Sharad Pawar

ಸುಪ್ರಿಯಾ ಸುಳೆಯನ್ನು ಗಾಜಾಕ್ಕೆ ಶರದ್ ಪವಾರ್ ಕಳುಹಿಸಬಹುದು: ಅಸ್ಸಾಂ ಸಿಎಂ ಹೀಗೆ ಹೇಳಿದ್ದು ಏಕೆ?
ಭಯೋತ್ಪಾದಕ ಸಂಘಟನೆ ಹಮಾಸ್ ವಿರುದ್ಧದ ಹೋರಾಟದಲ್ಲಿ ಇಸ್ರೇಲ್‌ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಿಂತಿದ್ದಾರೆ ಎಂದು ಟೀಕಿಸಿರುವ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.

ಚುನಾವಣಾ ಆಯೋಗದ ಮುಂದೆ ಹಾಜರಾಗುತ್ತೇನೆ; ಎನ್‌ಸಿಪಿ ಸಂಸ್ಥಾಪಕರು ಯಾರೆಂಬುದು ಎಲ್ಲರಿಗೂ ತಿಳಿದಿದೆ: ಶರದ್ ಪವಾರ್
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ವಿಭಜನೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ತನ್ನ ನಿಲುವನ್ನು ತಿಳಿಸಲು ಅಕ್ಟೋಬರ್ 6ರಂದು ನವದೆಹಲಿಗೆ ಹೋಗುವುದಾಗಿ ಭಾನುವಾರ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.

ವಿಪಕ್ಷಗಳ ಮೈತ್ರಿಕೂಟದ 3ನೇ ಸಭೆ: ಇಂಡಿಯಾ ಮೈತ್ರಿಕೂಟದಿಂದ ದೂರ ಉಳಿದ ಶಿರೋಮಣಿ ಅಕಾಲಿದಳ, ಬಿಎಸ್‌ಪಿ
ಇಂದಿನಿಂದ ವಾಣಿಜ್ಯ ನಗರಿಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ 28 ರಾಜಕೀಯ ಪಕ್ಷಗಳ 63 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬುಧವಾರ ಹೇಳಿದ್ದಾರೆ. ಕಳೆದ ಬಾರಿ ಸಭೆ ಸೇರಿದಾಗ 26 ಪಕ್ಷಗಳು ಭಾಗವಹಿಸಿದ್ದವು.

ಪಕ್ಷ ತೊರೆದವರ ವಿರುದ್ಧ ಶರದ್ ಪವಾರ್ ಗೆರಿಲ್ಲಾ ಯುದ್ಧ ತಂತ್ರ: ಸಂಜಯ್ ರಾವತ್
ಪಕ್ಷ ತೊರೆದವರ ವಿರುದ್ಧ ಶರದ್ ಪವಾರ್ ಗೆರಿಲ್ಲಾ ಯುದ್ಧ ತಂತ್ರ ಹೆಣೆಯುತ್ತಿದ್ದಾರೆ ಎಂದು ಶಿವಸೇನೆ(ಯುಬಿಟಿ) ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.

ಎನ್‌ಸಿಪಿಯಲ್ಲಿ ಅಜಿತ್‌ಗೆ ಬಾಗಿಲು ಮುಚ್ಚುವ ಸುಳಿವು ನೀಡಿದ ಶರದ್ ಪವಾರ್, ಊಹಾಪೋಹಗಳಿಗೆ ಕಿಡಿ
ಅಜಿತ್ ಪವಾರ್ ಅವರನ್ನು ಎನ್‌ಸಿಪಿ ನಾಯಕ ಎಂದು ಎಂದಿಗೂ ಹೇಳಿಲ್ಲ ಮತ್ತು ಪಕ್ಷ ವಿಭಜನೆಯಾಗಿದೆ ಎಂದು ಶರದ್ ಪವಾರ್ ಉಲ್ಟಾ ಹೊಡೆಯುವ ಮೂಲಕ ಅಜಿತ್ ಪವಾರ್‌ಗೆ ಪಕ್ಷದಲ್ಲಿ ಬಾಗಿಲು ಮುಚ್ಚುವ ಸೂಚನೆ ನೀಡಿದ್ದಾರೆ.

ಎನ್‌ಸಿಪಿಯಲ್ಲಿ ಯಾವುದೇ ಒಡಕಿಲ್ಲ, ಅಜಿತ್ ನಮ್ಮ ನಾಯಕ: ಶರದ್ ಪವಾರ್
ತಮ್ಮ ಪಕ್ಷದಲ್ಲಿ ಯಾವುದೇ ಒಡಕಿಲ್ಲ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಎನ್‌ಸಿಪಿ ನಾಯಕರಾಗಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ಶರದ್ ಪವಾರ್ ಬಿಜೆಪಿ ಜೊತೆ ಕೈಜೋಡಿಸಿ ತಪ್ಪು ಮಾಡುವುದಿಲ್ಲ: ಸಂಜಯ್ ರಾವುತ್
ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ತಮ್ಮ ಅಳಿಯ ಅಜಿತ್ ಪವಾರ್ ಅವರಂತೆ ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಕೈಜೋಡಿಸುವ 'ತಪ್ಪು' ಮಾಡುವುದಿಲ್ಲ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ.

ಕೆಲ ಹಿತೈಷಿಗಳು ನನ್ನ ಮನವೊಲಿಸಲು ಪ್ರಯತ್ನಿಸುತ್ತಿವೆ. ಆದರೆ ಎನ್‌ಸಿಪಿ ಬಿಜೆಪಿ ಜೊತೆ ಹೋಗುವುದಿಲ್ಲ: ಶರದ್ ಪವಾರ್
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಜೊತೆ ನಡೆದ ರಹಸ್ಯ ಸಭೆಗೆ ಸಂಬಂಧಿಸಿದಂತೆ ಹಿರಿಯ ನಟ ಶರದ್ ಪವಾರ್ ಹೇಳಿಕೆ ನೀಡಿದ್ದಾರೆ. ಇದು ರಹಸ್ಯ ಸಭೆಯಲ್ಲ ಎಂದು ಪವಾರ್ ಸ್ಪಷ್ಟಪಡಿಸಿದ್ದಾರೆ. ಸೋದರಳಿಯನನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಕುಟುಂಬದ ಹಿರಿಯ ಸದಸ್ಯರು ಕುಟುಂಬದ ಇತರ ಸದಸ್ಯರನ್ನು ಭೇಟಿಯಾಗಲು ಬಯಸಿದರೆ, ಅದರಲ್ಲಿ ಸಮಸ್ಯೆ ಏನು ಎಂದು ಪ್ರಶ್ನಿಸಿದರು.

ಕರ್ನಾಟಕ ಫಲಿತಾಂಶ 2024ರ ಲೋಕಸಭಾ ಚುನಾವಣೆಯ ಚಿತ್ರಣ- ಶರದ್ ಪವಾರ್
ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ 2024ರ ಲೋಕಸಭಾ ಚುನಾವಣೆಯ ಚಿತ್ರಣವನ್ನು ಪ್ರಸ್ತುತಪಡಿಸಿದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

