ಸಿನಿಮಾ ಸುದ್ದಿ

ಕೆ.ಆರ್.ಜಿ ಸ್ಟುಡಿಯೋ ನಿರ್ಮಾಣದ 'ಉತ್ತರಕಾಂಡ'ಕ್ಕೆ ರೋಹಿತ್ ಪದಕಿ ನಿರ್ದೇಶನ

ಕೆ.ಆರ್.ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಿನಿಮಾವೊಂದು ಘೋಷಣೆ ಮಾಡಿದ್ದು, ಈ ಚಿತ್ರಕ್ಕೆ ‘ಉತ್ತರಕಾಂಡ’ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ರತ್ನನ್ ಪ್ರಪಂಚ ನಿರ್ದೇಶಕ ರೋಹಿತ್ ಪದಕಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಕೆ.ಆರ್.ಜಿ ಸ್ಟುಡಿಯೋ ನಿರ್ಮಾಣದ 'ಉತ್ತರಕಾಂಡ'ಕ್ಕೆ ರೋಹಿತ್ ಪದಕಿ ನಿರ್ದೇಶನ
ರೋಹಿತ್ ಪದಕಿ
Published On :

ಕೆ.ಆರ್.ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಿನಿಮಾವೊಂದು ಘೋಷಣೆ ಮಾಡಿದ್ದು, ಈ ಚಿತ್ರಕ್ಕೆ ‘ಉತ್ತರಕಾಂಡ’ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ರತ್ನನ್ ಪ್ರಪಂಚ ನಿರ್ದೇಶಕ ರೋಹಿತ್ ಪದಕಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಜನವರಿ 2023ರಿಂದ ಈ ಸಿನಿಮಾ ಶುರುವಾಗಲಿದೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ನಿರ್ಮಿಸುತ್ತಿರುವ ಉತ್ತರಕಾಂಡವು ಉತ್ತರದ ದರೋಡೆಕೋರರ ಬಗ್ಗೆ ಬರೆಯಲಾಗಿದೆ. ಸಿನಿಮಾ ಟೈಟಲ್ ಮತ್ತು ಡೈರೆಕ್ಟರ್ ಬಗ್ಗೆ ನಿರ್ಮಾಪಕರು ಮಾಹಿತಿ ನೀಡಿದ್ದಾರೆ. 2023ರ ಜನವರಿಯಿಂದ  ಶೂಟಿಂಗ್ ಆರಂಭವಾಗಲಿದೆ.

ರೋಹಿತ್ ಪದಕಿ ಅವರ ಹಿಂದಿನ ಚಿತ್ರವೂ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣಗೊಂಡಿದೆ. ಹೊಯ್ಸಳ, ಧನಂಜಯ್ ಜೊತೆಗಿನ ಎರಡನೇ ಸಿನಿಮಾ ಕೂಡ ಬೆಳಗಾವಿಯಲ್ಲಿ ಸೆಟ್ಟೇರಿದೆ. ಉತ್ತರಕಾಂಡ ತಂಡವು ಇನ್ನೂ ಪ್ರಮುಖ ಪಾತ್ರವನ್ನು ಅಂತಿಮಗೊಳಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.