Roopesh Shetty

ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟನೆಯ ‘ಅಧಿಪತ್ರ’ ಚಿತ್ರದ ಆಡಿಯೋ ಹಕ್ಕು ಲಹರಿ ಮ್ಯೂಸಿಕ್ ಪಾಲು
ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿರುವ ‘ಅಧಿಪತ್ರ’ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಮೇ 10 ರಂದು ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದ್ದು, ಪ್ರಸಿದ್ಧ ಲಹರಿ ಮ್ಯೂಸಿಕ್ ಸಂಸ್ಥೆಯು ಚಿತ್ರದ ಆಡಿಯೋ ಹಕ್ಕುಗಳನ್ನು ಉತ್ತಮ ಬೆಲೆಗೆ ಪಡೆದುಕೊಂಡಿದೆ.

ಕಾಲಿವುಡ್‌ಗೆ ನಟ ರೂಪೇಶ್ ಶೆಟ್ಟಿ ಪದಾರ್ಪಣೆ; ಹಾಸ್ಯನಟ ಯೋಗಿ ಬಾಬು ಜೊತೆಗೆ 'ಸನ್ನಿಧಾನಂ ಪಿಒ' ಚಿತ್ರದಲ್ಲಿ ನಟನೆ
ಕನ್ನಡ, ತುಳು, ಕೊಂಕಣಿ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದ ನಟ ರೂಪೇಶ್ ಶೆಟ್ಟಿ ಇದೀಗ ತಮಿಳು ಚಿತ್ರರಂಗದಲ್ಲಿಯೂ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಖ್ಯಾತ ಹಾಸ್ಯನಟ ಯೋಗಿ ಬಾಬು ನಟನೆಯ ಸನ್ನಿಧಾನಂ ಪಿಒ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ರೂಪೇಶ್ ಶೆಟ್ಟಿ ನಟಿಸುತ್ತಿದ್ದಾರೆ.

ಅಧಿಪತ್ರ ಚಿತ್ರದ ಮೂಲಕ ಆ್ಯಂಕರ್-ಕಿರುತೆರೆ ಖ್ಯಾತಿಯ ಜಾಹ್ನವಿ ಬೆಳ್ಳಿತೆರೆಗೆ ಪದಾರ್ಪಣೆ!
ನನ್ನಮ್ಮ ಸೂಪರ್ ಸ್ಟಾರ್, ಗಿಚ್ಚಿ ಗಿಲಿಗಿಲಿ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಹೆಸರುವಾಸಿಯಾದ ಆ್ಯಂಕರ್-ನಟಿ ಜಾಹ್ನವಿ ಇದೀಗ ಬೆಳ್ಳಿತೆರೆಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ನಟ ಮತ್ತು ಕನ್ನಡ ಬಿಗ್ ಬಾಸ್‌ನ ವಿಜೇತ ರೂಪೇಶ್ ಶೆಟ್ಟಿ ಅಭಿನಯದ 'ಅಧಿಪತ್ರ' ಸಿನಿಮಾದಲ್ಲಿ ಜಾಹ್ನವಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಡಾರ್ಲಿಂಗ್ ಕೃಷ್ಣ-ರಚಿತಾ ರಾಮ್ ಅಭಿನಯದ 'ಲವ್ ಮಿ OR ಹೇಟ್ ಮಿ' ಚಿತ್ರದ ಪ್ರಮುಖ ಪಾತ್ರದಲ್ಲಿ ರೂಪೇಶ್ ಶೆಟ್ಟಿ
ಲವ್ ಮಿ OR ಹೇಟ್ ಮಿ ಸಿನಿಮಾ ಮೂಲಕ ಕೃಷ್ಣ ಮತ್ತು ರಚಿತಾ ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ ಮತ್ತು ಈ ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿಜೇತ ಮತ್ತು ನಟ ರೂಪೇಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಹೆಸರು ಮಾಡಬೇಕೆಂದು ಆಸೆಯಿದೆ: ಬಿಗ್ ಬಾಸ್ ಸೀಸನ್ 9 ವಿಜೇತ ರೂಪೇಶ್ ಶೆಟ್ಟಿ
ಬಿಗ್ ಬಾಸ್9 ನ ವಿಜೇತ ರೂಪೇಶ್ ಶೆಟ್ಟಿ ಕನ್ನಡ ಒಟಿಟಿ ಬಿಗ್ ಬಾಸ್ ಕನ್ನಡ ಸೀಸನ್ 1 ನಲ್ಲಿ ಕೂಡ ಗೆಲುವು ಕಂಡವರು. ಯುವ ನಟ ಮತ್ತು ಚಿತ್ರ ನಿರ್ಮಾಪಕ ತುಳು ಚಿತ್ರರಂಗದಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ.

ಮಂಕು ಭಾಯ್ ಫಾಕ್ಸಿ ರಾಣಿ ಚಿತ್ರದ ಟ್ರೈಲರ್
ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಅಭಿನಯದ ಮಂಕು ಭಾಯ್ ಫಾಕ್ಸಿ ರಾಣಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಗಗನ್ ಎಂ ನಿರ್ದೇಶಿಸಿದ್ದಾರೆ.

ನಟ ರೂಪೇಶ್ ಶೆಟ್ಟಿ ಮುಡಿಗೇರಿದ ಬಿಗ್ ಬಾಸ್ ಸೀಸನ್ 9 ಕಿರೀಟ; ರಾಕೇಶ್ ಅಡಿಗ ರನ್ನರ್ ಅಪ್
ರಿಯಾಲಿಟಿ ಶೋ ಬಿಗ್ ಬಾಸ್ 9 ರ ವಿಜೇತ ಘೋಷಣೆಯಾಗಿದ್ದು, ಬಿಗ್ ಬಾಸ್ ವಿಜೇತನ ಕಿರೀಟ ನಟ ರೂಪೇಶ್ ಶೆಟ್ಟಿ ಮುಡಿಗೇರಿದೆ.

ಬಿಗ್ ಬಾಸ್ ಕನ್ನಡ ಸೀಸನ್ 9: ಫೈನಲಿಸ್ಟ್ ಹೆಸರು ಘೋಷಿಸಿದ ಕಿಚ್ಚ ಸುದೀಪ್!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಬಿಗ್ ಬಾಸ್ ಸೀಸನ್ 9ರ ಇಬ್ಬರು ಫೈನಲಿಸ್ಟ್ ಹೆಸರನ್ನು ಕಿಚ್ಚ ಸುದೀಪ್ ಘೋಷಿಸಿದ್ದಾರೆ.

