ಶಾಲೆಗಳು ಕೋವಿಡ್ ಕ್ಲಸ್ಟರ್ ಹೊಂದಿರುತ್ತವೆ, ಆದರೆ ಆತಂಕಬೇಡ: ತಜ್ಞರ ಸಲಹೆ
ರಾಜ್ಯಾದ್ಯಂತ ಇದೀಗ ಎಲ್ಲಾ ಶಾಲೆಗಳು ಪುನರಾರಂಭದೊಂದಿಗೆ ಕೋವಿಡ್ ಬಗ್ಗೆ ಪೋಷಕರಲ್ಲಿ ಸ್ವಲ್ಪ ಆತಂಕವಿದ್ದು, ಆರೋಗ್ಯಾಧಿಕಾರಿಗಳು ಜಾಗರೂಕರಾಗಿದ್ದಾರೆ. ಶಾಲೆಗಳಲ್ಲಿ ಸೋಂಕಿನ ಕ್ಲಸ್ಟರ್ ಖಂಡಿತವಾಗಿಯೂ ಇರುತ್ತವೆ, ಆದರೆ ಜನರು ಭಯಪಡಬಾರದು ಎಂದು ತಜ್ಞರು ಹೇಳಿದ್ದಾರೆ.

ಬೆಂಗಳೂರು: ರಾಜ್ಯಾದ್ಯಂತ ಇದೀಗ ಎಲ್ಲಾ ಶಾಲೆಗಳು ಪುನರಾರಂಭದೊಂದಿಗೆ ಕೋವಿಡ್ ಬಗ್ಗೆ ಪೋಷಕರಲ್ಲಿ ಸ್ವಲ್ಪ ಆತಂಕವಿದ್ದು, ಆರೋಗ್ಯಾಧಿಕಾರಿಗಳು ಜಾಗರೂಕರಾಗಿದ್ದಾರೆ. ಶಾಲೆಗಳಲ್ಲಿ ಸೋಂಕಿನ ಕ್ಲಸ್ಟರ್ ಖಂಡಿತವಾಗಿಯೂ ಇರುತ್ತವೆ, ಆದರೆ ಜನರು ಭಯಪಡಬಾರದು ಎಂದು ತಜ್ಞರು ಹೇಳಿದ್ದಾರೆ. ಬದಲಿಗೆ ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆಯೇ ಅಥವಾ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆಯೇ ಎಂಬುದನ್ನು ಆರೋಗ್ಯ ಅಧಿಕಾರಿಗಳು ಪರಿಶೀಲಿಸಬೇಕು ಎಂದಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಕ್ಲಸ್ಟರ್‌ಗಳು ಸಂಭವಿಸುವ ನಿರೀಕ್ಷೆಯಿದೆ, ಆದರೆ ಪ್ರತಿ ಕ್ಲಸ್ಟರ್ ನ್ನು ಅಧ್ಯಯನ ಮಾಡಬೇಕಾದದ್ದು ಪ್ರಮುಖವಾಗಿದೆ. ಈ ಮಕ್ಕಳು ಅಸ್ವಸ್ಥರಾಗಿದ್ದಾರೆಯೇ ಎಂಬುದನ್ನು ಆರೋಗ್ಯಾಧಿಕಾರಿಗಳು ಪತ್ತೆ ಮಾಡಬೇಕಾಗುತ್ತದೆ.
ಈ ಮಕ್ಕಳು ಅಸ್ವಸ್ಥರಾಗಿದ್ದಾರೆಯೇ ಎಂಬುದನ್ನು ಆರೋಗ್ಯ ಅಧಿಕಾರಿಗಳು ಪತ್ತೆ ಹಚ್ಚಬೇಕು. ಅನಾರೋಗ್ಯಕ್ಕೆ ಒಳಗಾಗುವುದು ಮತ್ತು ಧನಾತ್ಮಕ ಪರೀಕ್ಷೆ ಒಂದೇ ಅಲ್ಲ. ಮಕ್ಕಳು ಸೋಂಕನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಈ ಡೇಟಾದಿಂದ ಕೊಮೊರ್ಬಿಡಿಟಿ ಹೊಂದಿರುವ ಮಕ್ಕಳನ್ನು ಗುರುತಿಸಲು ಮತ್ತು ಅವರಿಗೆ ಲಸಿಕೆ ನೀಡುವ ಬಗ್ಗೆ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ ಎಂದು ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ಸೂಕ್ಷ್ಮ ಜೀವಶಾಸ್ತ್ರಜ್ಞ ಮತ್ತು ವೈರಾಲಜಿಸ್ಟ್ ಡಾ.ಗಗನ್‌ದೀಪ್ ಕಾಂಗ್ ಹೇಳಿದರು.
ಸ್ವಾಗತ ಕೋರುವಂತಹ ಕಾರ್ಯಕ್ರಮಗಳನ್ನು ಶಾಲೆಗಳು ನಡೆಸಬಾರದು ಎಂದು ಹೇಳುವ ತಜ್ಞರು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ಸ್ ಬಳಕೆಯನ್ನು ಮರೆಯಬಾರದು, ಯಾವುದೇ ರೀತಿಯ ಸಣ್ಣ ದಟ್ಟಣೆ ಕೋವಿಡ್ ನಿಯಮದ ಉಲ್ಲಂಘನೆಯಾಗುತ್ತದೆ. ಇದು ಆಗಲೇಬಾರದು ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಹಾಗೂ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಸಿ.ಎನ್. ಮಂಜುನಾಥ್ ಹೇಳುತ್ತಾರೆ.
ಬಹುತೇಕ ಖಾಸಗಿ ಶಾಲೆಗಳು ನವೆಂಬರ್ 8 ರಿಂದ ಶಾಲೆಗಳ ಆಪ್ ಲೈನ್ ತರಗತಿ ಪುನರಾರಂಭ ಘೋಷಿಸಲಿದ್ದಾರೆ. ಶಾಲಾ ಅಧಿಕಾರಿಗಳು ಇನ್ನೂ ಜಾಗರೂಕರಾಗಿದ್ದಾರೆ ಮತ್ತು ಕಿರಿಯ ಮಕ್ಕಳನ್ನು ಅರ್ಧ ದಿನ ಮತ್ತು ವಾರದಲ್ಲಿ ಎರಡು ದಿನ ಮಾತ್ರ ತರಗತಿಗಳಿಗೆ ಹಾಜರಾಗುವಂತೆ ಕೇಳಿಕೊಂಡಿದ್ದಾರೆ.ಇತ್ತೀಚಿಗೆ ಬಸವನಗುಡಿಯ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಯೊಬ್ಬರಿಗೆ ಕೋವಿಡ್ ಬಂದಿದ್ದು, ಅದು ಇತರ ವಿದ್ಯಾರ್ಥಿಗಳು ಹರಡಿದೆ. ಹೀಗೆ ಆಗದಂತೆ ಕೋವಿಡ್- ನಿಯಮ ಉಲ್ಲಂಘನೆಯಾಗದಂತೆ ಶಾಲೆಗಳು ಎಲ್ಲಾ ಪೋಷರಿಗೆ ಹೇಳಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ, ತಮ್ಮ ವಾರ್ಡ್‌ಗಳಲ್ಲಿರುವ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರಲ್ಲಿ ವಿಶ್ವಾಸವನ್ನು ಸರ್ಕಾರ ತುಂಬಬೇಕು. ಸಾಂಕ್ರಾಮಿಕ ಸಮಯದಲ್ಲಿ ಮಕ್ಕಳು ಅನುಭವಿಸಿದ ಯಾವುದೇ ನಷ್ಟವನ್ನು ನಿವಾರಿಸಬೇಕಾಗಿದೆ. ಪ್ರಿ-ಸ್ಕೂಲ್‌ನಲ್ಲಿರುವ ಮಕ್ಕಳನ್ನು ವಿಶೇಷವಾಗಿ ನೋಡಬೇಕು, ಅವರು ಆಡಬೇಕು ಮತ್ತು ಕಲಿಯಬೇಕು ಅದರ ಜೊತೆಗೆ ರಾಜ್ಯದ ಶಿಕ್ಷಣಕ್ಕೂ ಕೊಡುಗೆ ನೀಡಬೇಕು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ಗಳ (ಕೆಎಎಂಎಸ್) ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


