school

ಕೇರಳದ ಇಬ್ಬರು ಮಕ್ಕಳಲ್ಲಿ 'ನೊರೋವೈರಸ್' ಸೋಂಕು ಪತ್ತೆ!
ಕೇರಳದ ಇಬ್ಬರು ಮಕ್ಕಳಲ್ಲಿ ನೊರೋವೈರಸ್ ಸೋಂಕು ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇರಳ ಸರ್ಕಾರವು ಮಾಹಿತಿ ನೀಡಿದೆ.

ಶಿವಮೊಗ್ಗ: 108 ವಿದ್ಯಾರ್ಥಿಗಳು ದಿಢೀರ್ ಅಸ್ವಸ್ಥ, ಯೋಗಥಾನ್ ಕಾರ್ಯಕ್ರಮದಲ್ಲಿ ನೀಡಿದ ತಿಂಡಿಯ ಮೇಲೆ ಅನುಮಾನ, ಪ್ರತಿಭಟನೆ
ನಗರ ಹಾಗೂ ಹೊರವಲಯದಲ್ಲಿರುವ ಸರಕಾರಿ ವಸತಿ ಶಾಲೆ ಹಾಗೂ ಬಾಲಕಿಯರ ವಸತಿ ನಿಲಯಗಳ 108 ವಿದ್ಯಾರ್ಥಿಗಳಲ್ಲಿ ವಾಂತಿಭೇದಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಸೋಮವಾರ ಸಂಜೆ ಹಾಗೂ ಮಂಗಳವಾರ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭೀಕರ ಚಳಿಗೆ ಉತ್ತರ ಭಾರತ ತತ್ತರ: ರೈಲು, ವಿಮಾನ ಹಾರಾಟದಲ್ಲಿ ವ್ಯತ್ಯಯ, ದೆಹಲಿಯಲ್ಲಿ ಜ.15ರವರೆಗೆ ಶಾಲೆಗಳಿಗೆ ರಜೆ ಘೋಷಣೆ
ಕಳೆದ 15 ದಿನಗಳಿಂದ ಭೀಕರ ಚಳಿಗೆ ಉತ್ತರ ಭಾರತ ತತ್ತರಗೊಂಡಿದ್ದು, ಭಾರಿ ಚಳಿ ಹಾಗೂ ಮಂಜು ಮುಸುಕಿದ ವಾತಾವರಣವು ಸದ್ದಿಲ್ಲದೆ ನೂರಾರು ಜನರನ್ನು ಬಲಿಪಡೆದುಕೊಂಡಿದೆ. ಮಂಜು ಮುಸುಕಿದ ವಾತಾವರಣ ಹಿನ್ನೆಲೆಯಲ್ಲಿ ಹಲವೆಡೆ ರೈಲು ಸಂಚಾರ ಹಾಗೂ ವಿಮಾನಗಳ ಹಾರಾಟದಲ್ಲಿ ವ್ಯತ್ಯಯಗಳು ಕಂಡು ಬಂದಿದೆ.

ಮಕ್ಕಳಲ್ಲಿ "ಕಾಮನ್ ಸೆನ್ಸ್" ಕೊರತೆ - ಹೊಣೆ ಯಾರು?
ಮನೆಪಾಠಗಳಲ್ಲಾದರೂ ಎಷ್ಟು ಮಕ್ಕಳಿಗೆ ವಿಶೇಷವಾಗಿ ಗಮನ ಕೇಂದ್ರೀಕರಿಸಿ ಹೇಳಿಕೊಡಲು ಸಾಧ್ಯವಾಗುತ್ತದೆ? ಅದೂ ಸಹ ಶಾಲೆಯಂತೆ ಕುರಿದೊಡ್ಡಿಯೇ ಸರಿ!

ಗದಗ: ವಿದ್ಯಾರ್ಥಿಗೆ ಥಳಿಸಿ, ಮೊದಲ ಮಹಡಿಯಿಂದ ಎಸೆದ ಶಿಕ್ಷಕ; ಬಾಲಕ ಸಾವು, ಮೃತ ವಿದ್ಯಾರ್ಥಿ ತಾಯಿ ಮೇಲೂ ಹಲ್ಲೆ, ಪರಿಸ್ಥಿತಿ ಗಂಭೀರ
ಅತಿಥಿ ಶಿಕ್ಷಕನೊಬ್ಬ 10 ವರ್ಷದ ವಿದ್ಯಾರ್ಥಿಯ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದರ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ.

ಕಿತ್ತಾಡಿಕೊಂಡ ಯುಕೆಜಿ ಮಕ್ಕಳು: ಹೊಡಿಬಡಿಗಿಳಿದ ಪೋಷಕರು, ಓರ್ವ ಆಸ್ಪತ್ರೆಗೆ ದಾಖಲು
ಶಾಲೆಗಳಲ್ಲಿ ಪುಟ್ಟಮಕ್ಕಳು ಕಿತ್ತಾಡಿಕೊಳ್ಳುವುದು ಸಾಮಾನ್ಯ. ಆದರೆ, ಇದೇ ವಿಚಾರಕ್ಕೆ ಮಕ್ಕಳಿಬ್ಬರ ಪೋಷಕರು ಕೈ-ಕೈ ಮಿಲಾಯಿಸಿಕೊಂಡು ಜಗಳ ಮಾಡಿರುವ ಘಟನೆಯೊಂದು ವಿದ್ಯಾರಣ್ಯಪುರದಲ್ಲಿ ನಡೆದಿದೆ.

ಮಾಂಡೌಸ್ ಚಂಡಮಾರುತದ ಅಬ್ಬರ: ತಮಿಳುನಾಡು, ಪಾಂಡಿಚೆರಿಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ
'ಮಾಂಡೌಸ್' ಚಂಡಮಾರುತದ ಅಬ್ಬರ ಗುರುವಾರ ತೀವ್ರಗೊಂಡಿದ್ದು, ತಮಿಳುನಾಡಿನ ಉತ್ತರ ಕರಾವಳಿ ಮತ್ತು ಆಂತರಿಕ ಜಿಲ್ಲೆಗಳು ಮತ್ತು ಪುದುಚೇರಿ ಮತ್ತು ಕಾರೈಕಾಲ್‌ನಲ್ಲಿ ಡಿಸೆಂಬರ್ 9 ಮತ್ತು 10 ರಂದು (ಶುಕ್ರವಾರ ಮತ್ತು ಶನಿವಾರ) ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.

ರಾಮನಗರ ಜಿಲ್ಲೆಯಲ್ಲಿ 'ಮಕ್ಕಳ ಗ್ರಾಮ ಸಭೆ': ಶಾಲೆಯ ಅಗತ್ಯತೆ, ಮೂಲಸೌಕರ್ಯಗಳ ಬಗ್ಗೆ ವಿದ್ಯಾರ್ಥಿಗಳಿಂದ ಚರ್ಚೆ!
ರಾಮನಗರ ಜಿಲ್ಲೆಯ ಗೋಪಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ಗ್ರಾಮ ಸಭೆ ಗುರುವಾರ ನಡೆಯಿತು.

ಮೈದಾನದಲ್ಲಿ ಶಾಲೆ ನಿರ್ಮಿಸಲು ಬಿಬಿಎಂಪಿ ಮುಂದು: ಅಧಿಕಾರಿಗಳ ವಿರುದ್ಧ ಆರ್‌ಆರ್‌ನಗರ ನಿವಾಸಿಗಳ ಪ್ರತಿಭಟನೆ
ರಾಜರಾಜೇಶ್ವರಿನಗರದ 1.6 ಎಕರೆ ವಿಸ್ತೀರ್ಣದ ಕೆಂಪೇಗೌಡ ಆಟದ ಮೈದಾನದಲ್ಲಿ ಶಾಲೆ ನಿರ್ಮಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ಥಳೀಯ ನಿವಾಸಿಗಳು ವಿರೋಧಿಸಿದ್ದು, ಬುಧವಾರ ಪ್ರತಿಭಟನೆ ನಡೆಸಿದರು.

