S Jaishankar

ವಿವಾದಗಳು ವ್ಯತ್ಯಾಸ ತರಬಾರದು:ಭಾರತ-ಚೀನಾ ವಿದೇಶಾಂಗ ಸಚಿವರ ಸಭೆಯಲ್ಲಿ ಸೇನಾಪಡೆ ಹಿಂತೆಗೆದುಕೊಳ್ಳಲು ಒಪ್ಪಿಗೆ
ಗಡಿ ವಾಸ್ತವ ರೇಖೆಯ ಬಳಿ ಚೀನಾ ಸೇನಾಪಡೆ ಶಸ್ತ್ರಸಜ್ಜಿತವಾಗಿ ನಿಯೋಜನೆ ಬಗ್ಗೆ ಭಾರತದ ಕಳವಳವನ್ನು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗೆ ಸಭೆ ನಡೆಸಿದ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಲಡಾಖ್ ಸಂಘರ್ಷ ತುಂಬಾ ಗಂಭೀರವಾದದ್ದು, ತುಂಬಾ ಆಳವಾದ ರಾಜತಾಂತ್ರಿಕ ಚರ್ಚೆ ಅಗತ್ಯ: ವಿದೇಶಾಂಗ ಸಚಿವ ಜೈ ಶಂಕರ್
ಲಡಾಖ್ ಸಂಘರ್ಷ ತುಂಬಾ ಗಂಭೀರವಾದದ್ದು, ತುಂಬಾ ಆಳವಾದ" ರಾಜತಾಂತ್ರಿಕ ಚರ್ಚೆ ಅಗತ್ಯ ಎಂದು ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಹೇಳಿದ್ದಾರೆ.

ಶಾಂತಿಯುತ ಮಾರ್ಗಗಳ ಮೂಲಕವೇ ಸಂಘರ್ಷಗಳನ್ನು ಬಗೆಹರಿಸಿಕೊಳ್ಳಬೇಕು:ಬ್ರಿಕ್ಸ್ ಸಭೆಯಲ್ಲಿ ಸಚಿವರುಗಳ ಒಕ್ಕೊರಲ ನಿರ್ಧಾರ
ಸಂಘರ್ಷ,ಭಿನ್ನಾಭಿಪ್ರಾಯಗಳನ್ನು ಶಾಂತಿಯುತ ಮಾರ್ಗಗಳ ಮೂಲಕ ಬಗೆಹರಿಸಿಕೊಳ್ಳಬೇಕು, ರಾಜಕೀಯ ಮಾತುಕತೆ ಮೂಲಕ ರಾಜತಾಂತ್ರಿಕ ಮಟ್ಟದಲ್ಲಿ ಮತ್ತು ಸಂಧಾನ ಮಾಡಿಕೊಳ್ಳುವುದು ಇದಕ್ಕಿರುವ ಅತ್ಯುತ್ತಮ ಮಾರ್ಗ ಎಂದು ಬ್ರಿಕ್ಸ್ ಸಭೆಯಲ್ಲಿ ನಾಯಕರು ತೀರ್ಮಾನಕ್ಕೆ ಬಂದಿದ್ದಾರೆ.

ರಾಜತಾಂತ್ರಿಕ ಮಟ್ಟದಲ್ಲಿ ಭಾರತ-ಚೀನಾ ಗಡಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕಿದೆ:ಎಸ್ ಜೈಶಂಕರ್
ರಾಜತಾಂತ್ರಿಕ ಮಟ್ಟದಲ್ಲಿ ಭಾರತ-ಚೀನಾ ಗಡಿ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಬೇಕೆಂದು ತಮಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಭಯೋತ್ಪಾದನೆ ಸಾಂಕ್ರಾಮಿಕ ರೋಗದಂತೆ ಎಲ್ಲರ ಮೇಲೆ ಪ್ರಭಾವ ಬೀರುವ ಕ್ಯಾನ್ಸರ್: ಕೇಂದ್ರ ಸಚಿವ ಜೈಶಂಕರ್
ಭಯೋತ್ಪಾದಕರನ್ನು ಹುಟ್ಟಿಸಿ ಅವರನ್ನೇ ತಮ್ಮ ಪ್ರಾಥಮಿಕ ರಫ್ತು ಸರಕನ್ನಾಗಿಸಿಕೊಂಡಿದ್ದ ರಾಷ್ಟ್ರಗಳು ಈಗ ತಮ್ಮನ್ನು ಭಯೋತ್ಪಾದನೆಯ ಬಲಿಪಶುಗಳೆಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಅಪಾಯವನ್ನು ಬೆಂಬಲಿಸುವ ಸಂಘಟನೆಗಳನ್ನು ಸ್ಥಗಿತಗೊಳಿಸಲು ಜಾಗತಿಕ ಕಾರ್ಯವಿಧಾನಗಳನ್ನು ರಚಿಸಬೇಕು ಎಂದು ಅವರು ಕರೆ ನೀಡಿದರು.

ಸೇನಾಪಡೆ ಹಿಂಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ: ವಿದೇಶಾಂಗ ಸಚಿವ ಎಸ್ ಜೈಶಂಕರ್
ಪೂರ್ವ ಲಡಾಕ್ ನಲ್ಲಿ ಗಡಿ ವಾಸ್ತವ ರೇಖೆಯಲ್ಲಿ ಸೇನಾಪಡೆಯನ್ನು ಹಿಂತೆಗೆದುಕೊಂಡು ಗಡಿಯಲ್ಲಿನ ಉದ್ವಿಗ್ನ ಸ್ಥಿತಿಯನ್ನು ಕಡಿಮೆ ಮಾಡಲು ಭಾರತ ಮತ್ತು ಚೀನಾ ದೇಶಗಳು ಪ್ರಯತ್ನ ಮುಂದುವರಿಸಿದೆ.

ಇಂದು ವಿಶ್ವ ಕೋವಿಡ್-19 ಮತ್ತು ತಪ್ಪು ಮಾಹಿತಿಯ ದಾಳಿಗೆ ಒಳಗಾಗುತ್ತಿದೆ: ಎಸ್ ಜೈಶಂಕರ್
ಕೊರೋನಾ ಸೋಂಕಿನ ಸಮಸ್ಯೆ ಜೊತೆಗೆ ತಪ್ಪು ಮಾಹಿತಿ ಕೂಡ ಸೋಂಕಿನ ರೀತಿಯಲ್ಲಿ ರವಾನೆಯಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಗಲ್ವಾನ್ ಸಂಘರ್ಷ: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚೀನಾ ವಿರುದ್ಧ ಜೈ ಶಂಕರ್ ಪರೋಕ್ಷ ಅಸಮಾಧಾನ!
ಗಲ್ವಾನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಚೀನಾ ವಿರುದ್ಧ ಆಕ್ರೋಶಗೊಂಡಿರುವ ಭಾರತ ಜಾಗತಿಕ ವೇದಿಕೆಯಲ್ಲಿ ತನ್ನ ಅಸಮಾಧಾನವನ್ನು ಹೊರ ಹಾಕಿದೆ.

ಗಾಲ್ವಾನ್ ಸಂಘರ್ಷ ಪೂರ್ವನಿಯೋಜಿತ: ಚೀನಾ ಸಚಿವರೊಂದಿಗಿನ ಮಾತುಕತೆ ವೇಳೆ ಭಾರತ ತೀವ್ರ ಅಸಮಾಧಾನ!
ಭಾರತ ಮತ್ತು ಚೀನಾ ಸೈನಿಕರ ನಡುವೆ ಗಾಲ್ವಾನ್ ನಲ್ಲಿ ನಡೆದ ಸಂಘರ್ಷ ಪೂರ್ವನಿಯೋಜಿತ ಕೃತ್ಯ ಎಂದು ಕೇಂದ್ರ ಸರ್ಕಾರ ಚೀನಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

