schools

ನಾಳೆ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಬಗ್ಗೆ ಚರ್ಚೆ, ರಾಜ್ಯಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿ ಪ್ರಕಟ: ಸಿಎಂ ಬೊಮ್ಮಾಯಿ
ಕೋವಿಡ್-19 ಹೆಚ್ಚುತ್ತಿರುವ ಮಧ್ಯೆ ರಾಜ್ಯದಲ್ಲಿನ ಸ್ಥಿತಿಗತಿ ಬಗ್ಗೆ ಇಂದು ಬುಧವಾರ ನಡೆಯುವ ಸಭೆಯಲ್ಲಿ ಅನೌಪಚಾರಿಕವಾಗಿ ಮಾಹಿತಿ ಪಡೆದುಕೊಳ್ಳುತ್ತೇನೆ, ಡಿಸೆಂಬರ್-ಜನವರಿ ತಿಂಗಳಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಲ್, ಥಿಯೇಟರ್ ಗಳಲ್ಲಿ ಶೇ.50ರಷ್ಟು ಮಿತಿಗೆ ಚಿಂತನೆ, ಅಗತ್ಯ ಬಿದ್ದರೆ ಭೌತಿಕ ತರಗತಿ ಸ್ಥಗಿತ-ಸರ್ಕಾರ, ಮಂತ್ರಿ ಮಾಲ್ ಗೆ ಬಿಬಿಎಂಪಿ ಬೀಗ
ಕೊರೋನಾ ಹೆಚ್ಚಳ ಭೀತಿ ಉಂಟಾಗಿದ್ದು, ಮಾಲ್, ಥಿಯೇಟರ್ ಗಳಲಿ ಶೇ.50 ರಷ್ಟು ಶೇ.50ರಷ್ಟು ಮೀತಿ ಜಾರಿಯ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ. ಮಕ್ಕಳ ಜೀವದ ಜೊತೆ ನಾವು ಚೆಲ್ಲಾಟವಾಡುವುದಿಲ್ಲ, ಕಾಳಜಿ ವ

ಅನಿವಾರ್ಯ ಪರಿಸ್ಥಿತಿ ಉಂಟಾದರೆ ಶಾಲೆ ಬಂದ್, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವುದಿಲ್ಲ: ಶಿಕ್ಷಣ ಸಚಿವ ಬಿ ಸಿ ನಾಗೇಶ್
ರಾಜ್ಯದ ಕೆಲವು ಶಾಲಾ-ಕಾಲೇಜುಗಳಲ್ಲಿ ಅದರಲ್ಲೂ ವಸತಿ ಶಾಲೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಆತಂಕಗೊಳ್ಳುವುದು ಸಹಜ. ಆದರೆ ಮಕ್ಕಳ ಜೀವದ ಜೊತೆ ನಾವು ಚೆಲ್ಲಾಟವಾಡುವುದಿಲ್ಲ, ಕಾಳಜಿ ವಹಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅಭಯ ನೀಡಿದ್ದಾರೆ.

ಕೊಡಗು: ಒಂದೇ ಶಿಕ್ಷಣ ಸಂಸ್ಥೆಯ 11 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು
ರಾಜ್ಯದ ಒಂದೊಂದೇ ಶಿಕ್ಷಣ ಸಂಸ್ಥೆಗಳು ಕೋವಿಡ್ ಕ್ಲಸ್ಟರ್ ಪಟ್ಟಿಗೆ ಸೇರುತ್ತಿರುವುದು ಮುಂದುವರೆಯುತ್ತಿದ್ದು, ಮೈಸೂರು ಬೆನ್ನಲ್ಲೇ ಇದೀಗ ಕೊಡಗಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ 11 ವಿದ್ಯಾರ್ಥಿಗಳು ಕೋವಿಡ್ ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ.

ಓಮಿಕ್ರಾನ್ ಆತಂಕದ ನಡುವೆಯೇ ಬೆಂಗಳೂರು ಮಕ್ಕಳಲ್ಲಿ 'ಸ್ಟಮಕ್ ಫ್ಲೂ' ಹೆಚ್ಚಳ!
ಶಾಲೆಗಳು ಪುನರಾರಂಭಗೊಂಡ ಕೆಲವು ತಿಂಗಳುಗಳಲ್ಲೇ ನಗರದ ಮಕ್ಕಳಲ್ಲಿ 'ಸ್ಟಮಕ್ ಫ್ಲೂ' (ಹೊಟ್ಟೆ ಜ್ವರ) ಹೆಚ್ಚಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ.

ಶಾಲಾ -ಕಾಲೇಜು ಮುಚ್ಚುವ ನಿರ್ಧಾರ ಸದ್ಯಕ್ಕಿಲ್ಲ : ಸಚಿವ ಬಿ.ಸಿ ನಾಗೇಶ್
ಕೊರೋನಾ ಹೊಸ ತಳಿಯ ಕಾರಣದಿಂದ ರಾಜ್ಯದಲ್ಲಿ ಶಾಲಾ -ಕಾಲೇಜು ಮುಚ್ಚುವ ನಿರ್ಧಾರ ಮಾಡಿಲ್ಲ ಪೋಷಕರು ಈ ಬಗ್ಗೆ ಆತಂಕ ಪಡಬೇಕಿಲ್ಲ ಎಂದು ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಹೇಳಿದ್ದಾರೆ .

ವಾರದೊಳಗೆ ಮಕ್ಕಳಿಗೆ ಟಿಸಿ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ: ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ
ಕೋವಿಡ್ ಹಾಗೂ ಲಾಕ್ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತಮ್ಮ ಮಕ್ಕಳನ್ನು ಸರ್ಕಾರಿ, ಅನುದಾನಿಕ ಶಾಲೆಗಳಿಗೆ ಸೇರಿಸಿರುವ ಮಕ್ಕಳ ಪೋಷಕರಿಗೆ ಶೈಕ್ಷಣಿಕ ಶುಲ್ಕ ಬಾಕಿ ಕಾರಣಕ್ಕಾಗಿ ವರ್ಗಾವಣೆ ಪ್ರಮಾಣ್ ಪತ್ರ (ಟಿಸಿ) ನೀಡದೆ ಸತಾಯಿಸುತ್ತಿರುವ ಅನುದಾನರಹಿತ ಖಾಸಗಿ ಶಾಲೆಗಳಿಗೆ ಟಿಸಿ ನೀಡಲು ಸರ್ಕಾರ ಒಂದು ವಾರ ಗಡುವು ನೀಡಿದೆ.

ವರುಣನ ಆರ್ಭಟಕ್ಕೆ ರಾಜ್ಯ ತತ್ತರ: ನೀರಿನಲ್ಲಿ ಕೊಚ್ಚಿ ಹೋದ ಮಹಿಳೆ, ಹಲವೆಡೆ ಶಾಲಾ ಕಾಲೇಜುಗಳಿಗೆ 2 ದಿನ ರಜೆ ಘೋಷಣೆ
ವರುಣನ ಆರ್ಭಟಕ್ಕೆ ರಾಜ್ಯ ತತ್ತರಿಸಿದೆ. ವಿವಿಧೆಡೆ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ತೀವ್ರ ತೊಂದರೆ ಎದುರಿಸುವಂತಾಗಿದೆ.

ಶಾಲೆಗಳು ಕೋವಿಡ್ ಕ್ಲಸ್ಟರ್ ಹೊಂದಿರುತ್ತವೆ, ಆದರೆ ಆತಂಕಬೇಡ: ತಜ್ಞರ ಸಲಹೆ
ರಾಜ್ಯಾದ್ಯಂತ ಇದೀಗ ಎಲ್ಲಾ ಶಾಲೆಗಳು ಪುನರಾರಂಭದೊಂದಿಗೆ ಕೋವಿಡ್ ಬಗ್ಗೆ ಪೋಷಕರಲ್ಲಿ ಸ್ವಲ್ಪ ಆತಂಕವಿದ್ದು, ಆರೋಗ್ಯಾಧಿಕಾರಿಗಳು ಜಾಗರೂಕರಾಗಿದ್ದಾರೆ. ಶಾಲೆಗಳಲ್ಲಿ ಸೋಂಕಿನ ಕ್ಲಸ್ಟರ್ ಖಂಡಿತವಾಗಿಯೂ ಇರುತ್ತವೆ, ಆದರೆ ಜನರು ಭಯಪಡಬಾರದು ಎಂದು ತಜ್ಞರು ಹೇಳಿದ್ದಾರೆ.

