Rohit Padaki

ಧನಂಜಯ್-ರಮ್ಯಾ ನಟನೆಯ 'ಉತ್ತರಕಾಂಡ' ಚಿತ್ರತಂಡಕ್ಕೆ ನಟ ಶಿವರಾಜಕುಮಾರ್ ಸೇರ್ಪಡೆ
ರೋಹಿತ್ ಪದಕಿ ನಿರ್ದೇಶನದ ಮುಂಬರುವ 'ಉತ್ತರಕಾಂಡ'ದಲ್ಲಿ ನಟ ಧನಂಜಯ್ ನಟಿಸುತ್ತಿದ್ದು, ವಿರಾಮದ ನಂತರ ನಟನೆಗೆ ನಟಿ ರಮ್ಯಾ ಅವರು ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಇದೀಗ ನಟ ಶಿವರಾಜಕುಮಾರ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ರೋಹಿತ್ ಪದಕಿ ನಿರ್ದೇಶನದ ಸಿನಿಮಾದಲ್ಲಿ ಡಾಲಿ ಧನಂಜಯ್: 'ಉತ್ತರಕಾಂಡ' ಫರ್ಸ್ಟ್ ಲುಕ್ ರಿಲೀಸ್!
ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸಿರುವ ರೋಹಿತ್ ಪದಕಿ ನಿರ್ದೇಶನದ ಉತ್ತರಕಾಂಡದಲ್ಲಿ ಡಾಲಿ ಧನಂಜಯ್ ನಟಿಸುತ್ತಿದ್ದಾರೆ. ಈ ಹಿಂದೆಯೇ ಟೈಟಲ್ ರಿವೀಲ್ ಮಾಡಿದ್ದ ನಿರ್ದೇಶಕರು ಇದೀಗ ಫರ್ಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ.

ಕೆ.ಆರ್.ಜಿ ಸ್ಟುಡಿಯೋ ನಿರ್ಮಾಣದ 'ಉತ್ತರಕಾಂಡ'ಕ್ಕೆ ರೋಹಿತ್ ಪದಕಿ ನಿರ್ದೇಶನ
ಕೆ.ಆರ್.ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಿನಿಮಾವೊಂದು ಘೋಷಣೆ ಮಾಡಿದ್ದು, ಈ ಚಿತ್ರಕ್ಕೆ ‘ಉತ್ತರಕಾಂಡ’ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ರತ್ನನ್ ಪ್ರಪಂಚ ನಿರ್ದೇಶಕ ರೋಹಿತ್ ಪದಕಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಬೆಂಗಳೂರು ಮೇರಿ ಜಾನ್ ಎಂದ 'ರತ್ನನ್ ಸುಂದರಿ' ರೆಬಾ ಮೋನಿಕಾ ಜಾನ್ ಗೆ 11 ಪ್ರಶ್ನೆಗಳು
ಮಲಯಾಳಿಯಾದರೂ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಕನ್ನಡ ಬಗ್ಗೆ ಅಭಿಮಾನ ಇರಿಸಿಕೊಂಡಿರುವ ರೆಬಾ, 'ರತ್ನನ್ ಪ್ರಪಂಚ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಈ ಹಿಂದೆ ಅವರು ಹಲವು ಮಲಯಾಳಂ ಮತ್ತು ತಮಿಳು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೆಬಾ ಮೊದಲ ಕನ್ನಡ ಸಿನಿಮಾ 'ರತ್ನನ್ ಪ್ರಪಂಚ' 22ರಂದು ಅಮೆಜಾನ್ ಪ್ರೈಮ್ ನಲ್ಲಿ ತೆರೆ ಕಾಣುತ್ತಿದೆ.

ಮಿಡಲ್ ಕ್ಲಾಸ್ ವ್ಯಕ್ತಿಯ ಫರ್ಸ್ಟ್ ಕ್ಲಾಸ್ ಸ್ಟೋರಿ 'ರತ್ನನ್ ಪ್ರಪಂಚ': ಡಾಲಿ ಧನಂಜಯ ಸಂದರ್ಶನ
ಸರ್, ಸಂಜೆ ಬೆಂಗಳೂರು ರಸ್ತೆಯೊಂದರಲ್ಲಿ ಟ್ರಾಫಿಕ್ ಸಿಗ್ನಲ್ ಬೀಳುತ್ತೆ. ಗಾಡಿ ನಿಲ್ಲಿಸಿ ಅಕ್ಕಪಕ್ಕ ಕಣ್ಣು ಹಾಯಿಸಿದಾಗ, ಮನೆ ಸೇರಿಕೊಳ್ಳುವ ಧಾವಂತದಲ್ಲಿರುವ ಹೆಲ್ಮೆಟ್ ತೊಟ್ಟ ಒಬ್ಬ ವ್ಯಕ್ತಿ ಸ್ಪ್ಲೆಂಡರ್ ಬೈಕಿನಲ್ಲಿ ಕಾಣಿಸುತ್ತಾನೆ. ಅವನೇ ರತ್ನಾಕರ. ರತ್ನನ್ ಪ್ರಪಂಚ ಸಿನಿಮಾದ ಕಥಾನಾಯಕ. ದಿ ಕಾಮನ್ ಮ್ಯಾನ್!

ಹಿರಿಯ ನಟರ ದಂಡೇ ಮೇಳೈಸಿರುವ ರತ್ನನ್ ಪ್ರಪಂಚ: ಅಮೆಜಾನ್ ಪ್ರೈಮ್ ನಲ್ಲಿ ಅಕ್ಟೋಬರ್ 22ರಂದು ತೆರೆಗೆ
ಕನ್ನಡದ ಖ್ಯಾತ ಹಿರಿಯ ನಟಿ ಉಮಾಶ್ರೀ ಹಲವು ವರ್ಷಗಳ ನಂತರ ಈ ಸಿನಿಮಾ ಮೂಲಕ ಮತ್ತೆ ಬಣ್ಣ ಹಚ್ಚಿರುವುದು ವಿಶೇಷ. ಅವರು ನಾಯಕ ನಟ ಧನಂಜಯ ಅವರ ತಾಯಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಡಾಲಿ ಧನಂಜಯ ರತ್ನನ್ ಪ್ರಪಂಚ ಸಿನಿಮಾಗೆ ಪವರ್ ಪುನೀತ್ ರಾಜಕುಮಾರ್ 'ಗಿಚ್ಚಿ ಗಿಲಿಗಿಲಿ'!
ಗಿಚ್ಚಿ ಗಿಲಿಗಿಲಿ ಎನ್ನುವ ಹಾಡು ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಹಾಗೂ ಪುನೀತ್ ರಾಜಕುಮಾರ್ ದನಿಯಲ್ಲಿ ವಿಶಿಷ್ಟವಾಗಿ ಮೂಡಿಬಂದಿದೆ.

ಡಾಲಿ ಧನಂಜಯ್ ನಟನೆಯ ರತ್ನನ್ ಪ್ರಪಂಚ, ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ
ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ. ಧನಂಜಯ್ ಹಾಗೂ ರೆಬಾ ಮೋನಿಕಾ ಜಾನ್ ಅವರು ರತ್ನಾಕರ ಹಾಗೂ ಮಯೂರಿ ಪಾತ್ರದಲ್ಲಿ ನಟಿಸಿದ್ದಾರೆ.

ರೋಹಿತ್ ಪದಕಿ ನಿರ್ದೇಶನದಲ್ಲಿ ರಿಷಬ್ ಶೆಟ್ಟಿ!
ಬೆಲ್ ಬಾಟಂ ಚಿತ್ರದ ಹಿಟ್ ನಂತರ ರಿಷಬ್ ಶೆಟ್ಟಿ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ದಯವಿಟ್ಟು ಗಮನಿಸಿ ಚಿತ್ರದ ನಿರ್ದೇಶಕ ರೋಹಿತ್ ಪದಕಿ ನಿರ್ದೇಶನದ ಚಿತ್ರದಲ್ಲಿ ನಟಿಸುವುದಾಗಿ ಹೇಳಿದ್ದಾರೆ.

