Sharad Pawar

NCP ಪಕ್ಷವನ್ನು ಅದರ ಸಂಸ್ಥಾಪಕರಿಂದ ಚುನಾವಣಾ ಆಯೋಗ ಕಸಿದುಕೊಂಡಿತು: ಶರದ್ ಪವಾರ್
ಅಜಿತ್ ಪವಾರ್ ನೇತೃತ್ವದ ಗುಂಪಿಗೆ ಎನ್ ಸಿಪಿ ಹೆಸರು ಮತ್ತು ಚಿಹ್ನೆಯನ್ನು ಹಂಚಿಕೆ ಮಾಡುವ ಚುನಾವಣಾ ಆಯೋಗದ ನಿರ್ಧಾರ 'ಆಶ್ಚರ್ಯಕರವಾಗಿದೆ ಎಂದಿರುವ ಹಿರಿಯ ರಾಜಕಾರಣಿ ಶರದ್ ಪವಾರ್ , ಚುನಾವಣಾ ಸಂಸ್ಥೆಯು ಪಕ್ಷವನ್ನು ಅದರ ಸಂಸ್ಥಾಪಕರ ಕೈಯಿಂದ 'ಕಿತ್ತು' ಇತರರಿಗೆ ನೀಡಿದೆ ಎಂದು ಹೇಳಿದ್ದಾರೆ.

ಶರದ್ ಪವಾರ್ ಬಣಕ್ಕೆ NCP-SP ಹೊಸ ಹೆಸರು: ಚುನಾವಣಾ ಆಯೋಗ
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಹೆಸರಿಗಾಗಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ನಡುವಿನ ಹಗ್ಗಜಗ್ಗಾಟಕ್ಕೆ ಕೋರ್ಟ್ ಬ್ರೇಕ್ ಹಾಕಿದ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗ ಶರದ್ ಪವಾರ್ ಬಣದ ಪಕ್ಷಕ್ಕೆ ಹೊಸ ಹೆಸರು ನೀಡಿದೆ.

ಅಜಿತ್ ಪವಾರ್ ಬಣಕ್ಕೆ ಎನ್‌ಸಿಪಿ ಹೆಸರು ಮತ್ತು ಚಿಹ್ನೆ: ಶರದ್ ಪವಾರ್ ಗೆ ತೀವ್ರ ಹಿನ್ನಡೆ!
ಮಹಾರಾಷ್ಟ್ರದ ರಾಜಕೀಯದಲ್ಲಿ ದೊಡ್ಡ ಸಂಚಲನ ಉಂಟಾಗಿದ್ದು, ಚುನಾವಣಾ ಆಯೋಗವು ಅಜಿತ್ ಅವರ ಬಣ ನಿಜವಾದ ಎನ್‌ಸಿಪಿ ಎಂದು ಘೋಷಿಸಿದೆ.

ರಾಮ ಮಂದಿರ ನಿರ್ಮಾಣ ಪೂರ್ಣಗೊಂಡ ನಂತರ ಅಯೋಧ್ಯೆಗೆ ಹೋಗುತ್ತೇನೆ: ಆಹ್ವಾನ ತಿರಸ್ಕರಿಸಿದ ಶರದ್ ಪವಾರ್
ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮನಿಗೆ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಬುಧವಾರ ಹೇಳಿದ್ದಾರೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮೊಮ್ಮಗನ ಬಾರಾಮತಿ ಕಂಪನಿ ಮೇಲೆ ಇಡಿ ದಾಳಿ
ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಮೊಮ್ಮಗ, ಶಾಸಕ ರೋಹಿತ್ ಪವಾರ್...

ಬಿಜೆಪಿ ಜತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ: ಅಜಿತ್ ಪವಾರ್ ಹೇಳಿಕೆಗೆ ಶರದ್ ಪವಾರ್ ಸ್ಪಷ್ಟನೆ
ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ. ಈ ವಿಚಾರದಲ್ಲಿ ನಿಲುವು ಯಾವಾಗಲೂ ಸ್ಪಷ್ಟವಾಗಿರುತ್ತದೆ ಮತ್ತು ಇದಕ್ಕೆ ವಿರುದ್ಧವಾಗಿ ಯಾವುದೇ ಸಲಹೆ ಬಂದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ನ್ಯಾಶನಲಿಸ್ಟ್...

ಶರದ್ ಪವಾರ್ ರಾಜಕೀಯ ಜೀವನ ಅಂತ್ಯಗೊಳಿಸಲು ಬಿಜೆಪಿ ಅಜಿತ್ ಪವಾರ್‌ಗೆ 'ಸುಪಾರಿ' ನೀಡಿದೆ: ಅನಿಲ್ ದೇಶಮುಖ್
ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರ ರಾಜಕೀಯ ಜೀವನವನ್ನು ಅಂತ್ಯಗೊಳಿಸಲು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಬಿಜೆಪಿ ಸುಪಾರಿ (ಗುತ್ತಿಗೆ) ನೀಡಿದೆ ಎಂದು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ.

ಶರದ್ ಪವಾರ್ ಭೇಟಿಯಾದ 'ಅತೃಪ್ತ' ಅಜಿತ್ ಪವಾರ್; ಬಳಿಕ ಅಮಿತ್ ಶಾ ಭೇಟಿಗೆ ದೆಹಲಿಗೆ ಹಾರಿದ ಮಹಾ ಡಿಸಿಎಂ!
ಮಹಾರಾಷ್ಟ್ರದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಶುಕ್ರವಾರ ಪುಣೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದು, ತಕ್ಷಣವೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗಾಗಿ ದೆಹಲಿಗೆ...

ವಿಧಾನಸಭೆ ಚುನಾವಣೆಗೆ ಪ್ರತಿಪಕ್ಷಗಳಲ್ಲಿ 'ಭಿನ್ನಾಭಿಪ್ರಾಯ' ಇದೆ, ಆದ್ರೆ ಲೋಕಸಭೆಗೆ ಒಗ್ಗಟ್ಟಾಗಿದ್ದೇವೆ: ಶರದ್ ಪವಾರ್
ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಹೋರಾಡಬೇಕು ಎಂಬ ಭಾವನೆ ಇದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು...

