ರಾಜ್ಯ

ಬಿಡಿಎ ಸೈಟ್ ಗೋಲ್'ಮಾಲ್: ನಕಲಿ ಹಕ್ಕುಪತ್ರ ಸೃಷ್ಟಿಸಿ ಭಾರೀ ವಂಚನೆ, ಇಬ್ಬರ ಬಂಧನ

ಬಿಡಿಎ ನಿರ್ಮಿಸಿರುವ ಕೆಂಪೇಗೌಡ ಲೇಔಟ್'ನ ನಿವೇಶನಗಳ ನಕಲಿ ಹಕ್ಕುಪತ್ರ ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರಂ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಬಿಡಿಎ ಸೈಟ್ ಗೋಲ್'ಮಾಲ್: ನಕಲಿ ಹಕ್ಕುಪತ್ರ ಸೃಷ್ಟಿಸಿ ಭಾರೀ ವಂಚನೆ, ಇಬ್ಬರ ಬಂಧನ
ಸಂಗ್ರಹ ಚಿತ್ರ
Published On :

ಬೆಂಗಳೂರು: ಬಿಡಿಎ ನಿರ್ಮಿಸಿರುವ ಕೆಂಪೇಗೌಡ ಲೇಔಟ್'ನ ನಿವೇಶನಗಳ ನಕಲಿ ಹಕ್ಕುಪತ್ರ ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರಂ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. 

ನಿವೇಶನಗಳನ್ನು ರಿಯಾಯಿತಿ ಹಾಗೂ ಆಕರ್ಷಕ ದರದಲ್ಲಿ ಕೊಡಿಸುತ್ತೇನೆಂದು ಹೇಳಿ ಗುಂಪೊಂದು ನೂರಾರು ಜನರಿಗೆ ವಂಚನೆ ಮಾಡಿದೆ. ವಿಯಾನಂದಸ್ವಾಮಿ ಈ ಗುಂಪಿನ ಪ್ರಮುಖನಾಗಿದ್ದಾನೆಂದು ಹೇಳಲಾಗುತ್ತಿದ್ದು, ಈತನನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ಕಾಗದ ಪತ್ರಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಈಗಲೂ ಪ್ರತೀನಿತ್ಯ ಒಬ್ಬೊಬ್ಬರು ಪೊಲೀಸ್ ಠಾಣೆಗೆ ಬಂದು ದೂರು ದಾಖಲು ಮಾಡುತ್ತಿದ್ದಾರೆ. ಪ್ರಕರಣ ಸಂಬಂಧ ಇನ್ನು ಎಷ್ಟು ಮಂದಿ ವಂಚನೆಗೊಳಗಾಗಿದ್ದಾರೆಂಬುದು ಸ್ಪಷ್ಟವಿಲ್ಲ ಎನ್ನಲಾಗುತ್ತಿದೆ. 

ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನೂ ಕೂಡ ಬಂಧನಕ್ಕೊಳಪಡಿಸಿದ್ದು, ಇಬ್ಬರನ್ನೂ ಜೂನ್.12ರವಗೆಗೂ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. 

ಆರೋಪಿ ವಿಜಯಾನಂದ ಸ್ವಾಮಿ ರೈತ ಸಂಘವೊಂದನ್ನು ಸ್ಥಾಪನೆ ಮಾಡಿದ್ದು, ನಿವೇಶನ ಕೊಡಿಸುತ್ತೇನೆಂದು ಪ್ರತೀಯೊಬ್ಬರ ಬಳಿ ರೂ.25,000ದ ದಿಂದ ರೂ.4.8 ಲಕ್ಷದವರೆಗೂ ಹಣವನ್ನು ಪಡೆದುಕೊಂಡಿದ್ದಾನೆ. ಅಲ್ಲದೆ. ರೈತ ಸಂಘದೊಂದಿಗೆ ಸೇರ್ಪಡೆಗೊಳ್ಳುವಂತೆಯೂ ತಿಳಿಸಿದ್ದಾರೆ. 

ಪ್ರಕರಣ ಸಂಬಂಧ ತಮಗಾದ ವಂಚನೆಗಳ ಕುರಿತು ಕೆಲ ಜನರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಂಚನೆಯಲ್ಲಿ ವಕೀಲೆಯೊಬ್ಬರೂ ಕೂಡ ಮೋಸ ಹೋಗಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ಸಿಕ್ಕ ಈ ವ್ಯಕ್ತಿ ಸ್ಟ್ಯಾಂಪ್ ತೋರಿಸಿ ನಿವೇಶನ ಕೊಡಿಸುವುದಾಗಿ ತಿಳಿಸಿದ್ದ. ಹೀಗಾಗಿ ನನ್ನ ಮಗ ಹಾಗೂ ಮಗಳಿಗಾಗಿ 20*30 ಸೈಟ್ ಖರೀದಿ ಮಾಡಲು ನಾನು ನಿರ್ಧರಿಸಿದ್ದೆ. 1 ವರ್ಷದಲ್ಲಿ ಆತ ರೂ.2.1 ಲಕ್ಷ ಹಣ ಪಡೆದುಕೊಂಡಿದ್ದ. ಯಾವಾಗಲೂ ಚಾಮರಾಜಪೇಟೆಯಲ್ಲಿರುವ ಕಚೇರಿಯಲ್ಲಿ ಸಿಗುತ್ತಿದ್ದ. ಪ್ರಾಮಾಣಿಕ ವ್ಯಕ್ತಿಯಂತೆ ವರ್ತಿಸುತ್ತಿದ್ದ. ನನ್ನೊಂದಿಗೆ ಇನ್ನೂ 13 ಜನರ ಕೂಡ ಈತನಿಗೆ ಹಣ ನೀಡಿದ್ದರು. ಪ್ರತೀ ಬಾರಿ ಭೇಟಿ ಮಾಡಿದಾಗಲೂ ದಾಖಲಾತಿಗಳನ್ನು ತೋರಿಸುತ್ತಿದ್ದ. ವಿಧಾನಸೌಧ ಕಚೇರಿಯಿಂದ ಬಂದಿರುವ ದಾಖಲೆಗಳು ಎಂದು ಹೇಳುತ್ತಿದ್ದ ಎಂದು ಹೇಳಿದ್ದಾರೆ. 

ಬಟ್ಟೆ ಅಂಗಡಿಯಲ್ಲಿ ವ್ಯವಹಾರ ನಡೆಸುತ್ತಿರುವ ಪಂಚಾಕ್ಷರಯ್ಯ ಎಂಬುವವರು ಮಾತನಾಡಿ, ನಾಲ್ಕು ಸೈಟ್ ಗಳಿಗಾಗಿ ಆತನಿಗೆ ರೂ.4.8 ಲಕ್ಷ ನೀಡಿದ್ದೆ. ನನ್ನ ತೀರ್ಮಾನದ ಮೇಲೆ ಮನೆಯಲ್ಲಿರುವವರೆಲ್ಲರೂ ನಂಬಿಕೆ ಇಟ್ಟಿದ್ದರು. ವಂಚಕರ ಜಾಲದಲ್ಲಿರುವ ಫಯಾಜ್ ಎಂಬಾತನ ಮೇಲೆ ನಾನು ನಂಬಿಕೆ ಇಟ್ಟಿದ್ದೆ. ಆತ ನನಗೆ 12 ವರ್ಷಗಳಿಂದಲೂ ತಿಳಿದ ವ್ಯಕ್ತಿಯಾಗಿದ್ದ. ಆತನ ನನಗೆ ನಿವೇಶನ ಕುರಿತು ಮಾಹಿತಿ ನೀಡಿದ್ದೆ. 15 ದಿನಗಳಲ್ಲಿ ನಾನು ಆತನಿಗೆ ಹಣ ನೀಡಿದ್ದೆ. ಸ್ಥಳಕ್ಕೆ ನನ್ನನ್ನೂ ಕರೆದುಕೊಂಡು ಹೋಗಿ ನಿವೇಶನ ತೋರಿಸಿದ್ದ ಎಂದು ಹೇಳಿದ್ದಾರೆ. 

ಪ್ರಕಱಣ ಸಂಬಂಧ ಸ್ವಾಮಿ ಹಾಗೂ ರಮೇಶ್ ಎಂಬಾತನನ್ನು ಬಂಧನಕ್ಕೊಳಪಡಿಸಲಾಗಿದ್ದು, ತನಿಖೆ ಮುಂದುವರೆಸಲಾಗುತ್ತಿದೆ. ಈ ಜಾಲದಲ್ಲಿನ್ನೂ ಮತ್ತಷ್ಟು ಜನರಿರುವುದಾಗಿ ತಿಳಿದುಬಂದಿದ್ದು, ಅವರಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.