scam

ಕೈಮಗ್ಗ ನಿಗಮದ ಟೆಂಡರ್ ಕೋಮಲ್ ಹೆಸರಿಗೆ ಹೋಗಿದ್ದು ಹೇಗೆ? ಭ್ರಷ್ಟರೇ ಭ್ರಷ್ಟಾಚಾರದ ಬಗ್ಗೆ ಆರೋಪಿಸುವುದು, ಹಾಸ್ಯನಟನೆ!
ಬಿಬಿಎಂಪಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವೆಟರ್ ನೀಡದೇ ವಂಚನೆ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ಚೀನಾದ ಹವಾಲಾ ದಂಧೆಕೋರರ ಜೊತೆ ಸಂಪರ್ಕ ಶಂಕೆ: 290 ಕೋಟಿ ರೂ. ಹಗರಣ ಬಯಲಿಗೆಳೆದ ರಾಜ್ಯ ಪೊಲೀಸರು
ಹೂಡಿಕೆ ಮೇಲೆ ಆಕರ್ಷಿತ ಬಡ್ಡಿದರ ನೀಡುವುದಾಗಿ ಮೊಬೈಲ್ ಆಪ್ ಮೂಲಕ ಭರವಸೆ ನೀಡಿ ಜನರಿಗೆ ಮೋಸ ಮಾಡಿ ಕೋಟ್ಯಂತರ ರೂಪಾಯಿ ಹಣ ಎಗರಿಸಿದ್ದ ತಂಡವೊಂದನ್ನು ಬಂಧಿಸಿರುವ ರಾಜ್ಯ ಪೊಲೀಸರು ಸುಮಾರು 290 ಕೋಟಿ ರೂಪಾಯಿ ಹಗರಣವನ್ನು ಬಯಲಿಗೆಳೆದಿದ್ದಾರೆ.

ಆರ್ ಒ ಕುಡಿಯುವ ನೀರು ಘಟಕ ಹಗರಣ: ತನಿಖೆಗೆ ಸಿಎಂ ಯಡಿಯೂರಪ್ಪ ಆದೇಶ
ಆರ್ ಒ ಕುಡಿಯುವ ನೀರು ಶುದ್ಧೀಕರಣ ಘಟಕದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬಹುದೊಡ್ಡ ಹಗರಣದ ಬಗ್ಗೆ ತನಿಖೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದೇಶ ನೀಡಿದ್ದಾರೆ.

ಐಎಂಎ ಠೇವಣಿದಾರರಿಗೆ ಹಣ; ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದ ಸರ್ಕಾರ
ಐಎಂಎ ಕಂಪನಿಯ ಠೇವಣಿದಾರರಿಗೆ ಹಣ ಬಿಡುಗಡೆ ಮಾಡುವ ಸಂಬಂಧ ನ.25ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಸೇವಾ ಸಿಂಧು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದೆಂದು ರಾಜ್ಯ ಸರ್ಕಾರ ಹೈಕೋರ್ಟ್'ಗೆ ಮಾಹಿತಿ ನೀಡಿದೆ.

ಹಗರಣದ ಕರ್ಮಕಾಂಡ:ಬಿಹಾರದಲ್ಲಿ 66 ವರ್ಷದ ವೃದ್ಧೆ 13 ತಿಂಗಳಲ್ಲಿ 8 ಮಕ್ಕಳನ್ನು ಹಡೆದಿದ್ದಾಳೆ!
ಸರ್ಕಾರದ ಅನುದಾನವನ್ನು, ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಅಲ್ಲಲ್ಲಿ ಕೇಳುತ್ತೇವೆ, ನೋಡುತ್ತೇವೆ. ಇಂತಹದ್ದೇ ಒಂದು ಕರ್ಮಕಾಂಡ ಬಿಹಾರದ ಮುಜಾಫರ್ ಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ನಡೆದಿದೆ.

ವೈದ್ಯಕೀಯ ಕಿಟ್ ಖರೀದಿ ಅವ್ಯವಹಾರ; ದಾಖಲೆ ಮುರುಗೇಶ್ ನಿರಾಣಿ ಪೆನ್‌ಡ್ರೈವ್‌ನಲ್ಲಿದೆ- ಸಿದ್ದರಾಮಯ್ಯ
ಕೊರೋನಾ ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರದ ದಾಖಲೆ ನಿಮ್ಮದೇ ಪಕ್ಷದ ಮಾಜಿ ಸಚಿವ, ಹಾಲಿ ಶಾಸಕ ಮುರುಗೇಶ್ ನಿರಾಣಿಯವರ ಬಳಿಯಿರುವ ಪೆನ್‌ಡ್ರೈವ್‌ನಲ್ಲಿ ಇದೆಯಂತೆ.ಅದನ್ನು ಪಡೆದುಕೊಳ್ಳಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.

ಕೊರೋನಾ ವೈದ್ಯಕೀಯ ಸಲಕರಣೆ ಖರೀದಿ ಹೆಸರಿನಲ್ಲಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ: ಶಾಸಕ ಖಾದರ್ ಆರೋಪ
ಕೊರೋನಾ ಚಿಕಿತ್ಸೆ ವೈದ್ಯಕೀಯ ಸಲಕರಣೆ ಖರೀದಿ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಶಾಸಕ ಯುಟಿ ಖಾದರ್ ಅವರು ಆರೋಪಿಸಿದ್ದಾರೆ.

ಬಿಡಿಎ ಸೈಟ್ ಗೋಲ್'ಮಾಲ್: ನಕಲಿ ಹಕ್ಕುಪತ್ರ ಸೃಷ್ಟಿಸಿ ಭಾರೀ ವಂಚನೆ, ಇಬ್ಬರ ಬಂಧನ
ಬಿಡಿಎ ನಿರ್ಮಿಸಿರುವ ಕೆಂಪೇಗೌಡ ಲೇಔಟ್'ನ ನಿವೇಶನಗಳ ನಕಲಿ ಹಕ್ಕುಪತ್ರ ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರಂ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

'ಇದು ದೊಡ್ಡ ಹಗರಣ, ಮೋದಿ ಸರ್ಕಾರ ದೇಶವನ್ನು ಲೂಟಿ ಮಾಡುತ್ತಿದೆ': ಲೋಕಸಭೆಯಲ್ಲಿ ಪ್ರತಿಪಕ್ಷಗಳಿಂದ ತೀವ್ರ ಪ್ರತಿಭಟನೆ
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಬಿಪಿಸಿಎಲ್) ಸೇರಿದಂತೆ ಕೆಲವು ಸಾರ್ವಜನಿಕ ವಲಯ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದನ್ನು ಮತ್ತು ಚುನಾವಣಾ ಬಾಂಡ್ ಗಳನ್ನು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಪ್ರತಿಪಕ್ಷ ಕಾಂಗ್ರೆಸ್ ಲೋಕಸಭೆಯಲ್ಲಿ ತೀವ್ರ ಕೋಲಾಹಲ ನಡೆಸಿದ ಘಟನೆ ನಡೆಯಿತು. ಸರ್ಕಾರದ ಈ ನಡೆ ದೊಡ್ಡ ಹಗರಣ ಎಂದು ಟೀಕಿಸಿದೆ.

