ದೇಶ

ಇಂದು ವಿಶ್ವ ಕೋವಿಡ್-19 ಮತ್ತು ತಪ್ಪು ಮಾಹಿತಿಯ ದಾಳಿಗೆ ಒಳಗಾಗುತ್ತಿದೆ: ಎಸ್ ಜೈಶಂಕರ್

ಕೊರೋನಾ ಸೋಂಕಿನ ಸಮಸ್ಯೆ ಜೊತೆಗೆ ತಪ್ಪು ಮಾಹಿತಿ ಕೂಡ ಸೋಂಕಿನ ರೀತಿಯಲ್ಲಿ ರವಾನೆಯಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಇಂದು ವಿಶ್ವ ಕೋವಿಡ್-19 ಮತ್ತು ತಪ್ಪು ಮಾಹಿತಿಯ ದಾಳಿಗೆ ಒಳಗಾಗುತ್ತಿದೆ: ಎಸ್ ಜೈಶಂಕರ್
ಎಸ್ ಜೈಶಂಕರ್
Published On :

ನವದೆಹಲಿ: ಕೊರೋನಾ ಸೋಂಕಿನ ಸಮಸ್ಯೆ ಜೊತೆಗೆ ತಪ್ಪು ಮಾಹಿತಿ ಕೂಡ ಸೋಂಕಿನ ರೀತಿಯಲ್ಲಿ ರವಾನೆಯಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ವರ್ಚುವಲ್ ಸಚಿವರುಗಳ ಸಭೆಯಲ್ಲಿ ಮಾತನಾಡಿದ ಅವರು, ಇಂದು ರೂಪಾಂತರದ ಸಮಯದಲ್ಲಿ ನಾವಿದ್ದೇವೆ. ಕೊರೋನಾ ವೈರಾಣು ರೋಗ ಇಡೀ ಪ್ರಪಂಚದಲ್ಲಿ ಆರ್ಥಿಕ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಿದೆ. 4 ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿರುವುದಲ್ಲದೆ ನಮ್ಮ ಬದುಕಿನ ರೀತಿ, ಕೆಲಸ, ಪ್ರಯಾಣ ಮತ್ತು ಸಂಬಂಧಪಟ್ಟ ಇತರ ವಿಷಯಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕೊರೋನಾ ವೈರಸ್ ನಮ್ಮ ಜೀವನ ವಿಧಾನವನ್ನು ಶಾಶ್ವತವಾಗಿ ಬದಲಿಸಿದೆ ಎಂದು ಹೇಳುವುದು ಈಗಲೇ ಕಷ್ಟವಾಗಬಹುದು. ಆದರೆ ಮಾನವೀಯತೆಯ ಸಹಜ ಸೌಕರ್ಯವನ್ನು ಕಡಿಮೆ ಮಾಡಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಈ ಬದಲಾವಣೆಯ ಸನ್ನಿವೇಶನದಲ್ಲಿ ನಾವು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇದರರ್ಥ, ನಾವು ರಾಜಕೀಯವನ್ನು ಬದಿಗಿಟ್ಟು ಸತ್ಯಗಳತ್ತ ಗಮನ ಹರಿಸಬೇಕು-ಕೊರೋನಾ ವೈರಸ್ ಸಾಂಕ್ರಾಮಿಕದ ಕಾರಣಗಳು ಮತ್ತು ವಿವೇಚನೆಗಳನ್ನು ವಿಶ್ಲೇಷಿಸುವುದು ಒಂದು ಕಡೆಯಾದರೆ ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗದ ಸಿದ್ಧತೆಗಳನ್ನು ಸುಧಾರಿಸಲು ನಮ್ಮ ಬಹುಪಕ್ಷೀಯ ಆರೋಗ್ಯ ಕಾರ್ಯವಿಧಾನಗಳು ಯಾವ ಬದಲಾವಣೆಗಳನ್ನು ಕಾರ್ಯಗತಗೊಳಿಸಬೇಕು ಎಂಬುದನ್ನು ನಿರ್ಣಯಿಸುವ ಸಮಯವಿದು ಎಂದು ಜೈಶಂಕರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.