school

ಉಡುಪಿ: ಶಾಲಾ ಕ್ರೀಡಾಕೂಟದಲ್ಲಿ ಆಜಾನ್'ಗೆ ನೃತ್ಯ ಮಾಡಿದ ವಿದ್ಯಾರ್ಥಿಗಳು, ವ್ಯಾಪಕ ಆಕ್ರೋಶ, ಪ್ರತಿಭಟನೆ
ಶಾಲಾ ಕ್ರೀಡಾಕೂಟದ ಸಮಯದಲ್ಲಿ ಮುಸ್ಲಿಮರ ಆಜಾನ್ (ಅಲ್ಲಾಹು ಅಕ್ಬರ್)ಗೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದು, ಈ ಬೆಳವಣಿಗೆಗೆ ಹಿಂದೂಪರ ಸಂಘಟನೆಗಳಿಂದ ತೀವ್ರ ಆಕ್ರೋಶಗಳು ವ್ಯಕ್ತವಾಗಿವೆ. ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಇದೀಗ ಕ್ಷಮೆಯಾಚಿಸಿದೆ.

ಕೊರೋನಾ ಎಫೆಕ್ಟ್: ಸಿಎಂ ಬೊಮ್ಮಾಯಿ ತವರು ಜಿಲ್ಲೆಯಲ್ಲಿ 920 ಮಕ್ಕಳು ಶಾಲೆಯಿಂದ ವಿಮುಖ!
ಶಿಕ್ಷಣ ವಂಚಿತರಿಗೆ ಶಿಕ್ಷಣ ನೀಡುವ ಸರ್ಕಾರದ ಪ್ರಯತ್ನಕ್ಕೆ ಭಾರಿ ಹಿನ್ನೆಡೆಯುಂಟಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಕ್ಷೇತ್ರ ಹಾವೇರಿಯಲ್ಲಿ 6 ರಿಂದ 16 ವರ್ಷದೊಳಗಿನ 920 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಂಕ್ರಾಮಿಕ ರೋಗದ ನಂತರ ಶಾಲೆ ತೊರೆದಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಬಾಲಕಿ ಸಾವು, ತನಿಖೆ ಪ್ರಗತಿಯಲ್ಲಿ
ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ 9 ವರ್ಷದ ಬಾಲಕಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ.

ದೇಶದ ಏಳಿಗೆಗೆ ಗುರು ಶಿಷ್ಯ ಪರಂಪರೆಯು ಅತ್ಯಂತ ಅವಶ್ಯಕ
ಗುರುವಿನೋಳ್ನುಡಿಯಂತೆ ಶ್ರೇಯಸ್ಸು ಬಾಳ್ಗೆ" ಎಂದು ಕುವೆಂಪು ಹೇಳಿದ್ದಾರೆ. ಗುರು ಶಿಷ್ಯ ಪರಂಪರೆ ಭಾರತದಲ್ಲಷ್ಟೇ ಅಲ್ಲ ವಿಶ್ವದಾದ್ಯಂತ ಜಗತ್ತಿಗೆ ಶ್ರೇಷ್ಠ ಕೊಡುಗೆಗಳನ್ನು...

ಬೆಂಗಳೂರು: ಅತಿಕ್ರಮ ಪ್ರವೇಶ, ಶಾಲೆ ಗೋಡೆ ಧ್ವಂಸಗೊಳಿಸಿದ್ದ 9 ಮಂದಿಯನ್ನು ಬಂಧನ
ಕ್ವೀನ್ಸ್ ರಸ್ತೆಯಲ್ಲಿರುವ ಕಮಲಾಬಾಯಿ ಶಾಲೆಯ ಕಾಂಪೌಂಡ್ ಅನ್ನು ಅತಿಕ್ರಮಿಸಿ, ಶಾಲಾ ಗೋಡೆಯನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಮಹಿಳೆ ಸೇರಿದಂತೆ 9 ಮಂದಿಯನ್ನು ಹೈಗ್ರೌಂಡ್ಸ್ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಶಾಲೆಗಳಲ್ಲಿ ಉತ್ತೀರ್ಣತೆ ಶೇಕಡಾವಾರು ಫಲಿತಾಂಶ ಸುಧಾರಿಸಿ: ಶಿಕ್ಷಕರಿಗೆ ಬಿಬಿಎಂಪಿ ಸೂಚನೆ
ಕಳೆದ ಕೆಲವು ವರ್ಷಗಳಿಂದ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಕಳಪೆ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಶಿಕ್ಷಣ ಇಲಾಖೆಯು ಶಿಕ್ಷಕರಿಗೆ ತಮ್ಮ ಸಂಸ್ಥೆಗಳಲ್ಲಿ ಉತ್ತಮ ಶೇಕಡಾವಾರು ಫಲಿತಾಂಶವನ್ನು ಖಚಿತಪಡಿಸಿಕೊಳ್ಳುವಂತೆ ಸೂಚನೆ ನೀಡಿದೆ.

ಎಚ್ಚರ!: ಚಲಿಸುತ್ತಿದ್ದ ಲಿಫ್ಟ್ ಬಾಗಿಲುಗಳ ನಡುವೆ ಸಿಲುಕಿ ಮುಂಬೈನಲ್ಲಿ 26 ವರ್ಷದ ಶಿಕ್ಷಕಿ ಸಾವು
ಮುಂಬೈನ ಶಾಲೆವೊಂದರ ಲಿಫ್ಟ್ ಬಾಗಿಲಿನ ನಡುವೆ ಸಿಲುಕಿ 26 ವರ್ಷದ ಶಿಕ್ಷಕಿ ಮೃತಪಟ್ಟಿದ್ದಾರೆ. ಉತ್ತರ ಮುಂಬೈನ ಉಪನಗರವಾದ ಮಲಾಡ್‌ನ ಚಿಂಚೋಲಿ ಬಂದರ್‌ನಲ್ಲಿರುವ ಸೇಂಟ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್‌ನಲ್ಲಿ ಶುಕ್ರವಾರ ಈ ಘಟನೆ ವರದಿಯಾಗಿದೆ.

ರಾಯಚೂರು: ಶೌಚಕ್ಕೆ ತೆರಳಿ ಗಾಯಗೊಂಡ ಬಾಲಕ; ವಿದ್ಯಾರ್ಥಿ ಮೈಮೇಲೆ ಬಿಸಿ ನೀರು ಸುರಿದ ಶಿಕ್ಷಕ? ಘಟನೆ ಸುತ್ತ ಅನುಮಾನಗಳ ಹುತ್ತ!
ಮಸ್ಕಿ ತಾಲೂಕಿನ ಸಂತೆಕಲ್ಲೂರು ಗ್ರಾಮದಲ್ಲಿ ಟ್ಯೂಷನ್ ತರಗತಿಗೆ ಹಾಜರಾಗುತ್ತಿದ್ದ ಖಾಸಗಿ ಶಾಲೆಯೊಂದರಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ ಎಂಟು ವರ್ಷದ ಬಾಲಕನಿಗೆ ನಿಗೂಢವಾಗಿ ಸುಟ್ಟ ಗಾಯಗಳಾಗಿವೆ.

ಅಮೃತಸರದ ಪ್ರಮುಖ ಶಾಲೆಯಲ್ಲಿ ಹುಸಿ ಬಾಂಬ್ ಬೆದರಿಕೆ, ವದಂತಿ ಹಬ್ಬಿಸಿದ್ದ ಮೂವರು ವಿದ್ಯಾರ್ಥಿಗಳು ಪತ್ತೆ: ಪೊಲೀಸರು
ಅಮೃತಸರದ ಪ್ರಮುಖ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ವದಂತಿಯನ್ನು ಅದೇ ಶಾಲೆಯ ಮೂವರು ವಿದ್ಯಾರ್ಥಿಗಳೇ ಹಬ್ಬಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟದ ಎಚ್ಚರಿಕೆ ಸಂದೇಶಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು.

