಾದ ಸೃಷ್ಟಿಸಿದೆ.

ಬೆಳಗಾವಿ ಪ್ರವಾಸದಲ್ಲಿ ದೇವೇಂದ್ರ ಫಡ್ನವೀಸ್: ಶಿವಸೇನೆ ವಿರುದ್ಧ ವಾಗ್ದಾಳಿ
ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಕೊನೆ ಕ್ಷಣದಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗುರುವಾರ ಪ್ರಚಾರ ನಡೆಸಿದರು. ಈ ವೇಳೆ ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದರು.

ಶಿವಸೇನೆ ಹಾಗೂ ಬಿಜೆಪಿ ವಿರೋಧಿ ಪಕ್ಷಗಳು ಯುಪಿಎ ಅಡಿ ಒಗ್ಗಟ್ಟಾಗಬೇಕು: ಸಾಮ್ನಾ
ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ "ದುರ್ಬಲ ಮತ್ತು ಅಸಂಘಟಿತವಾಗಿದೆ" ಎಂದಿರುವ ಶಿವಸೇನೆ ಮುಖವಾಣಿ 'ಸಾಮ್ನಾ', ಶಿವಸೇನಾ ಸೇರಿದಂತೆ ಎಲ್ಲಾ ಬಿಜೆಪಿ ವಿರೋಧಿ ಪಕ್ಷಗಳು ಯುಪಿಎ ಬ್ಯಾನರ್ ನಡಿ ಒಗ್ಗಟ್ಟಾಗಬೇಕು ಎಂದು ಸೂಚಿಸಿದೆ.

ವಿರೋಧಿಗಳನ್ನು ಹಣಿಯಲು ಇಡಿ, ಸಿಬಿಐಗಳನ್ನು ಕಾಶ್ಮೀರ ಗಡಿಗೆ ಕಳುಹಿಸಿ: ಕೇಂದ್ರದ ವಿರುದ್ಧ ಶಿವಸೇನೆ ಟೀಕೆ
ವಿರೋಧಿಗಳನ್ನು ಹಿಮ್ಮೆಟ್ಟಿಸಲು ಕೇಂದ್ರವು ಸಿಬಿಐ, ಇಡಿ (ಜಾರಿ ನಿರ್ದೇಶನಾಲಯ)ಗಳನ್ನು ಬಳಸುವುದಾದರೆ ಅವುಗಳನ್ನು ಜಮ್ಮು ಕಾಶ್ಮೀರದ ಗಡಿಗೆ ಕಳಿಸಬೇಕು ಎಂದು ಶಿವಸೇನೆ ಕೇಂದ್ರಕ್ಕೆ ತಿರುಗೇಟು ನೀಡಿದೆ.

'ಕೂಡಲೇ ಹೆಸರು ಬದಲಿಸಿ': ಕರಾಚಿ ಸ್ವೀಟ್ಸ್ ಮಾಲೀಕರಿಗೆ ಶಿವಸೇನೆ ಮುಖಂಡರಿಂದ ಬೆದರಿಕೆ
ಕರಾಚಿ ಸ್ವೀಟ್ಸ್ ಎಂಬ ಹೆಸರನ್ನು ಕೂಡಲೇ ಬದಲಿಸುವಂತೆ ಮುಂಬೈನ ಕರಾಚಿ ಬೇಕರಿ ಮಾಲೀಕರಿಗೆ ಶಿವಸೇನೆ ಮುಖಂಡರು ಬೆದರಿಕೆ ಹಾಕಿರುವ ಘಟನೆ ನಡೆದಿದೆ.

