Sensex

ಪ್ರಧಾನಿ ಮೋದಿ ಆರ್ಥಿಕ ಪರಿಹಾರ ಘೋಷಣೆ: ಸೆನ್ಸೆಕ್ಸ್, ನಿಫ್ಟಿ ಶೇ.4ರಷ್ಟು ಇಂದು ಏರಿಕೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ನಂತರ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ಬುಧವಾರ ಬೆಳಗಿನ ವಹಿವಾಟು ಆರಂಭಕ್ಕೆ ಏರಿಕೆ ಕಂಡುಬಂದಿದೆ.

ಕೊರೋನಾ ಆರ್ಭಟದ ನಡುವೆಯೇ 2 ಸಾವಿರ ಅಂಕ ಕುಸಿತ ಕಂಡ ಸೆನ್ಸೆಕ್ಸ್!
ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ಇತ್ತ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಬರೊಬ್ಬರಿ 2 ಸಾವಿರ ಅಂಕಗಳಷ್ಟು ಕುಸಿತ ಕಂಡಿದೆ.

ಕೊರೋನಾ ಲಾಕ್ ಡೌನ್; ಕಚ್ಚಾ ತೈಲ ಬೆಲೆ ಇಳಿಕೆ: ಸೆನ್ಸೆಕ್ಸ್ 1,500 ಅಂಕ ಕುಸಿತ
ದೇಶಾದ್ಯಂತ ಲಾಕ್ ಡೌನ್ ಮೂರನೇ ಹಂತಕ್ಕೆ ಕಾಲಿಟ್ಟು 40 ದಿನಗಳ ಬಳಿಕ ಭಾಗಶಃ ಆರ್ಥಿಕ ಚಟುವಟಿಕೆ ಮತ್ತೆ ಗರಿಗೆದರಿದರೂ ಕೂಡ ಮುಂಬೈ ಷೇರು ಮಾರುಕಟ್ಟೆಯ ಸೋಮವಾರ ಬೆಳಗಿನ ವಹಿವಾಟು ಆರಂಭಕ್ಕೆ ಸೆನ್ಸೆಕ್ಸ್ 1,500 ಪಾಯಿಂಟ್ ಗಳಷ್ಟು ಕುಸಿದಿದೆ. ಹೆಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ಟಿಸಿಎಸ್ ಮತ್ತು ಇನ್ಫೊಸಿಸ್ ಕಂಪೆನಿಯ ಷೇರುಗಳಲ್ಲಿ ಕುಸಿತ ಕಂಡುಬಂದಿದೆ.

ಜಿಯೋ ಜೊತೆ ಕೈ ಜೋಡಿಸಿದ ಫೇಸ್ ಬುಕ್: ಪುಟಿದೆದ್ದ ಷೇರುಮಾರುಕಟ್ಟೆ
ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ರಿಲಾಯನ್ಸ್ ಇಂಡಸ್ಟ್ರೀಸ್ ಜೊತೆ ಕೈ ಜೋಡಿಸಿದ ಬೆಳವಣಿಗೆ ಬೆನ್ನಲ್ಲೇ ಷೇರುಮಾರುಕಟ್ಟೆ ಪುಟಿದೆದ್ದಿದೆ.

ಸೆನ್ಸೆಕ್ಸ್ 1203.18 ಅಂಕ, ನಿಫ್ಟಿ 343 ಅಂಕ ಪತನ
ಏಷ್ಯಾ ಮಾರುಕಟ್ಟೆಗಳು ಕ್ಷೀಣಿಸಿದ್ದರಿಂದ ಹಾಗೂ ಪ್ರಮುಖ ವಲಯಗಳ ಷೇರುಗಳು ಭಾರೀ ಮಾರಾಟ ಒತ್ತಡಕ್ಕೆ ಸಿಲುಕಿದ್ದರಿಂದ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸೂಚ್ಯಂಕ, ಸೆನ್ಸೆಕ್ಸ್ ಬುಧವಾರ 1,203.18 ಅಂಕ ಇಳಿಕೆ ಕಂಡು 28,265.31 ಕ್ಕೆ ತಲುಪಿದೆ.

ಹಣಕಾಸು ಸಚಿವರ ಪರಿಹಾರ ಪ್ಯಾಕೇಜ್ ಹಿನ್ನೆಲೆ: 1410 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್
ಕೊರೋನಾ ವೈರಸ್ ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ತಡೆಯಲು ಹಣಕಾಸು ಸಚಿವರು ಪರಿಹಾರ ಪ್ಯಾಕೇಜ್ ಘೋಷಿಸಿದ ಬೆನ್ನಲ್ಲೇ ಮುಂಬೈ ಷೇರು ಮಾರುಕಟ್ಟೆಯಲ್ಲಿ 1410.99 ಅಂಕಗಳ ಏರಿಕೆ ಕಂಡಿದ್ದು, ದಿನದ ಅಂತ್ಯಕ್ಕೆ 29,946.77 ರಷ್ಟಿತ್ತು. ನಿಫ್ಟಿ ಕೂಡ 323.60 ಅಂಕಗಳಷ್ಟು ಹೆಚ್ಚಳ ಕಂಡು 8,641.45ರಷ್ಟಿತ್ತು.

ಕೊರೋನಾ ಮಹಾಘಾತ: ಸೆನ್ಸೆಕ್ಸ್ 4000 ಅಂಕ ಕುಸಿತ, ಹೂಡಿಕೆದಾರರಿಗೆ 14 ಲಕ್ಷ ಕೋಟಿ ರೂ. ನಷ್ಟ!
ಇಡೀ ವಿಶ್ವವನ್ನು ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಗೆ ಭಾರತೀಯ ಷೇರುಮಾರುಕಟ್ಟೆ ಸತತವಾಗಿ ಕುಸಿಯುತ್ತಿದ್ದು ಒಂದೇ ದಿನ ಹೂಡಿಕೆದಾರರಿಗೆ ಬರೊಬ್ಬರಿ 14 ಲಕ್ಷ ಕೋಟಿ ರೂ. ನಷ್ಟವಾಗಿದೆ.

ಕೊರೊನಾ ಭೀತಿಯಿದ್ದರೂ ಷೇರು ಮಾರುಕಟ್ಟೆ ಮುಚ್ಚಲು ಸಾಧ್ಯವಿಲ್ಲವೇಕೆ? ಇಲ್ಲಿವೆ ಮೂರು ಕಾರಣಗಳು
ಭಾರತೀಯ ಇಕ್ವಿಟಿ ಮಾರುಕಟ್ಟೆಗಳನ್ನು ಸೋಮವಾರ 45 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಯಿತು. ಎಸ್ ಆಂಡ್ ಪಿ ಬಿಎಸ್ಇ ಸೆನ್ಸೆಕ್ಸ್ ಶೇಕಡಾ 10 ರಷ್ಟು ಇಳಿಕೆಯಾಗಿದೆ.

ಕೊರೋನಾ ವೈರಸ್ ಭೀತಿ: ಸೆನ್ಸೆಕ್ಸ್ 2,713 ಅಂಕ ಕುಸಿತ, ಹೂಡಿಕೆದಾರರಿಗೆ 7.50 ಲಕ್ಷ ಕೋಟಿ ರೂ ನಷ್ಟ!
ಇಡೀ ವಿಶ್ವವನ್ನು ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಗೆ ಸತತ 5ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಬಲಿಯಾಗಿದ್ದು, ಒಂದೇ ದಿನ ಹೂಡಿಕೆದಾರರಿಗೆ ಬರೊಬ್ಬರಿ 7.50 ಲಕ್ಷ ಕೋಟಿ ರೂ ನಷ್ಟವಾಗಿದೆ.

