road accident

ಕೊಪ್ಪಳ: ಟಾಟಾ ಏಸ್ ಗೆ ಪಲ್ಸರ್ ಬೈಕ್ ಡಿಕ್ಕಿ; ಮೂವರು ದುರ್ಮರಣ
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಬಳಿ ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಪಲ್ಸರ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ನಡೆದಿದೆ.

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!
ತಪ್ಪಾದ ವಿವರವಾದ ಯೋಜನಾ ವರದಿಗಳನ್ನು (DPR) ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು' ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರ: ಈಶಾ ಆದಿಯೋಗಿ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಅಪಘಾತ; ಯುವಕ, ಯುವತಿ ದುರ್ಮರಣ
ಈಶಾ ಆದಿ ಯೋಗಿ ದರ್ಶನ ಪಡೆದು ಬೈಕ್ ನಲ್ಲಿ ಹಿಂತಿರುಗುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕ, ಯುವತಿ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಲಿಂಗಶೆಟ್ಟಿಪುರ ಗೇಟ್ ಬಳಿ ಲಾರಿ ಡಿಕ್ಕಿಯಾಗಿತ್ತು.

ಮಂಗಳೂರಿನಲ್ಲಿ ಕಾರು ಡಿಕ್ಕಿ: ರಸ್ತೆ ಬದಿಯಲ್ಲಿ ನಿಂತಿದ್ದ ಪಾದಚಾರಿ ಸ್ಥಿತಿ ಗಂಭೀರ
ಭಾರಿ ವಾಹನ ಸಂಚಾರದ ನಡುವೆ ತಲಪಾಡಿಯಲ್ಲಿ ಶರಣಪ್ಪ ಅವರು ಮತ್ತಿಬ್ಬರೊಂದಿಗೆ ರಸ್ತೆ ವಿಭಜಕದ ಬಳಿ ನಿಂತು ಮಾತನಾಡುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್‌ಗಳಿಗೆ ಟ್ರಕ್ ಡಿಕ್ಕಿ: 24 ವರ್ಷದ ಮುಂಬೈ ಮಹಿಳಾ ಬೈಕರ್ ದುರಂತ ಸಾವು; Riddhi Thakkar ಕೊನೆಯ ಪೋಸ್ಟ್ ವೈರಲ್!
ಭೀಕರ ರಸ್ತೆ ಅಪಘಾತದಲ್ಲಿ ಮುಂಬೈನ 24 ವರ್ಷದ ಬೈಕರ್ ರಿದ್ಧಿ ದಿವ್ಯೇಶ್ ಥಕ್ಕರ್ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಿಂದ ಛತ್ತೀಸ್‌ಗಢದ ಬಸ್ತಾರ್‌ಗೆ ಪ್ರಯಾಣಿಸುತ್ತಿದ್ದಾಗ ಟ್ರಕ್ ವೊಂದು ಡಿಕ್ಕಿ ಹೊಡೆದಿದೆ.

ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ: ಕರ್ನಾಟಕದ 6 ಕಾರ್ಮಿಕರು ಸೇರಿ 9 ಮಂದಿ ದುರ್ಮರಣ
ಸಂಗಾರೆಡ್ಡಿ ಜಿಲ್ಲೆಯ ಮೊಗ್ಡಂಪಲ್ಲಿ ಮಂಡಲದ ಸತ್ವಾರ್ ಗ್ರಾಮದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 65 ರಲ್ಲಿ ಗಂಭೀರ ಅಪಘಾತ ಸಂಭವಿಸಿದೆ. ತೈಲ ಟ್ಯಾಂಕರ್ ಆಟೋಗೆ ಡಿಕ್ಕಿ ಹೊಡೆದು ಆರು ಜನರು ಸಾವನ್ನಪ್ಪಿದ್ದಾರೆ. ಇತರ ಮೂವರು ಗಾಯಗೊಂಡಿದ್ದಾರೆ.

ಬೆಳಗಾವಿ: KSRTC ಬಸ್-ಬೈಕ್ ಡಿಕ್ಕಿ; ಬಾಲಕಿ ಸೇರಿ ಮೂವರು ಸಾವು!
ಗೋಕಾಕ ತಾಲೂಕಿನ ಕೊನ್ನೂರು ಪಟ್ಟಣದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್: ಅಪ್ರಾಪ್ತನ ಚಾರು ಚಾಲನೆ ವೇಳೆ ಭೀಕರ ಅಪಘಾತ; 7 ಬೈಕ್ ಜಖಂ, ವೃದ್ಧ ವ್ಯಕ್ತಿಗೆ ತೀವ್ರ ಗಾಯ!
ಘಟನೆಯ ಸಿಸಿಟಿವಿ ದೃಶ್ಯಗಳಲ್ಲಿ ಅಪ್ರಾಪ್ತ ವಯಸ್ಕ ಕಾರಿನ ನಿಯಂತ್ರಣ ತಪ್ಪಿ ನಿಂತಿದ್ದ ದ್ವಿಚಕ್ರ ವಾಹನಗಳ ಸಾಲಿಗೆ ಡಿಕ್ಕಿ ಹೊಡೆದು, ನಂತರ ಇಬ್ಬರು ಸಹೋದರರನ್ನು ಕರೆದೊಯ್ಯುತ್ತಿದ್ದ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿರುವುದು ಕಂಡುಬಂದಿದೆ.

ಹಿಮಾಚಲದಲ್ಲಿ ಭೀಕರ ಅಪಘಾತ: ಭೂಕುಸಿತದ ವೇಳೆ ಟಾಟಾ ಸುಮೋ ಮೇಲೆ ಬಂಡೆ ಬಿದ್ದು 13 ಮಂದಿ ದುರ್ಮರಣ! Video
ಹಿಮಾಚಲ ಪ್ರದೇಶದ ಬುಡಕಟ್ಟು ಜಿಲ್ಲೆಯ ಲಹೌಲ್-ಸ್ಪಿಟಿಯಲ್ಲಿ ಶುಕ್ರವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹದಿಮೂರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಧುನಾಲಾ-ರಾಹೌಲಿ ಬಳಿ ಬೆಟ್ಟದಿಂದ ಇದ್ದಕ್ಕಿದ್ದಂತೆ ಬೃಹತ್ ಬಂಡೆಗಳು ಟಾಟಾ ಸುಮೋ ಮೇಲೆ ಬಿದ್ದಿದ್ದವು.

